ದುಬೈ: ಏಷ್ಯಾಕಪ್–2022 ಟೂರ್ನಿಯಲ್ಲಿ ಬುಧವಾರ ಬಲಿಷ್ಠ ಭಾರತ ತಂಡವನ್ನು ಎದುರಿಸಿದ ಹಾಂಕ್ ಕಾಂಗ್ ತಂಡ 40 ರನ್ಗಳ ಸೋಲಿನ ಕಹಿ ಅನುಭವಿಸಿತು. ಆದರೆ, ತಂಡದ ಆಟಗಾರ ಕಿಂಚಿತ್ ಶಾ ಅವರು ಪಂದ್ಯವನ್ನು ಅವಿಸ್ಮರಣೀಯಗೊಳಿಸಿದ್ದಾರೆ.

ಹಾಂಗ್ ಕಾಂಗ್ ಪರ 10 ಏಕದಿನ ಪಂದ್ಯ ಮತ್ತು 44 ಟಿ20 ಪಂದ್ಯಗಳನ್ನು ಆಡಿರುವ 26 ವರ್ಷದ ಆಲ್ ರೌಂಡರ್ ಕಿಂಚಿತ್ ಶಾ, ಪಂದ್ಯದ ನಂತರ ಕ್ರೀಡಾಂಗಣದಲ್ಲಿ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಂಡರು. ಮೊಣಕಾಲೂರಿ, ಉಂಗುರವನ್ನು ಅರ್ಪಿಸಿದ ಕ್ರಿಕೆಟರ್ನ ಪ್ರಸ್ತಾಪವನ್ನು ಗೆಳತಿ ಒಪ್ಪಿಕೊಂಡರು. ನಂತರ ಇಬ್ಬರೂ ಅಪ್ಪಿಕೊಳ್ಳುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಹೀಗಾಗಿ ಈ ಪಂದ್ಯ ವಿಶೇಷವೆನಿಸಿದೆ.

ಕ್ರಿಕೆಟರ್ನ ಪ್ರೇಮ ನಿವೇದನೆಯ ಕ್ಷಣದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕಿಂಚಿತ್ ಶಾ ಅವರ ನಿವೇದನೆಯನ್ನು ಕಂಡು ಕ್ರಿಕೆಟಿಗರು, ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದರು. ಅಲ್ಲದೆ, ಅವರ ಪ್ರಸ್ತಾವ ಅಂಗೀಕಾರಗೊಂಡಿದ್ದಕ್ಕೆ ಅಭಿನಂದನೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.