ಮೆಲ್ಬರ್ನ್: ‘ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಹುದ್ದೆಗೆ ಮಹಿಳೆಯೊಬ್ಬರನ್ನು ನೇಮಿಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತಯಾರಾಗಿದೆ’ ಎಂದು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ಎಲಿಸೆ ಪೆರಿ ತಿಳಿಸಿದ್ದಾರೆ.

ಈ ಮೊದಲು ಸಿಇಒ ಆಗಿದ್ದ ಕೆವಿನ್ ರಾಬರ್ಟ್ಸ್ ಅವರು ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಹೀಗಾಗಿ ನಿಕ್ ಹಾಕ್ಲೆ ಅವರು ಹಂಗಾಮಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಸಿಇಒ ಹುದ್ದೆಗೆ ನೇಮಕ ಕೋರಿ ಅರ್ಜಿ ಸಲ್ಲಿಸುವಂತೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಹಿರಿಯ ಆಟಗಾರ ಆ್ಯಂಡ್ರ್ಯೂ ಸ್ಟ್ರಾಸ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಮನವಿ ಮಾಡಿದೆ ಎಂದು ‘ದಿ ಆಸ್ಟ್ರೇಲಿಯನ್’ ಪತ್ರಿಕೆಯು ಗುರುವಾರ ವರದಿ ಮಾಡಿತ್ತು.

‘ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯ ಸಿಇಒ ಆಗಿ ಕೆಲಸ ಮಾಡುತ್ತಿರುವ ಅನುಭವಿ ಆಟಗಾರ್ತಿ ಕ್ರಿಸ್ಟಿನಾ ಮ್ಯಾಥ್ಯೂಸ್ ಅವರು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಹುದ್ದೆ ನಿಭಾಯಿಸಲು ಸಮರ್ಥರಾಗಿದ್ದಾರೆ. ಅವರೊಂದಿಗೆ ಸಿಎ, ಚರ್ಚೆ ನಡೆಸುತ್ತಿದೆ. ಮಾತುಕತೆಯು ಅಂತಿಮ ಹಂತದಲ್ಲಿದೆ ಎಂಬ ಮಾಹಿತಿಯೂ ಸಿಕ್ಕಿದೆ’ ಎಂದು 29 ವರ್ಷ ವಯಸ್ಸಿನ ಆಟಗಾರ್ತಿ ಪೆರಿ ನುಡಿದಿದ್ದಾರೆ.

‘ಕ್ರಿಕೆಟ್ ಆಸ್ಟ್ರೇಲಿಯಾದ ಉನ್ನತ ಹುದ್ದೆಗಳಲ್ಲಿ ಈಗಾಗಲೇ ಹಲವು ಮಹಿಳೆಯರು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಬೆಲಿಂದಾ ಕ್ಲಾರ್ಕ್, ಸ್ಟೆಫ್ ಬೆಲ್ಟ್ರೇಮ್ ಅವರು ಇವರಲ್ಲಿ ಪ್ರಮುಖರಾಗಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.