ಮೈಸೂರು, ಅ. 26– ನಿನ್ನೆ ಕಾರಾಪುರ ಕಾಡಿನಲ್ಲಿ ಆನೆ ಮೇಲೆ ಹೌಡಾದಲ್ಲಿ ಕುಳಿತು ಸಲಗವೊಂದರ ಬೇಟೆಯಾಡುತ್ತಿದ್ದಾಗ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ರವರು ಕೆಳಕ್ಕೆ ಹಾರಿ ಅವರ ಬಲಗಾಲಿನ ಎರಡು ಕಾಲು ಬೆರಳುಗಳ ಮೂಳೆ ಮುರಿದಿದೆ.

ಈ ಸಲಗದಿಂದ ಸಮೀಪದ ಗ್ರಾಮಸ್ಥರಿಗೆ ತುಂಬ ತೊಂದರೆಯಾಗಿತ್ತೆಂದೂ ಮಹಾರಾಜರು ಅದರ ಬೇಟೆಗೆ ಹೋದಾಗ ಅವರು ಕುಳಿತಿದ್ದ ಹೌಡಾದ ಹಗ್ಗದ ಕಟ್ಟುಗಳು ಸಡಿಲಗೊಂಡು ಹೌಡಾವು ವಾಲಿತೆಂದೂ ಆಗ ಅವರು ಕೆಳಕ್ಕೆ ಹಾರಿದರೆಂದು ಗೊತ್ತಾಗಿದೆ.

ಇಂದು ಮಧ್ಯಾಹ್ನ ವೈದ್ಯರು ಅವರ ಕಾಲು ಬೆರಳುಗಳನ್ನು ಪರೀಕ್ಷಿಸಿದರು. ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಅವರ ಎಕ್ಸ್ರೇ ತೆಗೆಯಲಾಯಿತು. ನೊಂದ ಕಾಲಿಗೆ ಪ್ಲಾಸ್ಟರ್ ಹಾಕಲಾಗಿದೆ.

ಆಸ್ಪತ್ರೆಯಿಂದ ಅವರು ಅರಮನೆಗೆ ಹಿಂತಿರುಗಿದ್ದಾರೆ. ಅವರು ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.