ಕೇಂದ್ರ ಹೂಡುವ ಬಂಡವಾಳದಲ್ಲಿ ರಾಜ್ಯಕ್ಕೆ ಮಹದನ್ಯಾಯ

ಬೆಂಗಳೂರು, ಜು. 13– ಕಳೆದ ಹದಿನೇಳು ವರ್ಷಗಳಿಂದ ಕೇಂದ್ರ ಸರಕಾರ ಹೂಡುವ ಬಂಡವಾಳದ ವಿಷಯದಲ್ಲಿ ತನಗೆ ಆಗಿರುವ ಮಹದನ್ಯಾಯದ ಬಗ್ಗೆ ಮೈಸೂರು ತೀವ್ರವಾಗಿ ಪ್ರತಿಭಟಿಸಿದೆ.

ನಾಲ್ಕನೆಯ ಯೋಜನೆಯಲ್ಲಿ ಕೇಂದ್ರದ ನೆರವು ನೀತಿ ನಿರ್ಧಾರದ ಬಗ್ಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಇಂದು ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಆಂಧ್ರವೂ ತನಗಾಗಿರುವ ಅನ್ಯಾಯವನ್ನು ಒತ್ತಿಹೇಳಿತೆಂದು ತಿಳಿಸಿದರು.

ಕೃಷ್ಣಾ–ಗೋದಾವರಿ ವಿವಾದ: ಪಂಚಾಯ್ತಿ ಮಂಡಲಿ ರಚನೆ ಸುಗ್ರೀವಾಜ್ಞೆಗೆ ವೀರೇಂದ್ರ ಒತ್ತಾಯ

ಬೆಂಗಳೂರು ಜು. 13– ಕೃಷ್ಣಾ– ಗೋದಾವರಿ ನೀರಿನ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಪಂಚಾಯಿತಿದಾರರ ಮಂಡಲಿ ರಚನೆ ಬಗ್ಗೆ ಮುಂದಿನ ಪಾರ್ಲಿಮೆಂಟ್ ಅಧಿವೇಶನದಲ್ಲಿ ಶಾಸನ ತಿದ್ದುಪಡಿ ಮಸೂದೆ ಬರಲಿದೆ.

ಚವಾಣ್ ಜೊತೆ ಸಾದಿಕ್ ಮಾತುಕತೆ

ನವದೆಹಲಿ, ಜು. 13– ಕಾಶ್ಮೀರ ಮುಖ್ಯಮಂತ್ರಿ ಶ್ರೀ ಬಿ.ಎಂ. ಸಾದಿಕ್ ಅವರು ಇಂದು ಕೇಂದ್ರ ಗೃಹಸಚಿವ ಶ್ರೀ ವೈ.ಬಿ. ಚವಾಣ್ ಅವರನ್ನು ಭೇಟಿ ಮಾಡಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡಬೇಕಾದ ನೆರವಿನ ಬಗ್ಗೆ ಚರ್ಚಿಸಿದರು. ತಮ್ಮ ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿಯನ್ನು ಶ್ರೀ ಸಾದಿಕ್ ವಿವರಿಸಿದರು.

ನಗರದಲ್ಲಿ ರೈಲ್ವೆ ಪ್ರಾದೇಶಿಕ ಸೈನ್ಯ ಜಮಾವಣೆ ಆಜ್ಞೆ

ಬೆಂಗಳೂರು, ಜು. 13– ಫೈರ್ಮನ್ಗಳ ಪ್ರಸಕ್ತ ಮುಷ್ಕರದಿಂದ ತೊಂದರೆಗೆ ಈಡಾಗಿರುವ ದಕ್ಷಿಣ ರೈಲ್ವೆಯ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಣೆಗಾಗಿ ಆ ರೈಲ್ವೆ ವಿಭಾಗಕ್ಕೆ ಸೇರಿದ ಪ್ರಾದೇಶಿಕ ಸೈನ್ಯ ಘಟಕದ ಸಿಬ್ಬಂದಿ ಮುಂದಿನ 48 ಗಂಟೆಗಳೊಳಗೆ ಬೆಂಗಳೂರಿನಲ್ಲಿ ಜಮಾಯಿಸುವಂತೆ ಆಜ್ಞೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.