ಶುಚಿತ್ವ ಮತ್ತು ಆರೋಗ್ಯ ರಕ್ಷಣೆ, ಹಣ ಸಂಪಾದನೆ, ಮಕ್ಕಳಿಗೆ ವಿದ್ಯಾಭ್ಯಾಸ ಈ ಎಲ್ಲವೂ ‘ಸ್ಯಾನಿಟರಿ ನ್ಯಾಪ್ಕಿನ್’ ಉತ್ಪಾದನೆಯಿಂದ ಸಾಧ್ಯ! ಮನೆಗಷ್ಟೇ ಸೀಮಿತಗೊಂಡಿದ್ದ ತನ್ನ ಈ ಕನಸನ್ನು ವಿಶ್ವಮಟ್ಟದಲ್ಲಿ ನಿಜವಾಗಿಸಿ, ಮಹಿಳೆಯರ ಪಾಲಿಗೆ ದೊಡ್ಡಣ್ಣನಂತೆ ಕಾಣುತ್ತಿರುವವರು ಅರುಣಾಚಲಂ ಮುರುಗನಂತಂ.
ಬಿಡುಗಡೆಗೆ ಸಜ್ಜಾಗಿರುವ, ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಪ್ಯಾಡ್ ಮ್ಯಾನ್’ ಸಿನಿಮಾದ ಸ್ಫೂರ್ತಿ, ಅಲ್ಲಿನ ಕಥೆ, ಸಾಧನೆ ಎಲ್ಲವೂ ಅರುಣಾಚಲಂ ಮುರುಗನಂತಂ ಅವರ ಜೀವನವೇ. ಮಹಿಳೆಗೆ ಅತ್ಯಗತ್ಯವಾದ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸಲು ಬಹುರಾಷ್ಟ್ರೀಯ ಕಂಪನಿಗಳು ₹3.5 ಕೋಟಿ ಮೊತ್ತದ ಯಂತ್ರಗಳನ್ನು ಬಳಸುವಾಗ, 65 ಸಾವಿರ ರೂಪಾಯಿಯ ಯಂತ್ರ ಸಿದ್ಧಪಡಿಸಿ ಅತಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ಉತ್ಪಾದಿಸಿ ಇಡೀ ಜಗತ್ತಿನ ಗಮನ ಸೆಳೆದವರು ಮುರುಗನಂತಂ.
ತನ್ನ ಪತ್ನಿ ಋತುಸ್ರಾವದ ಸಮಯದಲ್ಲಿ ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರಾರಂಭಿಸಿದ ಪ್ರಯತ್ನ ಹೊಸದೊಂದು ಯಂತ್ರದ ಅಭಿವೃದ್ಧಿಗೆ ನಾಂದಿಯಾಯಿತು. ಬದುಕಿನ ಅನಿವಾರ್ಯತೆಯಲ್ಲಿ ಒಂಬತ್ತನೇ ತರಗತಿಗೆ ವಿದ್ಯಾಭ್ಯಾಸಕ್ಕೆ ಪೂರ್ಣ ವಿರಾಮ ಹಾಕಿ, ತಮಿಳುನಾಡಿನ ಕೊಯಮತ್ತೂರಿನ ವೆಲ್ಡಿಂಗ್ ವರ್ಕ್‌ಶಾಪ್‍ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಅವರೇ ಸಿದ್ಧಪಡಿಸಿರುವ ಯಂತ್ರಗಳಿಂದ ಲಕ್ಷಾಂತರ ಜನರು ಉದ್ಯೋಗ ಪಡೆದಿದ್ದಾರೆ, ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ.
ಅನ್ವೇಷಣೆ ಮೆಚ್ಚಿದ ಐಐಟಿ
ನಾಲ್ಕು ಯಂತ್ರಗಳ ಮೂಲಕ ನಾಲ್ಕು ಹಂತಗಳಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ಮಾದರಿಯನ್ನು ಮದ್ರಾಸ್ ಐಐಟಿ ಕುತೂಹಲದಿಂದ ಸ್ವೀಕರಿಸಿ ಮೆಚ್ಚುಗೆ ಸೂಚಿಸಿತು. ನೂತನ ಅನ್ವೇಷಣೆಗಾಗಿ ನೀಡುವ ಪ್ರಶಸ್ತಿಯೂ ಒಲಿಯಿತು. ಅನ್ವೇಷಿಸುವ ಸ್ವಭಾವದಿಂದಲೇ ವರ್ಕ್‍ಶಾಪ್‍ನ ಸಾಮಾನ್ಯ ಸಹಾಯಕ ದೇಶದ ಅತಿ ಪ್ರಮುಖ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಒದಗಿಸಿದ. ಇಲ್ಲಿ ಹತ್ತಿ, ಮರದ ತಿರುಳನ್ನು ಬಳಸಿ ಬಹುರಾಷ್ಟ್ರೀಯ ಸಂಸ್ಥೆಗಳು ಸಿದ್ಧಪಡಿಸುವ ಸ್ಯಾನಿಟರಿ ಪ್ಯಾಡ್‍ಗಳಿಗೆ ನಾಲ್ಕು ಪಟ್ಟು ಹೆಚ್ಚು ಬೆಲೆ ನಿಗದಿ ಮಾಡಿದ್ದರಿಂದ ಬಡ ಕುಟುಂಬದ ಮಹಿಳೆಯರು ಎಂದಿಗೂ ಇದರ ಉಪಯೋಗದಿಂದ ದೂರ ಉಳಿದಿದ್ದರು. ಆದರೆ, ಮುರುಗನಂಥಂ ಮಹಿಳಾ ಸಂಘಗಳು ಹಾಗೂ ಸ್ವ-ಸಹಾಯಕ ಸಂಘಗಳಿಗೆ ತಾನೇ ಸಿದ್ಧಪಡಿಸಿದ ಸ್ಯಾನಿಟರಿ ಪ್ಯಾಡ್‍ಗಳನ್ನು ಹಂಚಲು ಶುರು ಮಾಡಿದರು.
ಅದಾಗಲೇ ಯಂತ್ರಕ್ಕೆ ಪೇಟೆಂಟ್ ಕೂಡ ಪಡೆದಿದ್ದರು. ತಾನೊಬ್ಬನೇ ಕಡಿಮೆ ಬೆಲೆಯಲ್ಲಿ ಉತ್ಪಾದನೆ ಮಾಡುವುದಕ್ಕಿಂತಲೂ ದೇಶದ ಎಲ್ಲ ಮಹಿಳೆಯರು, ಸಂಘಗಳಿಗೂ ಇದರ ಉಪಯೋಗ ನೀಡಲು ಜಯಶ್ರೀ ಇಂಡಸ್ಟ್ರೀಸ್ ಮೂಲಕ 80 ಸಾವಿರ ರೂಪಾಯಿಗೆ ಯಂತ್ರವನ್ನೇ ಸಿದ್ಧಪಡಿಸಿ ಮಾರಾಟ ಮಾಡಲು ಶುರು ಮಾಡಿದರು. ಈ ಯಂತ್ರಗಳು ಅದಾಗಲೇ ದೇಶ-ವಿದೇಶಗಳ ಅನೇಕ ಭಾಗಗಳಲ್ಲಿ ಉಪಯೋಗಿಸಲಾಗುತ್ತಿದೆ.
ಸ್ವ-ಸಹಾಯಕ ಸಂಘಗಳನ್ನು ಹೊರತುಪಡಿಸಿ ಇತರರಿಗೆ ಈ ಯಂತ್ರ 1.4 ಲಕ್ಷ ರೂ.ಗಳಿಗೆ ಲಭ್ಯವಿದೆ. ಇದೇ ಯಂತ್ರದ ಸೆಮಿ-ಆಟೋಮೆಟಿಕ್ ಶ್ರೇಣಿಗೆ 2.4 ಲಕ್ಷ ರೂ. ತಗುಲುತ್ತದೆ. (ನ್ಯಾಷನಲ್ ಇನೊವೇಷನ್ ಫೌಂಡೇಷನ್-ಇಂಡಿಯಾ ಮಾಹಿತಿ) ಈ ಯಂತ್ರಗಳ ಮೂಲಕ ನಿತ್ಯ 900-1000 ಸ್ಯಾನಿಟರಿ ಪ್ಯಾಡ್ ತಯಾರಿಸಬಹುದು. ಸೆಮಿ-ಆಟೋಮೆಟಿಕ್ ಯಂತ್ರದಲ್ಲಿ ನಿತ್ಯ 3 ಸಾವಿರಕ್ಕೂ ಹೆಚ್ಚು ಪ್ಯಾಡ್ ಉತ್ಪಾದನೆ ಸಾಧ್ಯ ಎನ್ನಲಾಗಿದೆ.
ದೂರವುಳಿದಿದ್ದ ಹೆಂಡತಿ
ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರೂ ಸೂಕ್ತ ರೀತಿ ಸ್ಪಂದಿಸದಿದ್ದಾಗ, ತಾನೇ ಒಳಉಡುಪಿನೊಳಗೆ ಸ್ಯಾನಿಟರಿ ಪ್ಯಾಡ್ ಇಟ್ಟು ಪರೀಕ್ಷೆ ನಡೆಸಿದ್ದರು. ಫುಟ್‍ಬಾಲ್‍ನ ಬ್ಲಾಡರ್, ಅದರೊಳಗೆ ತುಂಬಿದ ಪ್ರಾಣಿಯ ರಕ್ತವನ್ನು ಕೊಳವೆ ಮೂಲಕ ಒಳಗಿನ ಪ್ಯಾಡ್‍ಗೆ ಸಿಂಪಡಿಸುವಂತೆ ಕಟ್ಟಿಕೊಂಡು ಓಡಾಡಿದ್ದರು. ಮೂರು ವಾರಗಳ ಈ ಪರೀಕ್ಷೆಯಲ್ಲಿ ‘ಮಹಿಳೆ’ ಜಗತ್ತಿನ ಅತಿದೊಡ್ಡ ಸೃಷ್ಟಿ ಎಂಬುದು ಮುರುಗನಂತಂ ಅನುಭವಕ್ಕೆ ಬಂದಿತ್ತು. ಸಂಶೋಧನೆ, ಅನ್ವೇಷಣೆಯ ಏಳೂವರೆ ವರ್ಷ ಹೆಂಡತಿ ದೂರವೇ ಉಳಿದಿದ್ದರು.
2004ರಲ್ಲಿ ಪ್ಯಾಡ್ ತಯಾರಿಸುವ ಮೊದಲ ಯಂತ್ರವನ್ನು ತಯಾರಿಸಿದರು, 2008ರಲ್ಲಿ ನಾಣ್ಯ ಹಾಕಿ ಪ್ಯಾಡ್ ತೆಗೆದುಕೊಳ್ಳ ಬಹುದಾದ ವೆಂಡಿಂಗ್ ಯಂತ್ರಗಳನ್ನು ಸ್ಥಾಪಿಸಿದರು. ಸ್ಟೈಲ್ ಫ್ರೀ, ಈಜಿ ಫೀಲ್, ಫ್ರೀ ಸ್ಟೈಲ್, ಬಿ ಫ್ರೀ... ಹೀಗೆ ಹಲವು ಹೆಸರುಗಳಲ್ಲಿ ಈ ಯಂತ್ರಗಳ ಮೂಲಕ ಸಿದ್ಧಪಡಿಸಿದ ಪ್ಯಾಡ್‍ಗಳು ಮಾರಾಟಗೊಳ್ಳುತ್ತಿವೆ.
ಮರದ ತಿರುಳಿನಿಂದ ನೂಲಿನಂತಹ ಮೃದುವಾದ ವಸ್ತುವನ್ನು ಬೇರ್ಪಡಿಸಿ, ಹತ್ತಿಯಂತೆ ಕಾಣುವ ತಿರುಳನ್ನು ಪ್ಯಾಡ್ ರೂಪಕ್ಕೆ ತರಲು ಅಚ್ಚಿನಲ್ಲಿಟ್ಟು ಒತ್ತಲಾಗುತ್ತದೆ. ಬಳಿಕ ಪ್ಯಾಡನ್ನು ಮತ್ತೊಂದು ಪದರದ ಮೂಲಕ ಮುಚ್ಚಲಾಗುತ್ತದೆ. ಅಲ್ಲಿಂದ ಯುವಿ ಶುದ್ಧೀಕರಣ (ಸ್ಟೆರಿಲೈಜ್) ಪ್ರಕ್ರಿಯೆಗೆ ಒಳಪಡಿಸಿ, ಸ್ಪಷ್ಟ ರೂಪ ನೀಡಿ ಪ್ಯಾಕ್ ಮಾಡಲಾಗುತ್ತದೆ.
ಯಂತ್ರದ ವಿನ್ಯಾಸ
*ಕಾಲಿನ ಪೆಡಲ್ ಮೂಲಕ ಒತ್ತುವ ಅಚ್ಚುಪಟ್ಟಿ ಯಂತ್ರ(24*24*30 ಇಂಚು)ದಲ್ಲಿ ನಿಗದಿತ ಪ್ರಮಾಣದಲ್ಲಿ ಸಿದ್ಧಪಡಿಸಿದ ತಿರುಳನ್ನು ಇಡುವುದು. ಅಗತ್ಯ ಗಾತ್ರ ಹಾಗೂ ರೂಪದಲ್ಲಿ ತಿರುಳನ್ನು ಒತ್ತಿ ಅಣಿಗೊಳಿಸಬಹುದು.
*ಈ ಮೂರನೇ ಹಂತದಲ್ಲಿ ಹೆಣಿಗೆ ಇಲ್ಲದ ಬಟ್ಟೆ ಅಥವಾ ಪಾಲಿಪ್ರೊಪಿಲೀನ್ ಬಳಸಿ ತಿರುಳಿನ ಪ್ಯಾಡ್ ಮೇಲೆ ಮತ್ತೊಂದು ಪದರವಾಗಿ ಸೀಲ್ ಮಾಡಲಾಗುತ್ತದೆ. ಮೂರೂ ಬದಿಯಲ್ಲಿ ಪ್ಯಾಡ್‍ನ್ನು 36*30*30 ಇಂಚು ಅಳತೆಯ ಯಂತ್ರದಲ್ಲಿ ಸೀಲ್ ಮಾಡಿ ಮುಂದಿನ ಹಂತಕ್ಕೆ ಒಯ್ಯಲಾಗುತ್ತದೆ. ಬಹುಬೇಗ ಬಿಸಿಯಾಗಿ ಅಷ್ಟೇ ಕಡಿಮೆ ಸಮಯದಲ್ಲಿ ತಣ್ಣಗಾಗು ಈ ಯಂತ್ರ ಬಳಸಿ ನಿಮಿಷಕ್ಕೆ 4-10 ಪ್ಯಾಡ್‍ಗಳನ್ನು ಸೀಲ್ ಮಾಡಲು ಸಾಧ್ಯವಿದೆ.
*ಯುವಿ ದೀಪಗಳನ್ನು ಒಳಗೊಂಡಿರುವ ಪುಟ್ಟ ಘಟಕದಲ್ಲಿ ಪ್ಯಾಡ್‍ಗಳನ್ನು ಶುದ್ಧೀಕರಿಸಲಾಗುತ್ತದೆ(ಸ್ಟೆರಿಲೈಸ್). ಒಂದು ಪ್ಯಾಡ್ ಸುಮಾರು 10 ಸೆಕೆಂಡ್‍ವರೆಗೂ ಯುವಿ ಬೆಳಕಿನಲ್ಲಿ ಇಡಲಾಗುತ್ತದೆ. ಇದಾದ ಬಳಿಕ ಅಗತ್ಯವಿದ್ದರೆ ತುದಿ-ಬದಿಯಲ್ಲಿ ಟ್ರಿಮ್ ಮಾಡಿ ಪ್ಯಾಕ್ ಮಾಡಲಾಗುತ್ತದೆ. ಈ ಎಲ್ಲ ಹಂತಗಳನ್ನು ಪೂರ್ಣಗೊಳಿಸಿ ಪ್ರತಿ ನಿಮಿಷಕ್ಕೆ 4 ಸ್ಯಾನಿಟರಿ ನ್ಯಾಪ್ಕಿನ್ ಸಿದ್ಧಗೊಳ್ಳುತ್ತದೆ. ಇಂಥದ್ದೇ ಪ್ಯಾಡ್ ಉತ್ಪಾದನೆಗೆ ಹೊರ ದೇಶಗಳಿಂದ ಯಂತ್ರಗಳನ್ನು ಆಮದು ಮಾಡಿಕೊಂಡರೆ, ಅದರ ಬೆಲೆ ಕನಿಷ್ಠ 25 ಲಕ್ಷ ರೂಪಾಯಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.