ಕನ್ನಡಿಗರಿಗೆ ಮಹಾಜನ್ ವರದಿಯೊಂದೇ ಒಪ್ಪಿಗೆ
ನವದೆಹಲಿ, ಆ. 19– ಮೈಸೂರು– ಮಹಾರಾಷ್ಟ್ರ ಗಡಿ ವಿಷಯದಲ್ಲಿ ಮಹಾಜನ್ ಆಯೋಗದ ವರದಿಯನ್ನು ಕಾರ್ಯಗತಗೊಳಿಸಬೇಕೆಂದು ಮೈಸೂರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಇಂದು ಒತ್ತಾಯ ಸಲ್ಲಿಸಿ, ಬೇರಾವುದೇ ಮಾರ್ಗವು ತಮ್ಮ ರಾಜ್ಯದ ಜನತೆಗೆ ಸಮ್ಮತಾರ್ಹವಲ್ಲವೆಂದು ಸ್ಪಷ್ಟಪಡಿಸಿದರು.

ಆಡಳಿತ ಕಾಂಗ್ರೆಸ್ ಅಧ್ಯಕ್ಷಶ್ರೀ ಜಗಜೀವನರಾಂ ಅವರೂ ಹಾಜರಿದ್ದ ಶ್ರೀಮತಿ ಗಾಂಧಿಯವರ ಮುಂದೆ ‘ನಿಮಗೆಲ್ಲ ಚೆನ್ನಾಗಿ ಗೊತ್ತಿರುವ ನನ್ನ ವಾದ ಮಂಡಿಸಿದೆ’ ಎಂದು ಶ್ರೀ ಪಾಟೀಲರು ನಂತರ ಪತ್ರಕರ್ತರಿಗೆ ತಿಳಿಸಿದರು.

ವಿವಾದಗ್ರಸ್ತ ಪ್ರದೇಶಗಳಲ್ಲಿ ಜನಮತ ಸಂಗ್ರಹ, ಹೊಸ ನ್ಯಾಯಮಂಡಲಿ ನೇಮಕ, ನಿರ್ಧಾರಕ್ಕಾಗಿ ಸಂಸತ್ತಿಗೆ ವಿವಾದ ಒಪ್ಪಿಸುವುದೇ ಮೊದಲಾದ ಕೆಲವು ಸಲಹೆಗಳನ್ನು ಪ್ರಧಾನಿ ಮತ್ತು ರಕ್ಷಣಾ ಸಚಿವರು ಮೊದಲು ಪ್ರಸ್ತಾಪಿಸಿದರೆಂದು ಹೇಳಿದರು.

ಶಸ್ತ್ರಾಸ್ತ್ರ ಉತ್ಪಾದನಾ ಮಂಡಲಿ ರಚನೆ ಪರಿಶೀಲನೆಯಲ್ಲಿ
ನವದೆಹಲಿ, ಆ. 19– ಆರ್ಡ್ನೆನ್ಸ್ ಕಾರ್ಖಾನೆಗಳ ಆಡಳಿತ ಉತ್ತಮಪಡಿಸುವುದಕ್ಕಾಗಿ ಉನ್ನತ ಮಟ್ಟದ ಆರ್ಡ್ನೆನ್ಸ್ ಉತ್ಪಾದನಾ ಮಂಡಲಿಯೊಂದನ್ನು ರಚಿಸಬೇಕೆಂಬ ಸಲಹೆ ಸರ್ಕಾರದ ಪರಿಶೀಲನೆಯಲ್ಲಿದೆಯೆಂದು ಲೋಕಸಭೆಯಲ್ಲಿ ಇಂದು ರಕ್ಷಣಾ ಉತ್ಪಾದನಾ ಸಚಿವ ಪಿ.ಸಿ.ಸೇಠಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.