ಪುದುಚೇರಿ: ಐದು ವಿಕೆಟ್ ಗೊಂಚಲು ಗಳಿಸಿದ ಕನ್ನಡಿಗ ವಿದ್ವತ್ ಕಾವೇರಪ್ಪ ಅವರ ಅಮೋಘ ಬೌಲಿಂಗ್ನಿಂದ ದಕ್ಷಿಣ ವಲಯ ತಂಡವು ಸೋಮವಾರ ಆರಂಭವಾದ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಮಳೆ ಅಡ್ಡಿಯಾದ ಪಂದ್ಯದಲ್ಲಿ ದಕ್ಷಿಣ ವಲಯ ತಂಡವು ವಿ.ಜಯದೇವನ್ ಪದ್ಧತಿಯ ಅನ್ವಯ, ಉತ್ತರ ವಲಯದ ವಿರುದ್ಧ 185 ರನ್ಗಳಿಂದ ಗೆದ್ದಿತು.

ಟಾಸ್ ಗೆದ್ದ ದಕ್ಷಿಣ ವಲಯ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರೋಹನ್ ಕುನ್ನುಮಲ್ (70; 61ಎ, 4X8, 6X3) ಮತ್ತು ನಾಯಕ ಮಯಂಕ್ ಅಗರವಾಲ್ (64; 68ಎ, 4X7) ಮೊದಲ ವಿಕೆಟ್ ಜೊತೆಯಾಟದಲ್ಲಿ 117 ರನ್ ಸೇರಿಸಿದರು. ಇದರಿಂದಾಗಿ ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 303 ರನ್ ಗಳಿಸಿತು.

ಆದರೆ ನಂತರದ ಅವಧಿಯಲ್ಲಿ ಮಳೆ ಸುರಿಯಿತು. ಅದಕ್ಕಾಗಿ ಗೆಲುವಿನ ಗುರಿಯ ಮೊತ್ತವನ್ನು ಪರಿಷ್ಕರಿಸಲಾಯಿತು. 40 ಓವರ್ಗಳಲ್ಲಿ 246 ರನ್ಗಳಿಗೆ ನಿಗದಿಗೊಳಿಸಲಾಯಿತು. ಆದರೆ, ವಿದ್ವತ್ ಕಾವೇರಪ್ಪ (6–1–17–5) ಅವರ ದಾಳಿಯ ಮುಂದೆ ಉತ್ತರ ವಲಯ ಕುಸಿಯಿತು. ಈಚೆಗೆ ದುಲೀಪ್ ಟ್ರೋಫಿ ಟೂರ್ನಿಯಲ್ಲಿಯೂ ವಿದ್ವತ್ ಎರಡು ಸಲ ಐದು ವಿಕೆಟ್ಗಳ ಗೊಂಚಲು ಗಳಿಸಿದ್ದರು.

ಆಕಾಶ್, ಶಹಬಾಜ್ ಮಿಂಚು: ಆಕಾಶ್ ದೀಪ್ ಮತ್ತು ಶಹಬಾಜ್ ಅಹಮದ್ ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ಪೂರ್ವ ವಲಯ ತಂಡವು 6 ವಿಕೆಟ್ಗಳಿಂದ ಕೇಂದ್ರ ವಲಯವನ್ನು ಸೋಲಿಸಿತು.

ಇನ್ನೊಂದು ಪಂದ್ಯದಲ್ಲಿ ಪಶ್ಚಿಮ ವಲಯವು ಈಶಾನ್ಯ ವಲಯದ ವಿರುದ್ಧ 9 ವಿಕೆಟ್ಗಳಿಂದ ಸುಲಭ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರು:

ದಕ್ಷಿಣ ವಲಯ: 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 303 (ರೋಹನ್ ಕುನ್ನುಮಲ್ 70, ಮಯಂಕ್ ಅಗರವಾಲ್ 64. ಎನ್. ಜಗದೀಶನ್ 72, ರಿಕಿ ಭುಯ್ 31, ರಿಷಿ ಧವನ್ 30ಕ್ಕೆ2, ಮಯಂಕ್ ಮಾರ್ಕಂಡೆ 53ಕ್ಕೆ2)

ಉತ್ತರ ವಲಯ: 23 ಓವರ್ಗಳಲ್ಲಿ 60 (ಶುಭಂ ಖಜೂರಿಯಾ 10, ಮನದೀಪ್ ಸಿಂಗ್ ಔಟಾಗದೆ 18, ವಿದ್ವತ್ ಕಾವೇರಪ್ಪ 17ಕ್ಕೆ5, ವೈಶಾಖ ವಿಜಯಕುಮಾರ್ 8ಕ್ಕೆ2)

ಫಲಿತಾಂಶ: ದಕ್ಷಿಣ ವಲಯ ತಂಡಕ್ಕೆ 185 ರನ್ ಜಯ (ವಿಜೆಡಿ ಪದ್ಧತಿ)

ಕೇಂದ್ರ ವಲಯ: 50 ಓವರ್ಗಳಲ್ಲಿ 207 (ಆರ್ಯನ್ ಜುಯಾಲ್ ಔಟಾಗದೆ 39, ಶಿವಂ ಚೌಧರಿ 22, ರಿಂಕು ಸಿಂಗ್ 54, ಕರಣ್ ಶರ್ಮಾ 32, ಮಣಿಶಂಕರ್ ಮುರಾಸಿಂಗ್ 29ಕ್ಕೆ3, ಆಕಾಶ್ ದೀಪ್ 35ಕ್ಕೆ3, ಶಹಬಾಜ್ ಅಹಮದ್ 30ಕ್ಕೆ3)

ಪೂರ್ವ ವಲಯ: 46.1 ಓವರ್ಗಳಲ್ಲಿ 4 ವಿಕೆಟ್ಗಳಿಗೆ 208 (ಅಭಿಮನ್ಯು ಈಶ್ವರನ್ 38, ಉತ್ಕರ್ಷ್ ಸಿಂಗ್ 89, ಶುಭ್ರಾಂಶು ಸೇನಾಪತಿ ಔಟಾಗದೆ 33, ಕರಣ್ ಶರ್ಮಾ 35ಕ್ಕೆ3)

ಫಲಿತಾಂಶ: ಪೂರ್ವ ವಲಯಕ್ಕೆ 6 ವಿಕೆಟ್ಗಳ ಜಯ.

ಈಶಾನ್ಯ ವಲಯ: 47 ಓವರ್ಗಳಲ್ಲಿ 207 ಜೆಹು ಆ್ಯಂಡರ್ಸನ್ 24, ಲ್ಯಾಂಗ್ಲೊನಿಯಾಂಬ ಕೀಶಾಂಗ್ಬನ್ 30, ರೆಕ್ಸ್ ಸಿಂಗ್ 23, ಪಾಲ್ಜಾರ್ ತಮಾಂಗ್ 29, ಇಮ್ಲಿವತಿ ಲೆಮ್ತೂರ್ 38, ಅರ್ಜನ್ ನಾಗವಾಸವಾಲಾ 31ಕ್ಕೆ3, ಶಮ್ಸ್ ಮುಲಾನಿ 37ಕ್ಕೆ2, ಶಿವಂ ದುಬೆ 36ಕ್ಕೆ2)

ಪಶ್ಚಿಮ ವಲಯ: 25.1 ಓವರ್ಗಳಲ್ಲಿ 1 ವಿಕೆಟ್ಗೆ 208 (ಹರ್ವಿಕ್ ದೇಸಾಯಿ 85, ಪ್ರಿಯಾಂಕ್ ಪಾಂಚಾಲ್ ಔಟಾಗದೆ 99, ರಾಹುಲ್ ತ್ರಿಪಾಠಿ ಔಟಾಗದೆ 13)

ಫಲಿತಾಂಶ: ಪಶ್ಚಿಮ ವಲಯಕ್ಕೆ 9 ವಿಕೆಟ್ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.