ಗೋಕರ್ಣದ ಮಹಾಗಣಪತಿ ಮತ್ತು ಈಶ್ವರ ದೇವಸ್ಥಾನಗಳಲ್ಲಿ ವಿದೇಶಿ ಪ್ರಜೆಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ಆದರೆ ವಿದೇಶಿಯರೆಂದರೆ ಯಾರು ಎಂದು ಸಮಂಜಸವಾಗಿ ನಿರ್ಧರಿಸಿದಂತಿಲ್ಲ.

ನಮ್ಮ ನೆರೆಹೊರೆಯ ದೇಶಗಳಲ್ಲದೆ ಮಾರಿಷಸ್, ಫಿಜಿ, ಗಯಾನಾ, ಟ್ರಿನಿಡಾಡ್ ಮುಂತಾದ ಹಲವು ದೇಶಗಳಲ್ಲಿಯೂ ಭಾರತ ಮೂಲದ ಹಿಂದೂ ಜನರಿದ್ದಾರೆ. ಅಷ್ಟೇ ಅಲ್ಲ, ಕೆಲವು ವಿದೇಶಿ ಜನರಲ್ಲೂ ಅಪ್ಪಟ ಹಿಂದೂ ಧರ್ಮದ ರೀತಿ, ರಿವಾಜುಗಳನ್ನು ಪಾಲಿಸುವವರಿದ್ದಾರೆ.

ಈ ಮಾತನ್ನು ಏಕೆ ಹೇಳಬೇಕಾಯಿತೆಂದರೆ, ಕೆಲವು ದಿನಗಳ ಹಿಂದೆ ಮಹಾ ಶಿವರಾತ್ರಿ ದಿನದಂದು ಗೋಕರ್ಣದಲ್ಲಿ ದೊಡ್ಡ ತೇರಿನ ಉತ್ಸವ ಇತ್ತು. ಅದನ್ನು ಏರಲು ಬಹಳಷ್ಟು ಜನ ಕಾದಿದ್ದರು. ಭಾರತೀಯ ಹೆಣ್ಣು ಮಕ್ಕಳು ಆಧುನಿಕ ಉಡುಪುಗಳನ್ನು ಧರಿಸಿಯೂ, ರಥವನ್ನು ಏರಿಳಿಯುತ್ತಿದ್ದರು.

ಆದರೆ, ಇದೇ ಸಾಲಿನಲ್ಲಿ ಅಪ್ಪಟ ಭಾರತೀಯ ವಸ್ತ್ರಸಂಹಿತೆ ಮತ್ತು ಪದ್ಧತಿಗಳನ್ನು ಅಳವಡಿಸಿಕೊಂಡು ಇಬ್ಬರು ಬಿಳಿಯ ವಿದೇಶಿ ಯುವತಿಯರೂ ನಿಂತಿದ್ದರು. ಕೊನೆಯ ಹಂತದಲ್ಲಿ, ಅಲ್ಲಿ ಕಾವಲು ನಿಂತಿದ್ದ ಭದ್ರತಾ ಸೇವಕ ರಥ ಏರಲು ಅವರಿಗೆ ಅನುಮತಿ ನಿರಾಕರಿಸಿದ. ಇದು ಸರಿಯೆಂದು ಕಂಡುಬರಲಿಲ್ಲ. ಆ ವಿದೇಶಿ ಹೆಣ್ಣು ಮಕ್ಕಳು ಏನನ್ನೂ ಮಾತನಾಡದೆ ಅಲ್ಲಿಂದ ತೆರಳಿದರು. ಆದರೆ ತುಂಬಾ ಹೊತ್ತಿನಿಂದ ಸರದಿಯಲ್ಲಿ ನಿಂತಿದ್ದ ಅವರಿಗೆ ಕೊನೇ ಕ್ಷಣದಲ್ಲಿ ಅನುಮತಿ ನಿರಾಕರಿಸಿದ್ದು ಎಷ್ಟು ಸಮಂಜಸ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.