ಬೆಂಗಳೂರಿನ ಹೆಚ್ಚು ಜನಭರಿತ ರಸ್ತೆಗಳಲ್ಲಿ ಕನಕಪುರ ರಸ್ತೆಯೂ ಒಂದು. ಹಾರೋಹಳ್ಳಿಯವರೆಗೂ ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಗೆ ಸೇರಿದೆ. ಬೆಳಿಗ್ಗೆ 8.30ರಿಂದ 10 ಗಂಟೆಯವರೆಗೆ ಈ ಭಾಗದಲ್ಲಿ ಮಾರ್ಕೆಟ್ ಮತ್ತು ಕೆಂಪೇಗೌಡ ಬಸ್ ನಿಲ್ದಾಣಗಳಿಗೆ ಹೋಗುವ ಬಸ್ ಗಳ ಸಂಖ್ಯೆ ವಿಪರೀತ ಕಡಿಮೆ ಇರುತ್ತದೆ. ಸಿಟಿಯ ಒಳ ಭಾಗಗಳಿಗೆ ಕೆಲಸಕ್ಕೆ, ಶಾಲಾ ಕಾಲೇಜುಗಳಿಗೆ ಬರಲು ಸುಮಾರು ಜನರು ಬಿಎಂಟಿಸಿಯನ್ನೇ ನೆಚ್ಚಿಕೊಂಡಿರುತ್ತಾರೆ. ಶಾಲಾ ಕಾಲೇಜುಗಳ ಹಾಗೂ ಆಫೀಸ್ ಸಮಯ ಒಂದೇ ಆಗಿರುವುದರಿಂದ ಬಸ್ ಗಳಲ್ಲಿ ವಿಪರೀತ ನೂಕುನುಗ್ಗಲು ಇರುತ್ತದೆ.

ಶಾಲಾ ಮಕ್ಕಳು, ವಯಸ್ಸಾದವರು, ಮಹಿಳೆಯರು ಬಸ್ ಹತ್ತುವುದೇ ಕಷ್ಟವಾಗುತ್ತದೆ. ಈ ಸಮಯದಲ್ಲಿ ಎಷ್ಟೇ ಬಸ್ ಬಂದರೂ ಸಾಲದೇನೋ ಅನ್ನಿಸುತ್ತದೆ. ಅಂಜನಾಪುರ, ಆವಲಹಳ್ಳಿಯಿಂದಲೂ ಈ ಸಮಯದಲ್ಲಿ ಮಾರ್ಕೆಟ್ ಮತ್ತು ಕೆಂಪೇಗೌಡ ಬಸ್ ನಿಲ್ದಾಣಗಳಿಗೆ ಬಸ್ ಗಳು ಕಡಿಮೆ. ಕೋಣನಕುಂಟೆ ಕ್ರಾಸ್ ಬಳಿ ಬಸ್ ಗಳಿಗಾಗಿ ನೂರಾರು ಜನ ಕಾಯುತ್ತಿರುತ್ತಾರೆ. ಬಸ್ ಬಂದಾಗ ಉಂಟಾಗುವ ಗಲಿಬಿಲಿಯನ್ನು ನೋಡಿದರೆ ಬಸ್ ಹತ್ತಲು ಭಯವಾಗುತ್ತದೆ. ಈ ಭಾಗದಿಂದ ಶಿವಾಜಿನಗರದ ಕಡೆಗೆ ಯಾವುದೇ ಬಸ್ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದ ಬೆಳಗಿನ ಹೊತ್ತು ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಿ, ಜನರಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.