ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯು ಗಜಪ್ರಸವಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಂಡು ಇದೀಗ ಪ್ರಾರಂಭವಾಗುತ್ತಿದೆ. ಇದು ರಾಜ್ಯದ ಶಿಕ್ಷಕರಿಗೆ ಸಂತಸದ ವಿಚಾರವೆನ್ನಬಹುದು. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪಿಎಸ್‌ಟಿ (ಪ್ರಾಥಮಿಕ ಶಾಲಾ ಶಿಕ್ಷಕರು– 1ರಿಂದ 5ನೇ ತರಗತಿ) ಮತ್ತು ಜಿಪಿಟಿ (ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು– 6ರಿಂದ 8ನೇ ತರಗತಿ) ಹುದ್ದೆಗಳೆಂದು ವಿಭಾಗ ಮಾಡಲಾಗಿದೆ. ಈ ಕಾರಣದಿಂದ ರಾಜ್ಯದ ಹಲವು ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಜಿಪಿಟಿ ಹುದ್ದೆಗಳೆಂದು ನಿಗದಿ ಮಾಡಲಾಗಿದೆ. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಿಪಿಟಿ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಬೇಕೆಂಬ ನಿಯಮ ತಂದು, ಈವರೆಗೂ ಈ ಹುದ್ದೆಗಳನ್ನು ಅವರಿಗಾಗಿ ಮೀಸಲಿಡಲಾಗಿತ್ತು.

ಆದರೆ ಪ್ರಸ್ತುತ ನಡೆಯಲಿರುವ ವರ್ಗಾವಣೆಯಲ್ಲಿ ಅಂತಹ ಜಿಪಿಟಿ ಹುದ್ದೆಗಳನ್ನು ಪ್ರಾಥಮಿಕ ಶಾಲಾ ಶಿಕ್ಷಕರು (ಪಿಎಸ್‌ಟಿ) ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಹೀಗೆ ಮಾಡುವುದರಿಂದ ಈಗಾಗಲೇ ಮೂಲ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆ ಶಾಲೆಯ ಹಿರಿಯ ಶಿಕ್ಷಕರು ಅಂದರೆ ಶಾಲೆಗೆ ಮೊದಲಿಗೆ ಹಾಜರಾಗಿರುವ ಶಿಕ್ಷಕರು ಬರಲಿರುವ ದಿನಗಳಲ್ಲಿ ಹೆಚ್ಚುವರಿಯಾಗಿ ಬೇರೆ ಬೇರೆ ತಾಲ್ಲೂಕುಗಳಿಗೆ ಹೋಗಬೇಕಾದ ಸಂಕಷ್ಟ ಬರುತ್ತದೆ. ಈ ಹಿನ್ನೆಲೆಯಲ್ಲಿ ಜಿಪಿಟಿ ಹುದ್ದೆಗಳನ್ನು ಜಿಪಿಟಿಯವರಿಗೇ ಮೀಸಲಿಡಲಿ ಅಥವಾ ಪ್ರಸ್ತುತ ಪಿಎಸ್‌ಟಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪದನಾಮಕರಣ ಮಾಡಲಿ. ಇವೆರಡೂ ಆಗದೆ ಜಿಪಿಟಿ ಹುದ್ದೆಗಳನ್ನು ಪಿಎಸ್‌ಟಿಯವರಿಗೆ ನೀಡುವುದು ಅವೈಜ್ಞಾನಿಕ ಕ್ರಮವಾಗುತ್ತದೆ.

- ಮಲ್ಲಪ್ಪ ಫ. ಕರೇಣ್ಣನವರ, ರಾಣೆಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.