ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಮತ್ತು ಉಳಿದ ಸದಸ್ಯರ ಕಾರ್ಯಾವಧಿ ಶೀಘ್ರದಲ್ಲೇ ಮುಕ್ತಾಯವಾಗಲಿದೆ. ಮುಖ್ಯಸ್ಥ ಪ್ರಸಾದ್ ಹಾಗೂ ಸದಸ್ಯಗಗನ್ ಖೋಡಾ 2015ರಲ್ಲಿ ನೇಮಕವಾದರೆ, ಉಳಿದ ಸದಸ್ಯರಾದಜತಿನ್ ಪರಾಂಜಪೆ, ಶರಣದೀಪ್ ಸಿಂಗ್ ಮತ್ತು ದೇವಾಂಗ್ ಗಾಂಧಿ 2016ರಲ್ಲಿ ಸಮಿತಿ ಸೇರಿಕೊಂಡಿದ್ದರು.

ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿರುವಸಮಿತಿ ಸದಸ್ಯರ ‘ಕ್ರಿಕೆಟ್ ಜ್ಞಾನ’ ಕುರಿತು ಹಲವು ಬಾರಿ ಟೀಕೆಗಳು ಕೇಳಿ ಬಂದಿವೆ. ಸಮಿತಿಯಲ್ಲಿರುವ ಯಾರೊಬ್ಬರಿಗೂ ಟೀಂ ಇಂಡಿಯಾ ಪರ ಕನಿಷ್ಠ ಹತ್ತು ಟೆಸ್ಟ್ ಆಡಿದ ಅನುಭವವಿಲ್ಲ. ಹೀಗಿರುವಾಗ ‘ತಂಡದ ಅಗತ್ಯಕ್ಕನುಗುಣವಾಗಿ ಸಮರ್ಥ ಆಟಗಾರರನ್ನು ಇವರು ಹೇಗೆ ಆಯ್ಕೆ ಮಾಡಬಲ್ಲರು?’ ಎಂಬ ಪ್ರಶ್ನೆಗಳು ಹಲವು ಸಂದರ್ಭಗಳಲ್ಲಿ ಎದ್ದಿವೆ. ಆದಾಗ್ಯೂಪ್ರಸಾದ್ ಮತ್ತು ಸಮಿತಿಯ ಅವಧಿಯಲ್ಲಿ ಭಾರತ ತಂಡವು ಸಾಕಷ್ಟು ಯಶಸ್ಸು ಕಂಡಿದೆ. ಹಲವು ಪ್ರತಿಭಾವಂತ ಆಟಗಾರರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ಟೀಕೆಗಳಿಗೆ ತಿರುಗೇಟು ನೀಡಿದ ಎಂ.ಎಸ್.ಕೆ ಪ್ರಸಾದ್

ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ,‘ಪ್ರಸಾದ್ ನೇತೃತ್ವದ ಸಮಿತಿಯು ಇಲ್ಲಿಯವರೆಗೆ ಉತ್ತಮವಾಗಿ ಕೆಲಸ ಮಾಡಿದೆ. ಆದರೆ, ಅವರ ಕಾರ್ಯಾವಧಿ ಮುಕ್ತಾಯಗೊಂಡಿದ್ದು ಅವರು ಮುಂದುವರಿಯಲುಆಗುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಇದೇ ಸಮಿತಿ ಮುಂದಿನ ಅವಧಿಗೂ ಮುಂದುವರಿಯಲಿದೆ ಎಂಬುದು ಅನುಮಾನ.

ಸದ್ಯ ಆಯ್ಕೆ ಸಮಿತಿಯ ಸ್ಥಾನಗಳಿಗೆ ನೇಮಕಾತಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲವಾದರೂ, ಆ ಬಗ್ಗೆಕ್ರೀಡಾವಲಯದಲ್ಲಿ ಚರ್ಚೆಗಳು ಆರಂಭವಾಗಿವೆ. ಪ್ರಸಾದ್ ಸ್ಥಾನಕ್ಕೆ ಮಂಚೂಣಿಯಲ್ಲಿರುವ ಪ್ರಮುಖ ಮೂವರ ಹೆಸರುಗಳನ್ನು ಟೈಮ್ಸ್ನೌ.ಕಾಂ ಪ್ರಸ್ತಾಪಿಸಿದೆ.

ಇದನ್ನೂ ಓದಿ:ಆಯ್ಕೆದಾರರಿಗಿಲ್ಲ ಶಾಸ್ತ್ರಿ, ಕೊಹ್ಲಿಯಷ್ಟು ಅನುಭವ

ಲಕ್ಷ್ಮಣ್ ಶಿವರಾಮಕೃಷ್ಣನ್
ಫ್ರಸಾದ್ ಅವಧಿ ಮುಗಿಯುವ ಹೊತ್ತಿಗೆ ಸರಿಯಾಗಿ ಲಕ್ಷ್ಮಣ್ ಶಿವರಾಮಕೃಷ್ಣನ್ಹೆಸರು ಮುನ್ನಲೆಗೆ ಬಂದಿದೆ. ವೀಕ್ಷಕ ವಿವರಣೆಕಾರರಾಗಿರುವ ಲಕ್ಷ್ಮಣ್, ಭಾರತ ಪರ 9 ಟೆಸ್ಟ್ ಹಾಗೂ 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾಗಲಕ್ಷ್ಮಣ್ ವಯಸ್ಸು, 17 ವರ್ಷ 118 ದಿನಗಳು. 80 ದಶಕದಲ್ಲಿ ಸ್ಪಿನ್ ಬೌಲಿಂಗ್ನಲ್ಲಿ ಭರವಸೆ ಮೂಡಿಸಿದ್ದರಾದರೂ ಸಾಕಷ್ಟು ಯಶಸ್ಸು ಕಂಡಿರಲಿಲ್ಲ. 1989ರಲ್ಲಿ ಸಚಿನ್ ತೆಂಡೂಲ್ಕರ್ ಪದಾರ್ಪಣೆ ಮಾಡುವವರೆಗೆ ಭಾರತ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅತಿ ಕಿರಿಯ ಆಟಗಾರ ಎನಿಸಿದ್ದರು.

ವೀರೇಂದ್ರ ಸೆಹ್ವಾಗ್
ಎಂಎಸ್ಕೆ ಪ್ರಸಾದ್ ಮತ್ತು ಅವರ ತಂಡದ ಸದಸ್ಯರನ್ನು ಅತಿ ಹೆಚ್ಚು ಟೀಕಿಸಿದವರಲ್ಲಿವೀರೇಂದ್ರ ಸೆಹ್ವಾಗ್ ಪ್ರಮುಖರು.

ಇದನ್ನೂ ಓದಿ:ತಂದೆ ಆಸೆಯಂತೆ ಕ್ರಿಕೆಟ್ ಶಾಲೆ, ಮಕ್ಕಳಿಗೆ ಧೋನಿ–ವಿರಾಟ್ ಪ್ರೇರಣೆಯಾಗಲಿ: ವೀರೂ

104 ಟೆಸ್ಟ್, 251 ಏಕದಿನಹಾಗೂ 19 ಟಿ20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿರುವ ಸೆಹ್ವಾಗ್, ಕ್ರಮವಾಗಿ 8,586 ರನ್, 8,273 ರನ್ ಮತ್ತು394 ರನ್ ಕಲೆಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಭಾರಿಸಿದ ಮೊದಲ ಭಾರತೀಯ ಎಂಬ ಖ್ಯಾತಿಯೂ ಸೆಹ್ವಾಗ್ ಬೆನ್ನಿಗಿದೆ.

ನಾಲ್ಕು ಟೆಸ್ಟ್ ಹಾಗು 12 ಏಕದಿನ ಮತ್ತು ಒಂದು ಟಿ–20 ಪಂದ್ಯದಲ್ಲಿ ತಂಡ ಮುನ್ನಡೆಸಿದ ಅನುಭವವೂ ಇದೆ.

ಇದನ್ನೂ ಓದಿ:ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣ ವೆಚ್ಚ ಭರಿಸುವೆ: ಸೆಹ್ವಾಗ್

2017ರಲ್ಲಿ ಅವರು ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೂ ಅರ್ಜಿ ಸಲ್ಲಿಸಿದ್ದರು. ಆಯ್ಕೆ ಸಮಿತಿ ಮುಖ್ಯಸ್ಥ ಹುದ್ದೆಗಿಂತ ಮುಖ್ಯ ಕೋಚ್ ಹುದ್ದೆ ದೊಡ್ಡದು.ಒಂದು ವೇಳೆ ಸೆಹ್ವಾಗ್ ಅರ್ಜಿ ಸಲ್ಲಿಸಿದರೆ, ಆಯ್ಕೆ ಸಮಿತಿ ಮುಖ್ಯಸ್ಥರಾಗುವುದು ಖಚಿತ ಎನ್ನಲಾಗುತ್ತಿದೆ.

ವೆಂಕಟೇಶ್ ಪ್ರಸಾದ್
ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ ಬಳಿಕ ವೆಂಕಟೇಶ್ ಪ್ರಸಾದ್, ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಭಾರತ ಕ್ರಿಕೆಟ್ ತಂಡ ಮತ್ತು ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಆರ್ಸಿಬಿ, ಕಿಂಗ್ಸ್ ಇಲವೆನ್ ಪಂಜಾಬ್ ತಂಡಗಳ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರೀಯ ಕಿರಿಯರ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿಯೂ ಅನುಭವ ಹೊಂದಿರುವ ಪ್ರಸಾದ್, ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:ವೇಗದ ಬೌಲರ್ ಆಗುವುದು ಕಷ್ಟದ ಕೆಲಸ

ಇದನ್ನೂ ಓದಿ:ಮಹಿಳಾ ತಂಡಕ್ಕೆ ರಾಮನ್ ಕೋಚ್?

2018ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಅವರು, ಬಳಿಕ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಕೂಡಿಕೊಳ್ಳುವ ಸಲುವಾಗಿ ಸ್ಥಾನ ತ್ಯಜಿಸಿದ್ದರು.ಭಾರತ ಪರ 33 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ 2016ರಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.