ದುಬೈ: ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಸಹಭಾಗಿತ್ವದಲ್ಲಿ ಜೂನ್ 1 ರಿಂದ 29 ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ನ ರಾಯಭಾರಿಯಾಗಿ ಸ್ಪ್ರಿಂಟ್ ದಂತಕಥೆ ಉಸೇನ್ ಬೋಲ್ಟ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ನೇಮಕ ಮಾಡಿದೆ.

ಜಮೈಕಾದ ಬೋಲ್ಟ್ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ 100 ಮೀಟರ್, 200 ಮೀಟರ್ ಮತ್ತು 4×100 ಮೀಟರ್ ಓಟಗಳಲ್ಲಿ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಬೋಲ್ಟ್ ಪ್ರಸ್ತುತ 100 ಮೀಟರ್, 200 ಮೀಟರ್ ಮತ್ತು 4×100 ಮೀಟರ್ ರಿಲೇ ಓಟದಲ್ಲಿ (ಕ್ರಮವಾಗಿ 9.58 ಸೆಕೆಂಡು, 19.19 ಸೆಕೆಂಡು ಮತ್ತು 36.84 ಸೆಕೆಂಡು) ವಿಶ್ವ ದಾಖಲೆಗಳ ಒಡೆಯರಾಗಿದ್ದಾರೆ.

ವಿಶ್ವಕಪ್ನಲ್ಲಿ ತಮ್ಮ ಹೊಸ ಪಾತ್ರದ ಬಗ್ಗೆ ಬೋಲ್ಟ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಐಸಿಸಿ ಪುರುಷರ ಟಿ20 ವಿಶ್ವಕಪ್ಗೆ ರಾಯಭಾರಿ ಆಗಿರುವುದಕ್ಕೆ ರೋಮಾಂಚನಗೊಂಡಿದ್ದೇನೆ. ಕ್ರಿಕೆಟ್ ಜೀವನದ ಭಾಗವಾಗಿರುವ ಕೆರಿಬಿಯನ್ನಿಂದ ಬಂದ ಈ ಕ್ರೀಡೆ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ‘ ಎಂದು ಬೋಲ್ಟ್ ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಾನು ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಬೆಂಬಲಿಸುತ್ತೇನೆ. ಅಮೆರಿಕಕ್ಕೆ ಈ ಕ್ರೀಡೆ ದೊಡ್ಡ ಮಾರುಕಟ್ಟೆ ಒದಗಿಸಲಿದೆ. ಟಿ20 ವಿಶ್ವಕಪ್ 2028ರ ಲಾಸ್ ಏಜಂಲಿಸ್ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಕಾರಣವಾಗುವ ದೊಡ್ಡ ಅವಕಾಶ’ ಎಂದು ಅವರು ಹೇಳಿದರು.

ರಾಯಭಾರಿಯಾಗಿ ಬೋಲ್ಟ್ ಟಿ20 ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಮುಂದಿನ ವಾರ ಟೂರ್ನಿಯ ಅಧಿಕೃತ ಗೀತೆಯ ಬಿಡುಗಡೆಯಲ್ಲಿ ಕಲಾವಿದರಾದ ಸೀನ್ ಪಾಲ್ ಮತ್ತು ಕೆಸ್ ಅವರೊಂದಿಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲ್ಲಾರ್ಡೈಸ್ ಮಾತನಾಡಿ, ‘ಉಸೇನ್ ಬೋಲ್ಟ್ ಜಾಗತಿಕ ಐಕಾನ್. ಅವರನ್ನು ಟಿ20 ವಿಶ್ವಕಪ್ ರಾಯಭಾರಿಯಾಗಿ ಹೊಂದಿರುವುದು ರೋಮಾಂಚನ ಮೂಡಿಸಿದೆ. ಕ್ರಿಕೆಟ್ ಬಗ್ಗೆ ಅವರ ಪ್ರೀತಿ ಎಲ್ಲರಿಗೂ ಗೊತ್ತಿರುವುದೇ. ಈ ಪಾತ್ರಕ್ಕೆ ಅವರು ಸರಿಯಾಗಿ ಹೊಂದಿಕೆಯಾಗುತ್ತಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.