ಸಿಡ್ನಿ: ಕೊರೊನಾ ವೈರಸ್ ಹಾವಳಿಯಿಂದ ಕ್ರೀಡಾ ಚಟುವಟಿಕೆಗಳು ಸ್ಥಗಿತವಾಗಿವೆ. ಭವಿಷ್ಯದಲ್ಲಿ ಮಹಿಳೆಯರ ಕ್ರೀಡೆಯ ಬೆಳವಣಿಗೆಗೆ ಇದು ಹೆಚ್ಚು ಆತಂಕಕಾರಿ ಎಂಬ ಮಾತುಗಳನ್ನು ಕೆಲವು ಕ್ರಿಕೆಟಿಗರು ಹೇಳಿದ್ದರು.

ಆದರೆ, ಈ ಮಾತುಗಳನ್ನು ಆಸ್ಟ್ರೇಲಿಯಾ ಮಹಿಳಾ ತಂಡದ ಆಲ್ರೌಂಡರ್ ಎಲೈಸ್ ಪೆರಿ ಒಪ್ಪುವುದಿಲ್ಲ.

‘ಕ್ರೀಡೆಗೆ ಸಹಜವಾಗಿಯೇ ಪುಟಿದೇಳುವ ಶಕ್ತಿ ಅಪಾರವಾಗಿರುತ್ತದೆ. ಈಗ ಬಂದಿರುವ ಕಷ್ಟ ತಾತ್ಕಾಲಿಕ. ದೀರ್ಘ ಕಾಲದಲ್ಲಿ ಅಷ್ಟೇನೂ ಪರಿಣಾಮವಾಗುವುದಿಲ್ಲ. ಮತ್ತೆ ತನ್ನ ಹಾದಿಗೆ ಮರಳಲಿದೆ’ ಎಂದಿದ್ದಾರೆ.

‘ಕ್ರೀಡೆಯನ್ನು ಮತ್ತೆ ಅಭಿವೃದ್ಧಿಯೆಡೆಗೆ ನಡೆಸಲು ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಳ್ಳುವ ಅನಿವಾರ್ಯತೆಯನ್ನು ಸಂಘ, ಸಂಸ್ಥೆಗಳು ಎದುರಿಸುತ್ತಿವೆ. ಇದರಿಂದಾಗಿ ನಿಯಮಗಳು ಬದಲಾಗಬಹುದು. ಅದರೊಂದಿಗೆ ಸಾಧ್ಯತೆಗಳೂ ಹೆಚ್ಚಬಹುದು. ಈ ಕುರಿತು ಸಂಘಟನೆಗಳು ಯೋಚಿಸಲೇಬೇಕಾಗಿದೆ’ ಎಂದು ಹೇಳಿದರು.

‘ಮಹಿಳಾ ಕ್ರಿಕೆಟ್ಗೆ ಈಗ ಹೆಚ್ಚು ಪ್ರಸಿದ್ಧಿ ಸಿಗುತ್ತಿರುವುದು ನಿಜ. ಬೆಳೆಯಲು ಇನ್ನೂ ಅಪಾರವಾದ ಅವಕಾಶಗಳಿವೆ. ಕೊರೊನಾ ವೈರಸ್ ಹಾವಳಿ ಕಡಿಮೆಯಾದ ನಂತರ ಹೆಚ್ಚು ಆದಾಯ ಗಳಿಸಲು ಕ್ರೀಡಾ ಸಂಸ್ಥೆಗಳು ಹೊಸ ಚಿಂತನೆಯೊಂದಿಗೆ ಕಣಕ್ಕಿಳಿಯುವುದು ಖಚಿತ. ಆಗ ಅದರಿಂದ ಆಟದ ಬೆಳವಣಿಗೆ ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.