ಬೆಂಗಳೂರು: ಕಳೆದ ವರ್ಷ ಮೇ ತಿಂಗಳಲ್ಲಿ ಕೊನೆಯ ಬಾರಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದ ಇಂಗ್ಲೆಂಡ್ನ ವೇಗಿ ಜೋಫ್ರಾ ಆರ್ಚರ್ ಅವರು ತಮ್ಮದೇ ಕೌಂಟಿ ತಂಡವಾದ ಸಸ್ಸೆಕ್ಸ್ ಕ್ಲಬ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಉತ್ತಮ ಲಯದಿಂದ ಬೌಲಿಂಗ್ ಮಾಡಿದರು. ಕೆಎಸ್ಸಿಎ ಇಲೆವನ್ ಪರ ಏಳು ಓವರ್ ಬೌಲಿಂಗ್ ಮಾಡಿ 22 ರನ್ಗೆ ಎರಡು ವಿಕೆಟ್ ಪಡೆದು ಮಾಮೂಲಿ ಲಯಕ್ಕೆ ಮರಳುತ್ತಿರುವುದನ್ನು ನಿರೂಪಿಸಿದರು.

ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಎರಡು ದಿನಗಳ ಪಂದ್ಯ ಡ್ರಾದಲ್ಲಿ ಮುಕ್ತಾಯವಾಯಿತು. ಈ ಪಂದ್ಯದಲ್ಲಿ ಆರ್ಚರ್ ಅವರ ಬೌಲಿಂಗ್ ಗಮನ ಸೆಳೆಯಿತು. ಕಳೆದ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ 28 ವರ್ಷದ ಆರ್ಚರ್ ಟೂರ್ನಿಯ ಮಧ್ಯದಲ್ಲೇ ನಿರ್ಗಮಿಸಿದ್ದರು. ಮೇ ತಿಂಗಳಲ್ಲಿ ಅವರು ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಮುಂಬೈ ಇಂಡಿಯನ್ಸ್ ತಂಡ ಕೈಬಿಟ್ಟ ನಂತರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಆರ್ಚರ್ ಅವರ ಕಾರ್ಯಭಾರ ಕಡಿಮೆ ಮಾಡುವ ಉದ್ದೇಶದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಬಿಡ್ಡಿಂಗ್ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿಲರಿಲ್ಲ.

ಸನ್ಸೆಕ್ಸ್ ಮುನ್ನಡೆ: ಆರ್ಚರ್ ಅತಿಥಿ ಆಟಗಾರನಾಗಿ ಆಡಿದರೂ ಕೆಎಸ್ಸಿಎ ಇಲೆವೆನ್, ಸಸೆಕ್ಸ್ ಕೌಂಟಿ ತಂಡ ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವುದನ್ನು ಮತ್ತು ಒಟ್ಟಾರೆ ಮೇಲುಗೈ ಪಡೆಯುವುದನ್ನು ತಡೆಯಲು ಆಗಲಿಲ್ಲ.

ಜೇಮ್ಸ್ ಕೋಲ್ಸ್ ಮತ್ತು ಟಾಮ್ ಅಲ್ಸೂಪ್ ಅವರ ಅರ್ಧಶತಕದ ನೆರವಿನಿಂದ ಸಸ್ಸೆಕ್ಸ್ ಕ್ಲಬ್ ತಂಡವು ಮೊದಲ ಇನಿಂಗ್ಸ್ನಲ್ಲಿ 162 ರನ್ ಮುನ್ನಡೆ ಪಡೆಯಿತು. ಆರ್ಚರ್ ಎಕ್ಸ್ಪ್ರೆಸ್ ವೇಗದಲ್ಲಿ ಬೌಲ್ ಮಾಡಿದರು.

ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 49.1 ಓವರ್ಗಳಲ್ಲಿ 201 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಸಸ್ಸೆಕ್ಸ್ ತಂಡವು ಜೇಮ್ಸ್ ಕೋಲ್ಸ್ (87;107ಎ), ಟಾಮ್ ಅಲ್ಸೂಪ್ (60; 109ಎ) ಅವರ ಬ್ಯಾಟಿಂಗ್ ಬಲದಿಂದ 71.4 ಓವರ್ಗಳಲ್ಲಿ 365 ರನ್ ಕಲೆಹಾಕಿತು. ಕೆಎಸ್ಸಿಎ ಪರವಾಗಿ ಎಡಗೈ ಸ್ಪಿನ್ನರ್ ಪಾರಸ್ ಗುರುಬಕ್ಷ್ ಆರ್ಯ ಐದು ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಕೆಎಸ್ಸಿಎ ಇಲೆವನ್ 201. ಸಸ್ಸೆಕ್ಸ್ ಕ್ಲಬ್: 71.4 ಓವರ್ಗಳಲ್ಲಿ 365 (ಜೇಮ್ಸ್ ಕೋಲ್ಸ್ 87, ಟಾಮ್ ಅಲ್ಸೂಪ್ 60; ಪಾರಸ್ ಗುರುಬಕ್ಷ್ ಆರ್ಯ 80ಕ್ಕೆ 5, ಜೋಫ್ರಾ ಆರ್ಚರ್ 22ಕ್ಕೆ 2. ಎರಡನೇ ಇನಿಂಗ್ಸ್: ಕೆಎಸ್ಸಿಎ ಇಲೆವೆನ್ 4 ವಿಕೆಟ್ಗೆ 162

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.