ಮೈಸೂರು: ಮುಕುಲ್ ನೇಗಿ ಅಮೋಘ ಬೌಲಿಂಗ್ನಿಂದಾಗಿ ಕರ್ನಾಟಕ ತಂಡವು ಭಾನುವಾರ ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆರಂಭವಾದ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹಿಮಾಚಲಪ್ರದೇಶದ ಎದುರು ಸಾಧಾರಣ ಮೊತ್ತ ಪೇರಿಸಿತು.

ಮುಕುಲ್ ನೇಗಿ (36ಕ್ಕೆ 5) ಅವರ ಮಿಂಚಿನ ಬೌಲಿಂಗ್ ದಾಳಿಗೆ ಕರ್ನಾಟಕ ತಂಡವು ನಲುಗಿತು. ಎ.ಎ.ಲೋಚನ್ (29 ರನ್), ಕೆ.ವಿ.ಅನಿಷ್ (30) ಹೊರತುಪಡಿಸಿದರೆ ಉಳಿದ ಆಟಗಾರರು ಕ್ರೀಸ್ನಲ್ಲಿ ಹೆಚ್ಚು ಹೊತ್ತು ಇರಲಿಲ್ಲ.

ರಾಜ್ಯ ತಂಡವು 131 ರನ್ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದಾಗ ಬೌಲರ್ಗಳಾದ ಕೆ.ಶಶಿಕುಮಾರ್ (ಅಜೇಯ 19 ರನ್, 4x2) ಹಾಗೂ ವರುಣ್ ರಾವ್ (17, 4x2) ಉತ್ತಮವಾಗಿ ಆಟವಾಡಿದರು. ಕೊನೆಯ ವಿಕೆಟ್ಗೆ 35 ರನ್ ಜೊತೆಯಾಟದ ಮೂಲಕ ಕೆಎಸ್ಸಿಎ ತಂಡವು 166 ರನ್ ಕಲೆ ಹಾಕಲು ಕಾರಣರಾದರು.

ದಿನದಾಟದ ಮುಕ್ತಾಯಕ್ಕೆ ಹಿಮಾಚಲ ಪ್ರದೇಶ 7 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 24 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 77.4 ಓವರ್ಗಳಲ್ಲಿ 166 (ಕೆ.ವಿ.ಅನಿಷ್ 30, ಮುಕುಲ್ ನೇಗಿ 36ಕ್ಕೆ 5). ಹಿಮಾಚಲ ಪ್ರದೇಶ 7 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 24 (ವೈಭವ್ ಶರ್ಮಾ ಬ್ಯಾಟಿಂಗ್ 14, ಆರ್.ಐ.ಠಾಕೂರ್ ಬ್ಯಾಟಿಂಗ್ 1, ಎಂ.ಎಸ್.ಭಾಂಡಗೆ 14ಕ್ಕೆ 1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.