ವಿಶ್ವಸಂಸ್ಥೆ – ಇದೊಂದು ಅಂತರರಾಷ್ಟ್ರೀಯ ಸಂಸ್ಥೆ(ಯುನೈಟೆಡ್ ನೇಷನ್ಸ್ ಆರ್ಗನೈಸೇಷನ್ಸ್). 1945 ಅಕ್ಟೋಬರ್ 24 ರಂದು ಸ್ಥಾಪಿತವಾಯಿತು. ಎರಡನೆಯ ಮಹಾಯುದ್ಧದ ಉಂಟಾದ ಘೋರ ಪರಿಣಾಮಗಳನ್ನು ಅರಿತು, ಮುಂದೆ ಯುದ್ಧಗಳಾಗುವುದನ್ನು ತಪ್ಪಿಸಲು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ ಕಾಪಾಡಿ, ಉತ್ತಮ ‘ಜಗತ್ತು‘ ನಿರ್ಮಿಸುವ ಉದ್ದೇಶದೊಂದಿಗೆ ಇದನ್ನು ಸ್ಥಾಪಿಸಲಾಯಿತು.

1945ರ ಏಪ್ರಿಲ್ 25ರಂದು ಅಮೆರಿಕದ ಸ್ಯಾನ್ ಫ್ರಾನ್ಸ್ಕೊ ನಗರದಲ್ಲಿ ನಡೆದ ಸಮ್ಮೇಳನ / ಸಮಾವೇಶದಲ್ಲಿ 50 ರಾಷ್ಟ್ರಗಳು ವಿಶ್ವಸಂಸ್ಥೆಯ ಚಾರ್ಟರ್ಗೆ (ಸನ್ನದು) ಸಹಿ ಹಾಕಿದವು. ಈ ಚಾರ್ಟರ್ನಲ್ಲಿದ್ದ ಅಂಶಗಳು 1945ರ ಅಕ್ಟೋಬರ್ 24ರಂದು ಜಾರಿಗೆ ಬಂದವು. ಅಂದು ಭಾರತ, ಫ್ರಾನ್ಸ್, ಬ್ರಿಟನ್, ಸೋವಿಯತ್ ಯೂನಿಯನ್, ಅಮೆರಿಕ ಮತ್ತಿತರ ರಾಷ್ಟ್ರಗಳು ಚಾರ್ಟರ್ಗೆ ಅನುಮೋದನೆ ನೀಡಿದವು.

ಅಮೆರಿಕಾದ ಅಧ್ಯಕ್ಷ ರೂಸ್ವೆಲ್ಟ್ರವರ ಸಲಹೆಯ ಮೇರೆಗೆ ವಿಶ್ವ ಸಂಸ್ಥೆ (United Nations ) ಎಂಬ ಹೆಸರನ್ನು ಅಂಗೀಕರಿಸಲಾಯಿತು. ಚಾರ್ಟರ್ನ ಪ್ರಸ್ತಾವನೆಯನ್ನು ಸಿದ್ಧಪಡಿಸಿದವರು ಫೀಲ್ಡ್ ಮಾರ್ಷಲ್ ಸ್ಮಟ್ಸ್.(Field Marshal Smuts ). ಮುಂದೆ ಹಂತ ಹಂತವಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಸದ್ಯ ವಿಶ್ವಸಂಸ್ಥೆಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 193.

ಹೀಗೆ ಸ್ಥಾಪನೆಯಾದ ವಿಶ್ವಸಂಸ್ಥೆಯು ಹಲವು ಉದ್ದೇಶಗಳನ್ನು ಹೊಂದಿದೆ. ಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ತತ್ವದ ಮೇಲೆ, ಪರಸ್ಪರ ಸಮಾನತೆ, ಸೌಹಾರ್ದ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾನವೀಯ ಸಮಸ್ಯೆಗಳನ್ನು ಬಗೆಹರಿಸುವುದು. ಎಲ್ಲ ಸಮಸ್ಯೆಗಳನ್ನೂ ಶಾಂತಿಯುತ ವಿಧಾನಗಳಲ್ಲೇ ಪರಿಹರಿಸಲು ಪ್ರಯತ್ನಿಸುವುದು. ಈ ಮೂಲಕ ಸಶಸ್ತ್ರ ಆಕ್ರಮಣವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲು ಪ್ರಯತ್ನಿಸುವುದು. ಸದಸ್ಯ ರಾಷ್ಟ್ರಗಳ ನಡುವೆ ಮೈತ್ರಿ ಪೂರ್ಣ ಸಂಬಂಧಗಳನ್ನು ಬೆಳೆಸುವುದು.. ಇತ್ಯಾದಿ.

ವಿಶ್ವ ಸಂಸ್ಥೆಯ ಆರು ಮುಖ್ಯ ಅಂಗಗಳಿವೆ

ಮಹಾಸಭೆ (General Assembly): ಇದು ವಿಶ್ವಸಂಸ್ಥೆಯ ಧೋರಣೆಯನ್ನು ರೂಪಿಸುವ ವ್ಯವಸ್ಥೆ. ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಮಹಾಸಭೆಯಲ್ಲಿರುತ್ತಾರೆ. ಪ್ರತಿಯೊಂದು ದೇಶಕ್ಕೂ ಒಂದು ಮತ ಇರುತ್ತದೆ. ಇದು ವರ್ಷಕ್ಕೆ ಒಮ್ಮೆ ಸಮಾವೇಶಗೊಳ್ಳುತ್ತದೆ. ಎಲ್ಲಾ ಮುಖ್ಯ ವಿಷಯಗಳು ಮೂರನೇ ಎರಡರ ಬಹುಮತದಿಂದ ಇತ್ಯರ್ಥಪಡಿಸಲಾಗುವುದು. ಇದು ವಿಶ್ವ ಸಂಸ್ಥೆಯ ಆಯವ್ಯಯವನ್ನು ನಿಗದಿ ಮಾಡುತ್ತದೆ.

ಭದ್ರತಾ ಮಂಡಳಿ (Security Council):- ಈ ಸಮಿತಿಯ ಶಿಫಾರಸ್ಸಿನ ಮೇಲೆ ಮಹಾಸಭೆಯ ಸದಸ್ಯರನ್ನು ಚುನಾಯಿಸುತ್ತದೆ. ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರನ್ನು ಆರಿಸಲಾಗುತ್ತದೆ ಮತ್ತು ಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುತ್ತದೆ.

ಆರ್ಥಿಕ ಮತ್ತು ಸಾಮಾಜಿಕ ಮಂಡಳಿ: ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ, ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯವನ್ನು ಕಾಪಾಡಲು ಇದು ಶ್ರಮಿಸುತ್ತದೆ.

ಧರ್ಮದರ್ಶಿತ್ವ ಮಂಡಳಿ (Trusteeship Council): ಇದು ವಿಶ್ವಸಂಸ್ಥೆಯ ಆಶ್ರಯದಲ್ಲಿರುವ ದೇಶಗಳ ಹಿತರಕ್ಷಣೆಗಾಗಿ ಶ್ರಮಿಸುವುದು ಈ ಮಂಡಳಿಯ ಉದ್ದೇಶ. ಆ ದೇಶಗಳು ಸ್ವತಂತ್ರ ಅಥವಾ ಸ್ವಾವಲಂಬಿಯಾಗಲು ಅಣಿಗೊಳಿಸುವುದು ಈ ಮಂಡಳಿ ನೆರವಾಗುತ್ತದೆ.

ಅಂತರಾಷ್ಟ್ರೀಯ ನ್ಯಾಯಾಲಯ(International Court of Justice) : ಇದು ಕಾನೂನಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ವಿವಾದಗಳನ್ನು ಇತ್ಯರ್ಥಪಡಿಸುತ್ತದೆ. ಎರಡು ರಾಷ್ಟ್ರಗಳ ನಡುವಣ ವಿವಾದವನ್ನೂ ಅದು ತೀರ್ಮಾನಿಸುತ್ತದೆ. ಇದು ವಿಶ್ವಸಂಸ್ಥೆಯ ಮುಖ್ಯ ನ್ಯಾಯಾಂಗ ವ್ಯವಸ್ಥೆಯಾಗಿದೆ. ಈ ನ್ಯಾಯಾಲಯವು ಹೇಗ್ನಲ್ಲಿದೆ.

ಸಚಿವಾಲಯ (Secretariat): ವಿಶ್ವಸಂಸ್ಥೆಯ ವಿವಿಧ ವಿಭಾಗಗಳಿಗೆ ಸಂಬಂಧಪಟ್ಟ ಆಡಳಿತಾತ್ಮಕ ವಿಷಯಗಳನ್ನು ಈ ಸಚಿವಾಲಯ ಪರಿಶೀಲಿಸುತ್ತದೆ. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರು ಈ ಸಚಿವಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುತ್ತಾರೆ. ಸಾಮಾನ್ಯಸಭೆಯ ಭದ್ರತಾ ಮಂಡಳಿಯ ಶಿಫಾರಸ್ಸಿನ ಮೇಲೆ ಐದು ವರ್ಷಗಳ ಅವಧಿಗಾಗಿ ಪ್ರಧಾನ ಕಾರ್ಯದರ್ಶಿಯವನರನ್ನು ಆಯ್ಕೆ ಮಾಡಲಾಗಿರುತ್ತದೆ. ಅವರನ್ನು ಪುನರ್ನೇಮಕ ಮಾಡಲು ಅವಕಾಶವಿದೆ. ವಿಶ್ವ ಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ್ನಲ್ಲಿದೆ. ವಿಶ್ವಸಂಸ್ಥೆ ಪ್ರತ್ಯೇಕ ಧ್ವಜವನ್ನು ಹೊಂದಿದೆ. ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು– ಇಂಗ್ಲಿಷ್, ಫ್ರೆಂಚ್, ಚೈನೀಸ್, ರಷ್ಯನ್, ಅರಾಬಿಕ್ ಮತ್ತು ಸ್ಪ್ಯಾನಿಶ್ . ಆದರೆ ಇಂಗ್ಲಿಷ್ ಮತ್ತು ಫ್ರೆಂಚ್ ಅದರ ಕಾರ್ಯ ಭಾಷೆಗಳು.

ಗ್ರೀನ್ ಎನರ್ಜಿಯ ಮಹಾ ಪರಿವರ್ತನೆಯ ನಾಯಕ ಭಾರತ ಆಗಲಿದೆ: ಮುಕೇಶ್ ಅಂಬಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.