2019ರಲ್ಲಿ ವಿಶ್ವದಲ್ಲಿ ಸುಮಾರು 93.1 ಕೋಟಿ ಟನ್‌ಗಳಷ್ಟು ಆಹಾರ ಪೋಲಾಗಿದೆ ಎಂಬ ಸುದ್ದಿ (ಪ್ರ.ವಾ., ಮಾರ್ಚ್ 5) ಓದಿ, ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎಂದು ಕಳವಳವಾಯಿತು. ಆಹಾರವನ್ನು ಹಸಿವಿಗಾಗಿ ಸೇವಿಸುವುದರ ವಿನಾ ಬೇರೆ ಯಾವುದೇ ರೂಪದಲ್ಲಿ ವ್ಯರ್ಥವಾಗದಂತೆ ಜಾಗ್ರತೆ ವಹಿಸುವುದು ಪ್ರತೀ ನಾಗರಿಕನ ಕರ್ತವ್ಯ. ಆದರೆ ಮನೆಗಳಲ್ಲಿ, ಸಭೆ ಸಮಾರಂಭಗಳಲ್ಲಿ ಆಹಾರವನ್ನು ವ್ಯರ್ಥ ಮಾಡುವುದು ಮಾತ್ರ ಎಗ್ಗಿಲ್ಲದೇ ಸಾಗಿದೆ. ಟಿ.ವಿಯ ರಿಯಾಲಿಟಿ ಷೋವೊಂದರಲ್ಲಿ ಇತ್ತೀಚೆಗೆ ಮೊಟ್ಟೆಗಳನ್ನು ಎಸೆದು ಪೋಲು ಮಾಡುತ್ತಿದ್ದುದನ್ನು ಕಂಡಾಗ, ಆಹಾರದ ಕುರಿತು ಕಾಳಜಿಯಿರುವವರ ಕರುಳು ಚುರುಕ್ ಎಂದಿರದೇ ಇರಲಾರದು.

ಆಹಾರದ ಕುರಿತು ಅರಿವು ಮೂಡಿಸಬೇಕಾಗಿರುವ ಮಾಧ್ಯಮಗಳು ಆಹಾರ ಪೋಲು ಮಾಡುವ ಚಟುವಟಿಕೆ ಗಳನ್ನು ಮನರಂಜನೆಗಾಗಿ ತೋರಿಸುವುದು ಎಷ್ಟು ಸರಿ? ಜನರ ಜೀವ ಉಳಿಸುವುದಕ್ಕಾಗಿ ಇರುವ ಆಹಾರವನ್ನು ವ್ಯರ್ಥ ಮಾಡಬಾರದೆಂಬ ಅರಿವು ಎಲ್ಲರಲ್ಲೂ ಮೂಡಬೇಕು.

–ಸಮುದ್ರವಳ್ಳಿ ವಾಸು, ಹಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.