ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಜಯ ಗಳಿಸಿದೆ. ಮಹಾಘಟಬಂಧನ್ ಕೂಟವು ತೀವ್ರ ಸ್ಪರ್ಧೆಯೊಡ್ಡಿದೆ. ಅದೇನೇ ಇರಲಿ, ಗೆಲುವು ಗೆಲುವೇ ಆಗಿರುತ್ತದೆ, ನಿಜ. ಆದರೆ ಯಾವುದೇ ಅಲೆಯಿಲ್ಲದ ಚುನಾವಣೆಗೆ ಬಿಹಾರವು ಸಾಕ್ಷಿಯಾಗಿದೆ. ಈ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವು 1,57,01,226 ಮತಗಳನ್ನು ಮತ್ತು ಮಹಾಘಟಬಂಧನ್ ಕೂಟವು 1,56,88,458 ಮತಗಳನ್ನು ಪಡೆದಿವೆ. ಎನ್ಡಿಎ ಮೈತ್ರಿಕೂಟವು ತನ್ನ ಎದುರಾಳಿಗಿಂತ ಕೇವಲ 12,768 ಮತಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ಮೂರು ಕೋಟಿಗೂ ಹೆಚ್ಚು ಮತದಾನದಲ್ಲಿ ಈ ಸಂಖ್ಯೆಯ ಬಹುಮತ ತೀರಾ ಕಡಿಮೆ. ಶೇಕಡಾವಾರು ಮತದಾನವನ್ನು ತೆಗೆದುಕೊಂಡರೆ, ಎನ್ಡಿಎ ಮೈತ್ರಿಕೂಟವು 37.26ರಷ್ಟನ್ನೂ ಮಹಾಘಟಬಂಧನ್ ಕೂಟವು 37.23ರಷ್ಟನ್ನೂ ಪಡೆದಿದ್ದು ಶೇ 0.03ರಷ್ಟು ಮಾತ್ರ ಅಂತರವಿದೆ.

ಒಂದು ವರ್ಷದ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ತಾನು ಗಳಿಸಿದ ಮತಗಳಿಗಿಂತ ಈ ಚುನಾವಣೆಯಲ್ಲಿ ಶೇ 12ರಷ್ಟು ಕಡಿಮೆ ಮತಗಳನ್ನು ಗಳಿಸಿದೆ. ಈ ಅಂಕಿ ಅಂಶಗಳ ಕಟು ವಾಸ್ತವವು ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಯಾವುದೇ ಅಥವಾ ಯಾರದೇ ಅಲೆಯೂ ಇರಲಿಲ್ಲ ಎಂಬ ಸತ್ಯವನ್ನು ಸಾರುತ್ತದೆ. ಪ್ರಜಾಸತ್ತಾತ್ಮಕ ಸಮೀಪ ಸ್ಪರ್ಧೆಗೆ ಸಾಕ್ಷಿಯಾಗಿದೆ.

–ಬರಗೂರು ರಾಮಚಂದ್ರಪ್ಪ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.