ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಗ್ಯಾಂಬಲೂರು

Published : 17 ಜೂನ್ 2024, 23:30 IST
Last Updated : 17 ಜೂನ್ 2024, 23:30 IST
ಫಾಲೋ ಮಾಡಿ
Comments

‘ರಾಜಧಾನೀಲಿ ದಿನದಿನಕ್ಕೂ ಕೊಲೆ, ಸುಲಿಗೆ, ದಬಾವಣೆ, ಹಲ್ಲೆ, ಅಕ್ರಮ, ಲಂಚ ಪ್ರಕರಣ, ಬುಕ್ಕಿಗಳ ಗ್ಯಾಂಬ್ಲಿಂಗ್ ಜಾಸ್ತಿಯಾಯ್ತಾ ಅದೆ’ ಅಂತ ಕೊರಗಿದೆ.

‘ಅದೀಯೇ! ನಿಗಮ, ಮಂಡಳಿಗಳ ಕಾಸು ಹೆಂಡದಂಗಡಿ, ಚಿನ್ನದ ಅಂಗಡಿ ಸೇರ್ಯದಂತೆ. ನಿಗಮದ ಕಾಸು ಯಾರ ಮನೇಲೋ ಸಿಕ್ತಂತೆ. ಇದು ಯುಕ್ತಿ ಯೋಜನೆ ಇರಬಕು’ ಯಂಟಪ್ಪಣ್ಣ ಬೆರಗಾಯ್ತು.

‘ಜನ ಮಳ್ಳಿಯಂಗಿದ್ರೆ ಇನ್ನೇನಾದದು? ಗುಂಡಿ ಬಿದ್ದು ಗಟಾರಾಗಿರ ರೋಡು ಬಿಬಿಎಂಪಿಯೋರು ಮುಚ್ತಿಲ್ಲ. ಜನ ಮಾತ್ರ ‘ಹಳೆ ಕಲ್ಲು, ಹೊಸ ಬಿಲ್ಲು’ ಅಂತ ನಗಾಡಿಕ್ಯಂಡು ಸುಮ್ಮಗಾಯ್ತರೆ. ಪಾಪದ ಪೋಲೀಸಿನೋರು ಸವಾರರ ಕಷ್ಟ ನೋಡನಾರದೇ ತ್ಯಾಪೆ ಹಾಕಬೇಕಾಗ್ಯದೆ. ಅಧಿಕಾರಸ್ಥರು ಜನದ ಕಷ್ಟ ನೀಸದು ಬುಟ್ಟು ಪೆಟ್ರೋಲ್-ಡೀಸೆಲ್ ರೇಟ್ ಏರಿಸೋ ಕ್ಯಾಮೆ ಮಾಡ್ತಾವ್ರೆ’ ಚಂದ್ರು ಗರಂ ಆದ.

‘ಮೊನ್ನೆ ‘ಜನ ಯಂಗೆ ಎದ್ದೇಳಬಕು’ ಅಂತ ಕರೆ ಕೊಟ್ಟವ್ರೆ ರಾಜಕಾರಣಿಗಳು. ಜನ ಮಾತ್ರ ‘ಟೈಂ ವೇಸ್ಟು. ನೋಡನ ತಡೀರಿ ಆಮೇಲೆ. ಈಗ ಆಪೀಸಿಗೋಗ್ಬಕು’ ಅಂತ ಹಂಗೆ ಕುಕಂತರೆ’ ಯಂಟಪ್ಪಣ್ಣ ಹೇಳಿತು.

‘ರಾಜಕಾರಣಿಗಳ ಗ್ಯಪ್ತಿಗೆ ತಕ್ಕಬ್ಯಾಡ ಕನೋ. ನೆನೆಸಿಗ್ಯಂಡೇಟಿಗೆ ‘ಹೋದಾ ರಾಜಕಾರಣಿ ಅಂದ್ರೆ ಇಲ್ಲ ಕನಣೈ ಬಂದೆ ವಾಟ್ಸಪ್ ಗವಾಕ್ಷೀಲಿ’ ಅಂತ ಪ್ರತ್ಯಕ್ಷ ಆಯ್ತವೆ’ ಅಂತ ತುರೇಮಣೆ ಚುಚ್ಚಿದರು.

‘ಸರಿ ಕಾ ಬುಡಿ ಸಾ. ಇಂಥಾ ಅವಕಾಶವಾದಿ ರಾಜಕೀಯ ದೌರ್ಜನ್ಯದಿಂದ ಪಾರಾಗದು ಯಂಗೇ ಅಂತ?’ ಪರಿಹಾರ ಕೇಳಿದೆ.

‘ರಾಜಕೀಯದವುಕ್ಕೆ ಮೂರುಭಂಗದ ಭಯವೇ ಇಲ್ಲಾಗ್ಯದೆ’ ಯಂಟಪ್ಪಣ್ಣನಿಗೆ ಬೇಜಾರಾಯ್ತು.

‘ಏನಾದ್ರೂ ಉಪಾಯ ವೇದಾಂತ ಹೇಳಿ ಸಾ’ ಅಂತ ಗೋಗರೆದೆ.

‘ಇದು ಕಲಿಗಾಲ ಕಯ್ಯಾ. ಕರ್ಮಕ್ಕೆ ಬಲ ಜಾಸ್ತಿ. ಅವಸಾನ ಪರ್ವದಲ್ಲಿ ಕರ್ಮಗೇಡಿಗಳಿಗೇ ಭವಿಷ್ಯ ಅಂತ ಹೇಳ್ಯದೆ. ಇದು ಹಿಂಗೇ ನಡೀತಿದ್ರೆ ಬೆಂಗಳೂರು ಹೆಸರನ್ನ ಗ್ಯಾಂಬಲೂರು ಅಂತ ಬದ್ಲಾಸಬೇಕಾಯ್ತದೆ’ ತುರೇಮಣೆ ಉವಾಚ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT