ಬೆಂಗಳೂರು: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕ್ವಾರ್ಟರ್ಫೈನಲ್ನಲ್ಲಿ ಕರ್ನಾಟಕ ತಂಡವು 8 ವಿಕೆಟ್ಗಳಿಂದ ಪುದುಚೇರಿ ವಿರುದ್ಧ ಜಯಿಸಿತು. ಟಾಸ್ ಗೆದ್ದ ಆತಿಥೇಯ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿಯೇ ಕುಸಿದ ತಂಡಕ್ಕೆ ಸಾಗರ್ ತ್ರಿವೇದಿ (54 ರನ್) ಮತ್ತು ವಿಘ್ನೇಶ್ವರ್ ಮಾರಿಮುತ್ತು (58 ರನ್) ಅರ್ಧಶತಕ ಹೊಡೆದು ಆಸರೆಯಾದರು. ಇದರಿಂದಾಗಿ ತಂಡವು 50 ಓವರ್ಗಳಲ್ಲಿ 9 ವಿಕೆಟ್ಗಳಿಗೆ 207 ರನ್ ಗಳಿಸಿತು.

ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಕೆ.ಎಲ್. ರಾಹುಲ್ (90 ರನ್), ದೇವದತ್ತ ಪಡಿಕ್ಕಲ್ (50) ಮತ್ತು ರೋಹನ್ ಕದಂ (ಔಟಾಗದೆ 50) ಅವರ ಅರ್ಧಶತಕಗಳ ಬಲದಿಂದ 41 ಓವರ್ಗಳಲ್ಲಿ 2 ವಿಕೆಟ್ಗಳಿಗೆ 213 ರನ್ ಗಳಿಸಿತು.

ಹೋದ ವರ್ಷ ಲೀಗ್ ಹಂತದಲ್ಲಿಯೇ ನಿರ್ಗಮಿಸಿದ್ದ ಕರ್ನಾಟಕ ತಂಡವು ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ. ಲೀಗ್ ಹಂತದಲ್ಲಿ ಎ–ಬಿ ಜಂಟಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್ಫೈನಲ್ ಪ್ರವೇಶಿಸಿತ್ತು. ಸೋಮವಾರ ನಡೆಯಲಿರುವ ಕೊನೆಯ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಛತ್ತೀಸಗಡ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಲಿವೆ. ಇದರಲ್ಲಿ ಗೆದ್ದವರು ಸೆಮಿಫೈನಲ್ನಲ್ಲಿ ಕರ್ನಾಟಕವನ್ನು ಎದುರಿಸುವರು.

ಸಂಕ್ಷಿಪ್ತ ಸ್ಕೋರು
ಪುದುಚೇರಿ: 50 ಓವರ್ಗಳಲ್ಲಿ 9ಕ್ಕೆ207 (ಪಾರಸ್ ಡೋಗ್ರಾ 15, ಸಾಗರ್ ತ್ರಿವೇದಿ 54, ವಿಘ್ನೇಶ್ವರ್ ಮಾರಿಮುತ್ತು 58, ಫಬೀದ್ ಫಾರೂಕ್ ಅಹಮದ್ 37, ಆರ್. ವಿನಯಕುಮಾರ್ 2, ಅಭಿಮನ್ಯು ಮಿಥುನ್ 35ಕ್ಕೆ2, ಪ್ರಸಿದ್ಧಕೃಷ್ಣ 3ಕ್ಕೆ1, ವಿ. ಕೌಶಿಕ್ 33ಕ್ಕೆ2, ಪ್ರವೀಣಕುಮಾರ್ ದುಬೆ 44ಕ್ಕೆ3)
ಕರ್ನಾಟಕ: 41 ಓವರ್ಗಳಲ್ಲಿ 2ಕ್ಕೆ213 (ಕೆ.ಎಲ್. ರಾಹುಲ್ 90, ದೇವದತ್ತ ಪಡಿಕ್ಕಲ್ 50, ರೋಹನ್ ಕದಂ ಔಟಾಗದೆ 50, ಮನೀಷ್ ಪಾಂಡೆ ಔಟಾಗದೆ 20, ಸಾಗರ್ ಪರೇಶ್ ಉದೇಶಿ 47ಕ್ಕೆ2)
ಫಲಿತಾಂಶ: ಕರ್ನಾಟಕ ತಂಡಕ್ಕೆ 8 ವಿಕೆಟ್ಗಳ ಜಯ

ಜಸ್ಟ್ ಕ್ರಿಕೆಟ್ ಮೈದಾನ
ಗುಜರಾತ್: 37.5 ಓವರ್ಗಳಲ್ಲಿ 4ಕ್ಕೆ225 (ಪಾರ್ಥಿವ್ ಪಟೇಲ್ 76, ಪ್ರಿಯಾಂಕ್ ಪಾಂಚಾಲ್ 80, ಧ್ರುವ ರಾವಳ್ ಔಟಾಗದೆ 34, ಅಕ್ಷರ್ ಪಟೇಲ್ ಔಟಾಗದೆ 13, ಸಮರಜೀತ್ ಸಿಂಗ್ 54ಕ್ಕೆ2)
ದೆಹಲಿ: 49 ಓವರ್ಗಳಲ್ಲಿ 223 (ಧ್ರುವ ಶೋರೆ 91, ನಿತೀಶ್ ರಾಣಾ 33, ಹಿಮ್ಮತ್ ಸಿಂಗ್ 26, ಲಲಿತ್ ಯಾದವ್ 28, ಚಿಂತನ್ ಗಜ 27ಕ್ಕೆ3, ಅರ್ಜನ್ ನಾಗ್ವಾಸವಲ್ಲಾ 75ಕ್ಕೆ3, ಪಿಯೂಷ್ ಚಾವ್ಲಾ 40ಕ್ಕೆ2)
ಫಲಿತಾಂಶ:ಗುಜರಾತ್ ತಂಡಕ್ಕೆ 6 ವಿಕೆಟ್ಗಳ ಜಯ (ವಿಜೆಡಿ ಪದ್ಧತಿ)

ಸೋಮವಾರದ ಕ್ವಾರ್ಟರ್ಫೈನಲ್ಗಳು
ಪಂಜಾಬ್–ತಮಿಳುನಾಡು
ಛತ್ತೀಸಗಡ–ಮುಂಬೈ

ಸ್ಥಳ: ಆಲೂರು, ಕೆಎಸ್ಸಿಎ ಕ್ರೀಡಾಂಗಣ 1 ಮತ್ತು 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.