ನವದೆಹಲಿ: ದಿಗ್ಗಜ ಆಟಗಾರ ಸುನಿಲ್ ಗಾವಸ್ಕರ್ ಒಳಗೊಂಡಂತೆ ಭಾರತ ಕ್ರಿಕೆಟ್ ತಂಡದ ಕೆಲವು ಮಾಜಿ ಆಟಗಾರರ ಭೇಟಿ ಸಾಧ್ಯವಾಗಿದ್ದು ನನಗೆ ದೊರೆತ ದೊಡ್ಡ ಗೌರವ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆ್ಯಂಟನಿ ಅಲ್ಬೆನೀಸ್ ಹೇಳಿದ್ದಾರೆ.

ಅಲ್ಬೆನೀಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ– ಆಸ್ಟ್ರೇಲಿಯಾ ನಡುವಣ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನದ ಆಟವನ್ನು ಕೆಲಹೊತ್ತು ವೀಕ್ಷಿಸಿದ್ದರು. ಈ ವೇಳೆ ಕೆಲವು ಮಾಜಿ ಆಟಗಾರರು ಕ್ರೀಡಾಂಗಣದಲ್ಲಿದ್ದರು.

‘ಗಾವಸ್ಕರ್, ವಿವಿಎಸ್ ಲಕ್ಷ್ಕಣ್ ಮತ್ತು ಹರಭಜನ್ ಸಿಂಗ್ ಅವರನ್ನು ಭೇಟಿಯಾಗಿದ್ದು ದೊಡ್ಡ ಗೌರವ ಎನ್ನಬೇಕು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಚಾಲನೆ ನೀಡಿದ್ದು ಕೂಡಾ ಹೆಮ್ಮೆಯ ಸಂಗತಿ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.