ರಣಜೀ ವಿಜಯಿಗಳಿಗೆ ವಿರೋಚಿತ ಜಯ

ಬೆಂಗಳೂರು, ಏ.1– ರಣಜೀ ಟ್ರೋಫಿ ಕ್ರಿಜೆಟ್ ಪ್ರಶಸ್ತಿಯನ್ನು ಪ್ರಪ್ರಥಮ ಬಾರಿಗೆ ಗೆದ್ದು ತಂದು ಕರ್ನಾಟಕದ ಜನಕೋಟಿಯನ್ನು ಹರ್ಷಸಾಗರದಲ್ಲಿ ತೇಲಿಸಿರುವ ರಾಜ್ಯ ಕ್ರಿಕೆಟ್ ತಂಡಕ್ಕೆ ನಗರ ಇಂದು ವಿರೋಚಿತ ಸ್ವಾಗತ ನೀಡಿತು.

‘ಶ್ರದ್ಧಾಪೂರ್ಣ ಶ್ರಮದಿಂದ ನೀವು ಗಳಿಸಿದ ಗೆಲುವು ಕನ್ನಡ ಜನಕೋಟಿಗೆ ಅಮಿತಾನಂದ ಉಂಟು ಮಾಡಿರುವುದಲ್ಲದೇ ಒಂದು ಶೋಭೆಯ ಅಧ್ಯಾಯವನ್ನೇ ಆರಂಭಿಸಿದೆ. ಇನ್ನೂ ಮಿಗಿಲಾದ ಖ್ಯಾತಿಯ ದಾರಿಯಲ್ಲಿ ಮುನ್ನಡೆಯುವಿರೆಂಬ ನಂಬಿಕೆ ನಮಗಿದೆ’ ಎಂದು ರಾಜ್ಯ ಪತ್ರಕರ್ತರ ಸಂಘ ಇಂದು ಸಂಜೆ ವಿಜಯೀ ಟೀಮಿನ ಗೌರವಾರ್ಥ ಏರ್ಪಡಿಸಿದ್ದ ಸರಳ ಸುಂದರ ಸನ್ಮಾನ ಸಮಾರಂಭದಲ್ಲಿ ಅರ್ಪಿಸಿದ ಆದರದ ಅಭಿನಂದನಾ ಪತ್ರದಲ್ಲಿ ವಿವರಿಸಿದೆ.

ಏಪ್ರಿಲ್ ತಂದ ವರ್ಷ ಹರ್ಷ

ಬೆಂಗಳೂರು, ಏ. 1– ಬೆಂಗಳೂರಿನಲ್ಲಿ ಸೆಖೆ ಆರಂಭವಾಗಿ ಕೆಲ ದಿನಗಳಾದವು. ಸಂಜೆ ನಗರದಲ್ಲಿ ನಾನಾ ಪ್ರದೇಶಗಳಲ್ಲಿ ನಾನಾ ಪ್ರಮಾಣಗಳಲ್ಲಿ ಬಿದ್ದರೂ ಆದ ಮೊದಲ ಮಳೆಯನ್ನು ಜನ ಸ್ವಾಗತಿಸಿದರು.

ಬಿಸಿಲಿನ ಬೇಗೆಗೆ ಸಿಕ್ಕಿದ್ದ ಬೆಂಗಳೂರು ಜನತೆಗೆ ಸೋಮವಾರ ಸಂಜೆ ಬಿದ್ದ ಮಳೆಯು ತಂಪಿನ ಪರಿಹಾರ ತಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.