ಕ್ರಿಕೆಟ್ ಪಿಚ್ ಗುಣಮಟ್ಟ ಅರಿಯಲು ಈಗ ತಂತ್ರಜ್ಞಾನವಿದೆ. ಆದರೆ ದಶಗಳ ಹಿಂದೆ ಜಿ. ಕಸ್ತೂರಿರಂಗನ್ ಏನ್ ಮಾಡ್ತಿದ್ದರು ಗೊತ್ತಾ? ನಾಣ್ಯದ ಟಿಣ್ ಟಿಣ್ ಸದ್ದಿನಿಂದಲೇ ಪಿಚ್ ಮರ್ಮ ಅರಿಯುತ್ತಿದ್ದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವಿರುವ ಜಾಗ ಒಂದುಕಾಲದಲ್ಲಿ ಕಲ್ಲುಬಂಡೆಗಳ ತಾಣವಾಗಿತ್ತಂತೆ. 51 ವರ್ಷಗಳ ಹಿಂದೆ ಚಿನ್ನಸ್ವಾಮಿ ಅವರು ಇಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಕೈಹಾಕಿದಾಗ, ಪಿಚ್ ಸಿದ್ಧಗೊಳಿಸಲು ಜಿ.ಕಸ್ತೂರಿರಂಗನ್ ಅವರಿಗೆ ಹೊಣೆ ನೀಡಿದರು. ಗುಲಾಬಿ ಕೃಷಿಯಲ್ಲಿ ಸಿದ್ಧಹಸ್ತರಾಗಿದ್ದ ಕಸ್ತೂರಿರಂಗನ್ ಅವರಿಗೆ ಮಣ್ಣಿನ ಕಣಕಣದ ಪರಿಚಯ ಇತ್ತು. ಕಲ್ಲುಬಂಡೆಗಳನ್ನು ಪುಡಿಗಟ್ಟಿಸಿ ಸುಂದರವಾದ ಪಿಚ್ ನಿರ್ಮಾಣ ಮಾಡಿದರು. ಭಾರತದಲ್ಲಿ ಪಿಚ್ ಕ್ಯುರೇಟರ್ ಪರಂಪರೆಯನ್ನು ಆರಂಭಿಸಿದರು. ಮೈಸೂರು ರಾಜ್ಯ ತಂಡಕ್ಕೆ ಆಡಿದ್ದ ಕಸ್ತೂರಿರಂಗನ್ ಅವರು ಪಿಚ್ ಸಿದ್ಧತೆಯಲ್ಲಿಯೂ ತಮ್ಮದೇ ಛಾಪು ಮೂಡಿಸಿದರು. ಅವರ ಶಿಷ್ಯವರ್ಗವೇ ಇವತ್ತು ಭಾರತದ ಪ್ರಮುಖ ಕ್ರೀಡಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ದಿನ ಅವರ 90ನೇ ಜನುಮದಿನ ಅವರು ಪಿಚ್ ಗುಣಮಟ್ಟ ಪರೀಕ್ಷಿಸಲು ಬಳಸುತ್ತಿದ್ದ ವಿಶಿಷ್ಟ ಟೆಕ್ನಿಕ್ ಒಂದರ ಕುರಿತ ಮಾಹಿತಿಯನ್ನು ಪ್ರಜಾವಾಣಿ ಕ್ರೀಡಾ ವಿಭಾಗದ ಮುಖ್ಯ ವರದಿಗಾರ ಗಿರೀಶ ದೊಡ್ಡಮನಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.