ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, 'ರನ್ ಮಷಿನ್' ಖ್ಯಾತಿಯ ವಿರಾಟ್ ಕೊಹ್ಲಿಕಳೆದ ಎರಡೂವರೆ ವರ್ಷಗಳಿಂದ ಅನುಭವಿಸುತ್ತಿದ್ದ ಶತಕದ ಬರ ಗುರುವಾರ ರಾತ್ರಿಗೆ ಮುಗಿದಿದೆ. ಏಷ್ಯಾ ಕಪ್ಟಿ20 ಕ್ರಿಕೆಟ್ ಟೂರ್ನಿಯ ಸೂಪರ್–4 ಹಂತದ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು, ಅಜೇಯ 122 ರನ್ ಗಳಿಸಿ ಸಂಭ್ರಮಿಸಿದ್ದಾರೆ.

ಭಾರತದವರೇ ಆದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕ್ರಿಕೆಟ್ನ ಮೂರೂ ಮಾದರಿಯಲ್ಲಿ ಬರೋಬ್ಬರಿ 100 ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. ವೇಗವಾಗಿ 70 ಶತಕಗಳನ್ನು ಗಳಿಸಿ ಸಾಧನೆ ಮಾಡಿದ್ದ ಕೊಹ್ಲಿ, ಸಚಿನ್ ದಾಖಲೆ ಮುರಿಯಬಲ್ಲ ಆಟಗಾರ ಎನಿಸಿದ್ದರು. ಆದರೆ, ಕಳೆದ ಎರಡೂವರೆ ವರ್ಷಗಳಿಂದ ಅವರ ಬ್ಯಾಟ್ನಿಂದ ಒಂದೂ ಶತಕ ದಾಖಲಾಗಿರಲಿಲ್ಲ. ಇದು ನಿರಾಸೆ ಮೂಡಿಸಿತ್ತು.

ಸದ್ಯಭಾರತ ತಂಡ ಏಷ್ಯಾ ಕಪ್ ಟೂರ್ನಿಯ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿದೆ. ಆದರೆ, ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿರುವುದು ಮುಂಬರುವ ವಿಶ್ವಕಪ್ ದೃಷ್ಟಿಯಿಂದ ತಂಡದ ಪಾಲಿಗೆ ಧನಾತ್ಮಕ ಅಂಶವಾಗಿದೆ. ಈ ಪಂದ್ಯದಪ್ರಮುಖ ಅಂಶಗಳು ಇಲ್ಲಿವೆ.

26 ಅರ್ಧಶತಕ, 0 ಶತಕ
ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ್ದು 2019ರ ನವೆಂಬರ್ 22ರಂದು.ಕೋಲ್ಕತ್ತದ ಈಡನ್ ಗಾರ್ಡನ್ಸ್ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 136 ರನ್ ಗಳಿಸಿದ್ದರು. ಅದಾದ ನಂತರ (ಗುರುವಾರದ ಪಂದ್ಯಕ್ಕೂ ಮುನ್ನ) 83ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು26 ಅರ್ಧಶತಕ ಬಾರಿಸಿದ್ದಾರಾದರೂ, ಒಮ್ಮೆಯೂ ಮೂರಂಕಿ ಮೊತ್ತ ಗಳಿಸಲು ಸಾಧ್ಯವಾಗಿರಲಿಲ್ಲ.

1,021 ದಿನಗಳ ಈ ಅವಧಿಯಲ್ಲಿ ಕೊಹ್ಲಿ 18ಟೆಸ್ಟ್ ಪಂದ್ಯಗಳ32 ಇನಿಂಗ್ಸ್ಗಳಿಂದ 872 ರನ್,23 ಏಕದಿನ ಪಂದ್ಯಗಳ23 ಇನಿಂಗ್ಸ್ಗಳಿಂದ 824 ರನ್ ಹಾಗೂ31 ಟಿ20 ಪಂದ್ಯಗಳ 28 ಇನಿಂಗ್ಸ್ಗಳಿಂದ1,012 ರನ್ ಕಲೆಹಾಕಿದ್ದರು.

ಇದೀಗ ಕೊಹ್ಲಿ ಅಫ್ಗಾನಿಸ್ತಾನ ವಿರುದ್ಧ ಶತಕ ಸಿಡಿಸುವುದರೊಂದಿಗೆ ದೀರ್ಘ ಕಾಯುವಿಕೆಗೆ ಅಂತ್ಯವಾಡಿದ್ದಾರೆ. ಇದು ಅವರ ಬ್ಯಾಟ್ನಿಂದ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂಡಿಬಂದ 71ನೇ ಶತಕವಾಗಿದೆ.

ಅತಿಹೆಚ್ಚು ಶತಕ; ಎರಡನೇ ಸ್ಥಾನದಲ್ಲಿ ಕೊಹ್ಲಿ
ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಕೊಹ್ಲಿ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಜೊತೆಗೆ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಈವರೆಗೆ522 ಇನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿರುವಕೊಹ್ಲಿ 71(43 ಏಕದಿನ, 27 ಟೆಸ್ಟ್ ಹಾಗೂ 1 ಟಿ20) ಶತಕ ಸಿಡಿಸಿದ್ದಾರೆ.

ರಿಕಿ ಪಾಂಟಿಂಗ್ ಸಹ 678 ಇನಿಂಗ್ಸ್ಗಳಿಂದ ಇಷ್ಟೇ ಶತಕ ಬಾರಿಸಿದ್ದಾರೆ.

ಒಟ್ಟಾರೆ ಹೆಚ್ಚು ಶತಕ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅವರು 782 ಇನಿಂಗ್ಸ್ಗಳಿಂದ ನೂರು ಬಾರಿ ಮೂರಂಕಿ ಮೊತ್ತ ಗಳಿಸಿದ್ದಾರೆ. 63 ಶತಕ ಗಳಿಸಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು 62 ಬಾರಿ 'ನೂರು' ರನ್ ಗಳಿಸಿರುವ ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್ ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

ಟಿ20ಯಲ್ಲಿ ಚೊಚ್ಚಲ ಶತಕ; ಭಾರತ ಪರ ಗರಿಷ್ಠ ರನ್
ಅಫ್ಗಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ದಾಖಲಾದ ಶತಕವು ಟಿ20 ಮಾದರಿಯಲ್ಲಿ ಕೊಹ್ಲಿ ಬಾರಿಸಿದ ಮೊದಲ ಶತಕವೂ ಹೌದು.ಚುಟುಕುಕ್ರಿಕೆಟ್ನಲ್ಲಿ ಅವರು ಮೂರು ವರ್ಷಗಳ ಹಿಂದೆ ಹೈದರಾಬಾದ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ್ದ ಅಜೇಯ 94 ರನ್ಗಳೇ ಇದುವರೆಗಿನ ಶ್ರೇಷ್ಠ ಸ್ಕೋರ್ ಆಗಿತ್ತು.

ಕೊಹ್ಲಿ ಗಳಿಸಿದ ಅಜೇಯ 122 ರನ್ಗಳು ಟಿ20 ಮಾದರಿಯಲ್ಲಿ ಭಾರತದ ಬ್ಯಾಟರ್ವೊಬ್ಬರು ಗಳಿಸಿದ ಗರಿಷ್ಠ ಮೊತ್ತವೂ ಆಗಿದೆ. ಹಾಲಿ ನಾಯಕ ರೋಹಿತ್ ಶರ್ಮಾ ಅವರು 2017ರಲ್ಲಿ ಶ್ರೀಲಂಕಾ ವಿರುದ್ಧ ಗಳಿಸಿದ್ದ 118 ಇದುವರೆಗೆ ವೈಯಕ್ತಿಕ ಅಧಿಕ ರನ್ ಆಗಿತ್ತು.

ಅಷ್ಟೇ ಅಲ್ಲ. ಅಫ್ಗಾನಿಸ್ಥಾನ ವಿರುದ್ಧ ಯಾವುದೇ ಬ್ಯಾಟರ್ ಈವರೆಗೆ ಶತಕ ಸಿಡಿಸಿರಲಿಲ್ಲ.ಈ ಹಿಂದೆ 2012ರಲ್ಲಿ ಇಂಗ್ಲೆಂಡ್ನ ಲ್ಯೂಕ್ ರೈಟ್ ಕೊಲಂಬೊದಲ್ಲಿ ಅಜೇಯ 99 ರನ್ ಗಳಿಸಿದ್ದೇ ಸಾಧನೆಯಾಗಿತ್ತು.

ಏಷ್ಯಾಕಪ್ನಲ್ಲಿ ಹೆಚ್ಚು ರನ್
ಈ ಬಾರಿಯ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಐದು ಪಂದ್ಯಗಳಲ್ಲಿ 92ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಕೊಹ್ಲಿ, ಒಂದು ಶತಕ ಹಾಗೂ ಎರಡು ಅರ್ಧಶತಕ ಸಹಿತ 276 ರನ್ ಗಳಿಸಿದ್ದಾರೆ. ಇದು ಈ ಬಾರಿಯ ಟೂರ್ನಿಯಲ್ಲಿ ಬ್ಯಾಟರ್ವೊಬ್ಬರು ಗಳಿಸಿದ ಅಧಿಕ ರನ್ ಆಗಿದೆ.

4 ಪಂದ್ಯಗಳಿಂದ 212 ರನ್ ಗಳಿಸಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 212 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಹೆಚ್ಚು 'ಪಂದ್ಯ ಶ್ರೇಷ್ಠ' ಪ್ರಶಸ್ತಿ
ಶತಕ ಬಾರಿಸಿ ಭಾರತದ ಗೆಲುವಿಗೆ ಕಾರಣರಾದ ಕೊಹ್ಲಿ, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು. ಇದು ಚುಟುಕು ಕ್ರಿಕೆಟ್ನಲ್ಲಿ ಸಿಕ್ಕ 13ನೇ ಪ್ರಶಸ್ತಿಯಾಗಿದೆ. ಇದರೊಂದಿಗೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿಯಲ್ಲಿ ಅಫ್ಗಾನಿಸ್ತಾನದ ನಾಯಕ ಮೊಹಮ್ಮದ್ ನಬಿ (13) ಅವರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ಮೊಹಮ್ಮದ್ ಹಫೀಜ್, ಭಾರತದ ರೋಹಿತ್ ಶರ್ಮಾ ಮತ್ತು ವೆಸ್ಟ್ ಇಂಡೀಸ್ನ ರೋಹಿತ್ ಶರ್ಮಾ ತಲಾ 11 ಬಾರಿಪಂದ್ಯ ಶ್ರೇಷ್ಠರೆನಿಸಿದ್ದಾರೆ.

ಭುವನೇಶ್ವರ್ ಅತ್ಯುತ್ತಮ ಬೌಲಿಂಗ್
ಕೊಹ್ಲಿ ಶತಕದ ಬಲದಿಂದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 212ರನ್ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಅಫ್ಗಾನಿಸ್ತಾನ ತಂಡಕ್ಕೆ ವೇಗಿ ಭುವನೇಶ್ವರ್ ಕುಮಾರ್ ಕಾಟ ಕೊಟ್ಟರು.

ತಮ್ಮ ಪಾಲಿನ ನಾಲ್ಕು ಓವರ್ಗಳಲ್ಲಿ 1 ಮೇಡನ್ ಸಹಿತ ಕೇವಲ 4 ರನ್ ಬಿಟ್ಟುಕೊಟ್ಟ ಅವರು ಪ್ರಮುಖ 5 ವಿಕೆಟ್ಗಳನ್ನು ಕಬಳಿಸಿದರು. ಇದು ಟಿ20 ಯಲ್ಲಿ ಭುವನೇಶ್ವರ್ ಅವರ ಅತ್ಯುತ್ತಮ ಬೌಲಿಂಗ್ ಫಿಗರ್ ಎನಿಸಿತು. ಇದಕ್ಕೂ ಮೊದಲು ಅವರು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 24 ರನ್ಗೆ 4 ವಿಕೆಟ್ ಉರುಳಿಸಿದ್ದರು.

ಒಟ್ಟಾರೆ ಚುಟುಕು ಕ್ರಿಕೆಟ್ನ ಇನಿಂಗ್ಸ್ವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಶ್ರೇಯ ಇರುವುದು ದೀಪಕ್ ಚಾಹರ್ ಅವರ ಹೆಸರಲ್ಲಿ. ಅವರು 2019ರಲ್ಲಿ ಬಾಂಗ್ಲಾದೇಶ ವಿರುದ್ಧ ಕೇವಲ 7 ರನ್ ನೀಡಿ 6 ವಿಕೆಟ್ಗಳನ್ನು ಕಬಳಿಸಿದ್ದರು.

ಎರಡನೇ ಗರಿಷ್ಠ ರನ್ ಅಂತರದ ಜಯ
ಭುವನೇಶ್ವರ್ ಕುಮಾರ್ ಬೌಲಿಂಗ್ ದಾಳಿಗೆ ನಲುಗಿದ ಅಫ್ಗನ್ ಪಡೆ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 111 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಭಾರತಕ್ಕೆ 101ರನ್ ಅಂತರದ ಗೆಲುವು ಒಲಿಯಿತು.

ಇದು ಚುಟುಕು ಕ್ರಿಕೆಟ್ ಮಾದರಿಯಲ್ಲಿ ಭಾರತಕ್ಕೆ ರನ್ ಅಂತರದಲ್ಲಿ ಸಿಕ್ಕ ಎರಡನೇ ದೊಡ್ಡ ಜಯವಾಗಿದೆ. 2018ರಲ್ಲಿ ಐರ್ಲೆಂಡ್ ತಂಡವನ್ನು 143 ರನ್ ಅಂತರದಿಂದ ಮಣಿಸಿದ್ದು ಭಾರತ ತಂಡದ ಉತ್ತಮ ಸಾಧನೆಯಾಗಿದೆ.

ಅಫ್ಗನ್ಗೆ ಎದುರಾದಎರಡನೇ ದೊಡ್ಡ ಸೋಲು
ಭಾರತ ವಿರುದ್ಧದ 101ರನ್ ಅಂತರದ ಸೋಲು ಅಫ್ಗಾನಿಸ್ತಾನ ತಂಡಕ್ಕೆ ಟಿ20 ಕ್ರಿಕೆಟ್ನಲ್ಲಿ ಎದುರಾದ ಎರಡನೇ ಕೆಟ್ಟ ಸೋಲಾಗಿದೆ. 2012ರಲ್ಲಿ ಇಂಗ್ಲೆಂಡ್ ವಿರುದ್ಧ 116 ರನ್ ಅಂತರದಿಂದ ಸೋಲು ಕಂಡಿದ್ದ ಅಫ್ಗನ್ ಪಡೆ ಅದಾದ ನಂತರ ಒಮ್ಮೆಯೂ ನೂರಕ್ಕಿಂತ ಹೆಚ್ಚು ರನ್ ಅಂತರದ ಸೋಲು ಅನುಭವಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.