ಮುಂಬೈ/ನವದೆಹಲಿ: ಮಾದಕ ಪದಾರ್ಥ ಇರಿಸಿಕೊಂಡಿದ್ದಕ್ಕಾಗಿ ಜಪಾನ್ ಪೊಲೀಸರು ಬಂಧಿಸಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಕುರಿತು ಲಿಖಿತ ಹೇಳಿಕೆ ನೀಡುವಂತೆ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಸೂಚಿಸಿದೆ.

ಸದ್ಯ, ವಾಡಿಯಾ ವಿಷಯವನ್ನು ಐಪಿಎಲ್‌ನ ಶಿಸ್ತು ಸಮಿತಿಗೆ ವಹಿಸದೇ ಇರಲು ಸಿಒಎ ನಿರ್ಧರಿಸಿದೆ. ಈ ಸಮಿತಿಯಲ್ಲಿ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ, ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಖಜಾಂಚಿ ಅನಿರುದ್ಧ ಚೌಧರಿ ಇದ್ದಾರೆ.

ಉದ್ಯಮಿ ವಾಡಿಯಾ 25 ಗ್ರಾಂ ಮಾದಕ ಪದಾರ್ಥವನ್ನು ಸಾಗಿಸುತ್ತಿದ್ದಾಗ ಜಪಾನ್‌ನ ವಿಮಾನ ನಿಲ್ದಾನದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯೂ ವಿಧಿಸಲಾಗಿತ್ತು.

‘ಲಿಖಿತ ಹೇಳಿಕೆ ನೀಡುವಂತೆ ಕಿಂಗ್ಸ್ ಇಲೆವನ್ ತಂಡದ ಆಡಳಿತಕ್ಕೆ ಸೂಚಿಸಲಾಗಿದೆ. ಇದು ಸರಿಯಾದ ಕ್ರಮ. ವಾಡಿಯಾ ಬಂಧನದಿಂದಾಗಿ ಐಪಿಎಲ್‌ಗೆ ಯಾವ ರೀತಿಯ ಧಕ್ಕೆಯಾಗಲಿಲ್ಲ. ಆದರೆ ಈ ಘಟನೆ ಅಭಿಪ್ರಾಯ ಮೂಡುವಂತೆ ಮಾಡಿದೆ. ಕಿಂಗ್ಸ್ ಇಲೆವನ್ ಹೇಳಿಕೆ ನೀಡಿದ ನಂತರ ಮುಂದಿನ ನಿರ್ಧಾರವನ್ನು ಸಿಒಎ ತೆಗೆದುಕೊಳ್ಳಲಿದೆ’ ಎಂದು ಬಿಸಿಸಿಐ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.