ವಿಧಾನಪರಿಷತ್ ಉಪಸಭಾಪತಿಯಾಗಿದ್ದ ಧರ್ಮೇಗೌಡ ಅವರ ಅಕಾಲಿಕ ಮರಣ ಮತ್ತು ಆನಂತರದ ರಾಜಕೀಯ ವಾದ–ವಿವಾದಗಳನ್ನು ನೋಡಿದಾಗ, ಸಭಾಪತಿ ಮತ್ತು ಉಪಸಭಾಪತಿಯಂತಹ ಸಾಂವಿಧಾನಿಕ ಹುದ್ದೆಗಳಿಗೆ ರಾಜಕೀಯ ಪಕ್ಷಗಳಿಗೆ ಸೇರದೇ ಇರುವವರನ್ನು ನೇಮಿಸುವುದು ಸೂಕ್ತ ಎನಿಸುತ್ತಿದೆ.

ರಾಜಕೀಯ ಹಿನ್ನೆಲೆಯುಳ್ಳವರು ಎಷ್ಟೇ ಸಂಭಾವಿತರಾಗಿ, ಪಕ್ಷಪಾತ ತೋರದೆ ವರ್ತಿಸಿದರೂ ತಮ್ಮ ಪೂರ್ವಾಶ್ರಮದ ಪಕ್ಷದ ಕಡೆಗೆ ಸೌಮ್ಯ ಸ್ವಭಾವವನ್ನು ಹೊಂದಿರುವುದು ಮನುಷ್ಯಸಹಜ ಗುಣ. ಹೀಗಾಗಿ, ಅನಗತ್ಯವಾದ ಆಪಾದನೆಗಳಿಂದ ಮುಕ್ತರಾಗುವುದು ಅಸಾಧ್ಯ.

ರಾಜ್ಯಪಾಲರ ನೇಮಕದ ಮಾದರಿಯಲ್ಲಿ ಗಣ್ಯ ವ್ಯಕ್ತಿಗಳನ್ನು ನಾಮಕರಣ ಮಾಡುವ ಅಥವಾ ಉಪರಾಷ್ಟ್ರಪತಿ ಆಯ್ಕೆಯಂತೆ ನಿರ್ದಿಷ್ಟ ಅವಧಿಗೆ ಚುನಾಯಿಸುವ ಅಥವಾ ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ನೇಮಿಸುವ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡುವ ಪರಿಪಾಟ ಪ್ರಾರಂಭವಾದರೆ ಬಹಳಷ್ಟು ಗೊಂದಲಗಳು ಪರಿಹಾರವಾಗುತ್ತವೆ. ಇದರ ಬಗ್ಗೆ ಸವಿಸ್ತಾರವಾಗಿ ಮತ್ತು ಮುಕ್ತವಾಗಿ ಚರ್ಚೆ ಮಾಡಲು ಇದು ಸಕಾಲ.

-ಡಾ. ಕೆ.ಎಸ್.ಗಂಗಾಧರ, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.