ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಾಖಲಿಸಿದ ಶತಕವನ್ನು ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ’ಗಾಜಾದ ನಮ್ಮ ಸೋದರ ಸೋದರಿಯರಿಗೆ ಅರ್ಪಿಸುತ್ತೇನೆ’ ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

‘ಗಾಜಾದಲ್ಲಿರುವ ನಮ್ಮ ಸೋದರ ಸೋದರಿಯರಿಗೆ ಇದು ಅರ್ಪಣೆ. ತಂಡದ ಗೆಲುವಿಗೆ ಕಾಣಿಕೆ ನೀಡಿದ್ದಕ್ಕೆ ಖುಷಿ ಇದೆ’ ಎಂದು ಅವರು ಹೇಳಿದ್ದಾರೆ.

‘ಇದರ ಶ್ರೇಯ ಇಡೀ ತಂಡಕ್ಕೆ ಸೇರಬೇಕು. ವಿಶೇಷವಾಗಿ ಗುರಿ ಸುಲಭವಾಗಿಸಿದ ಅಬ್ದುಲ್ಲಾ ಶಫೀಕ್ ಹಾಗೂ ಹಸನ್ ಅಲಿಯವರಿಗೆ’ ಎಂದು ಬರೆದುಕೊಂಡಿದ್ದಾರೆ.

‘ಅದ್ಭುತವಾದ ಆತಿಥ್ಯ ಮತ್ತು ಬೆಂಬಲಕ್ಕಾಗಿ ಹೈದರಾಬಾದ್ನ ಜನರಿಗೆ ಅತ್ಯಂತ ಕೃತಜ್ಞರಾಗಿರುತ್ತೇನೆ’ ಎಂದು ಅವರು ಪೋಸ್ಟ್ನಲ್ಲಿ ಹೇಳಿದ್ದಾರೆ.

ಅವರ ಪೋಸ್ಟ್ ಅನ್ನು ಸುಮಾರು 1ಕೋಟಿ 20 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಮಂಗಳವಾರ ಹೈದರಾಬಾದ್ನಲ್ಲಿ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ರಿಜ್ವಾನ್ 131 ರನ್ ಗಳಿಸಿದ್ದರು. ಶ್ರೀಲಂಕಾ ನೀಡಿದ್ದ 345ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಲು ಪಾಕಿಸ್ತಾನಕ್ಕೆ ರಿಜ್ವಾನ್ ಅವರ ಶತಕ ನೆರವಾಗಿತ್ತು.

ರಿಜ್ವಾನ್ ಅವರ ಟ್ವೀಟ್ಗೆ ಪರ–ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆವರ ಪೋಸ್ಟ್ಗೆ ಹಲವು ಮಂದಿ ಕಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ತನ್ನ ಪಂದ್ಯದ ಗೆಲುವಿನ ಇನಿಂಗ್ಸ್ ಅನ್ನು ಗಾಜಾ ಮತ್ತು ಇಸ್ರೇಲ್ನಲ್ಲಿ ಮಡಿದ ಎಲ್ಲಾ ಹೋರಾಟಗಾರರಲ್ಲದವರಿಗೆ ಅರ್ಪಿಸಬೇಕಿತ್ತಲ್ಲವೇ? ಮಾನವೀಯತೆ ಎಲ್ಲಕ್ಕಿಂತ ಮೊದಲು ಹಾಗೂ ಮಿಗಿಲು’ ಎಂದು ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.