ಮುಂಬೈ: ಮಹಿಳೆಯರ ಪ್ರೀಮಿಯರ್ ಲೀಗ್(ಎಂಪಿಎಲ್) ಕ್ರಿಕೆಟ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡದ ಆಟಗಾರ್ತಿ ಸೋಫಿಯಾ ಡಂಕ್ಲೀ ಈ ಪಂದ್ಯಾವಳಿಯ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ್ದಾರೆ.

ಕೇವಲ 18 ಎಸೆತಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಕೇವಲ 8 ರನ್‌ಗಳಿಗೆ ಆರಂಭಿಕ ಆಟಗಾರ್ತಿ ಸಬ್ಬಿನೇನಿ ಮೇಘನಾ ಔಟ್ ಆದ ಬಳಿಕ ರನ್ ಗತಿ ಹೆಚ್ಚಿಸಿದ ಸೋಫಿಯಾ, ನಿರ್ಭೀತಿಯಿಂದ ಬ್ಯಾಟ್ ಬೀಸಿದರು.

ರೇಣುಕಾ ಠಾಕೂರ್ ಎಸೆದ ನಾಲ್ಕನೇ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ ಸೋಫಿಯಾ, ಪ್ರೀತಿ ಬೋಸ್ ಎಸೆದ ಐದನೇ ಓವರ್‌ನಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್(4.6.4.4.4) ಸಹಿತ 22 ರನ್ ಸಿಡಿಸಿ ಅರ್ಧಶತಕ ಪೂರೈಸಿದರು.

ವಿಶ್ವದ ಮಹಿಳೆಯರ ಟಿ–20 ಕ್ರಿಕೆಟ್‌ನಲ್ಲಿ ಇದು ನಾಲ್ಕನೇ ವೇಗದ ಅರ್ಧಶತಕವಾಗಿದೆ.

ಒಟ್ಟಾರೆ ಸೋಫಿಯಾ 28 ಎಸೆತಗಳಲ್ಲಿ 65 ರನ್ ಸಿಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.