‘ಮತ್ತೆ ಮತ್ತೆ ನೆನಪಾಗುವ ನೀರೊ’ ಎಂಬ ಎ.ನಾರಾಯಣ ಅವರ ಲೇಖನಕ್ಕೆ (ಪ್ರ.ವಾ., ಏ. 24) ಸಂಬಂಧಿಸಿದಂತೆ ಒಂದು ಪೂರಕ ಪ್ರತಿಕ್ರಿಯೆ: ಕೊರೊನಾದಿಂದ ಆಗುತ್ತಿರುವ ಅನಾಹುತಗಳಿಂದ ಬೇಸರಗೊಂಡು ಗೆಳೆಯರ ವಾಟ್ಸ್ಆ್ಯಪ್ ಗುಂಪಿನಲ್ಲೊಂದು ಸಂದೇಶ ಹಾಕಿದೆ: ‘ಕಳೆದ ವರ್ಷದ ಅನಾಹುತದಿಂದ ನಾವು ಯಾವ ಪಾಠವನ್ನೂ ಕಲಿಯಲಿಲ್ಲ. ಕಳೆದೊಂದು ವರ್ಷದಲ್ಲಿ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯದಲ್ಲಿ ಯಾವುದೇ ಮಹತ್ತರವಾದ ಬದಲಾವಣೆ ಆಗಿಲ್ಲ’. ತಕ್ಷಣವೇ ಸ್ನೇಹಿತನೊಬ್ಬನಿಂದ ಉತ್ತರ ಬಂತು: ‘ಕಳೆದ ಎಪ್ಪತ್ತು ವರ್ಷಗಳಿಂದ ಏನು ಮಾಡುತ್ತಿದ್ದರು? ಈ ಮೀಸಲಾತಿಯಿಂದ ಏನೂ ಮಾಡಲು ಸಾಧ್ಯವಾಗುವುದಿಲ್ಲ’.

ಇದನ್ನೂ ಓದಿ:ಎ. ನಾರಾಯಣ ಅಂಕಣ| ಮತ್ತೆ ಮತ್ತೆ ನೆನಪಾಗುವ ನೀರೊ

ವಿತಂಡವಾದವೆನಿಸಿದರೂ ಉತ್ತರಿಸಿದೆ: ‘ಪದವಿ ಪರೀಕ್ಷೆಯಲ್ಲಿ ಫೇಲಾದರೆ ಪದವಿ ಪರೀಕ್ಷೆಯ ತಯಾರಿ ಸರಿಯಾಗಿ ಮಾಡಲಿಲ್ಲವೆಂದು ಹೇಳಬೇಕೇ ಹೊರತು, ಪ್ರಾಥಮಿಕ ಶಾಲೆಯಲ್ಲಿ ಸರಿಯಾಗಿ ಓದಲಿಲ್ಲ ಎಂದಲ್ಲ’. ಮತ್ತೊಮ್ಮೆ ಉತ್ತರ ಬಂತು: ‘ಪ್ರಾಥಮಿಕ ಶಾಲೆಯಲ್ಲಿ ಸರಿಯಾಗಿ ಓದದಿದ್ದರೆ, ಪದವಿ ಓದಲು ನಾಲಾಯಕ್ಕು’. ಪ್ರಾಥಮಿಕ ಶಾಲೆಯಲ್ಲಿ ಸರಿಯಾಗಿ ಓದದೇ ಇದ್ದರೂ ಮುಂದೆ ಚೆನ್ನಾಗಿ ಓದಿ ಅಗಾಧವಾದುದನ್ನು ಸಾಧಿಸಿರುವವರು ಬೇಕಷ್ಟು ಮಂದಿ ಇರುವರೆಂದು ಹೇಳಿ ಸುಮ್ಮನಾದೆ.

ಈ ಘಟನೆಯ ಹಿನ್ನೆಲೆಯಲ್ಲಿ ಉಲ್ಲೇಖಿತ ಲೇಖನ ಓದಿದಾಗ ಅನ್ನಿಸಿತು: ‘ಪ್ರಾಯಶಃ ನಾಯಕನೊಬ್ಬ ಕಟ್ಟಬಹುದಾದ ಅತ್ಯಂತ ಬಲಿಷ್ಠ ಕೋಟೆಯೆಂದರೆ ಆತನ ಅಂಧ ಅನುಯಾಯಿಗಳು’.
-ಮಂಜುನಾಥ ಎಸ್.ಎಸ್.,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.