ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಸಂದರ್ಭದಲ್ಲಿ ಜೀವ ಸುರಕ್ಷಾ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಇಂಗ್ಲೆಂಡ್ ಆಟಗಾರ ಜೋಫ್ರಾ ಆರ್ಚರ್‌ಗೆ ದಂಡ ವಿಧಿಸಲಾಗಿದೆ.

ಹೋದ ಸೋಮವಾರ ಜೋಫ್ರಾ ಆರ್ಚರ್ ಅವರು ತಂಡದ ಆಡಳಿತದ ಅನುಮತಿ ಪಡೆಯದೇ ತಮ್ಮ ಮನೆಗೆ ತೆರಳಿದ್ದರು. ನಂತರ ಮತ್ತೆ ಮರಳಿ ಬಂದಿದ್ದರು. ಆದರೆ ಸರಣಿಯು ಮುಗಿಯುವವರೆಗೆ ಮಂಡಳಿಯು ನಿಗದಿ ಪಡಿಸಿರುವ ಹೋಟೆಲ್‌ನಲ್ಲಿ ಪ್ರತ್ಯೇಕವಾಸದಲ್ಲಿರುವುದು ನಿಯಮವಾಗಿತ್ತು. ಆದ್ದರಿಂದ ಅವರನ್ನು ಗುರುವಾರ ಆರಂಭವಾದ ಎರಡನೇ ಟೆಸ್ಟ್ ಸರಣಿಯ ಎರಡು ತಾಸು ಮೊದಲು ತಂಡದಿಂದ ಕೈಬಿಡಲಾಗಿತ್ತು. ಜೋಫ್ರಾ ತಮ್ಮ ತಪ್ಪಿಗೆ ಕ್ಷಮೆ ಕೂಡ ಕೇಳಿದ್ದರು.

’ಶುಕ್ರವಾರ ಸಂಜೆ ಜೋಫ್ರಾ ಅವರನ್ನು ವಿಚಾರಣೆ ನಡೆಸಲಾಯಿತು. ಅವರು ತಪ್ಪಿತಸ್ಥರೆಂದು ಸಾಬೀತಾಗಿದೆ. ಆದ್ದರಿಂದ ಅವರಿಎ ದಂಡ ವಿಧಿಸಲಾಗಿದೆ. ಅವರು ಬಯೊ ಸೆಕ್ಯೂರ್ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ‘ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ಕಾಲದ ಮೊದಲ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಇಂಗ್ಲೆಂಡ್ ಆಯೋಜಿಸಿದೆ. ಅದಕ್ಕಾಗಿ ಕಟ್ಟುನಿಟ್ಟಿನ ಜೀವ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ವಿರುದ್ಧ ಜಯಿಸಿತ್ತು. ಆ ಪಂದ್ಯದಲ್ಲಿ ಜೋಫ್ರಾ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.