ವಿಶಾಖಪಟ್ಟಣ: ವಿಶ್ವಕಪ್ ಕ್ರಿಕೆಟ್ ಟೂರ್ನಿಗೂ ಮುನ್ನ ನಡೆಯುವ ನಿಗದಿತ ಓವರ್ಗಳ ಕೊನೆಯ ಸರಣಿಗಳಿಗೆ ಭಾರತ ತಂಡ ಸಜ್ಜಾಗಿದೆ. ಆಸ್ಟ್ರೇಲಿಯಾ ಎದುರಿನ ಎರಡು ಟ್ವೆಂಟಿ–20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಭಾನುವಾರ ಇಲ್ಲಿ ನಡೆಯಲಿದೆ. ನಂತರ ಐದು ಏಕದಿನ ಪಂದ್ಯಗಳು ನಡೆಯಲಿವೆ.

ಮೂರು ವಾರಗಳ ವಿಶ್ರಾಂತಿಯ ವಿರಾಟ್ ಕೊಹ್ಲಿ ಅಂಗಣಕ್ಕೆ ಇಳಿಯಲಿದ್ದಾರೆ. ವಿಶ್ವಕಪ್ಗೆ ತಂಡವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಈ ಸರಣಿಗಳ ಪಂದ್ಯಗಳು ಮಹತ್ವದ್ದಾಗಿದ್ದು ಆಟಗಾರರು ಸಂಪೂರ್ಣ ಸಾಮರ್ಥ್ಯವನ್ನು ಸಾಬೀತು ಮಾಡಲು ಪ್ರಯತ್ನಿಸಲಿದ್ದಾರೆ. ರಿಷಭ್ ಪಂತ್ ಮತ್ತು ವಿಜಯಶಂಕರ್ ಮೇಲೆ ಕಿಚ್ ರವಿಶಾಸ್ತ್ರಿ ಮತ್ತು ನಾಯಕ ಕೊಹ್ಲಿ ಕಣ್ಣಿಡಲಿದ್ದಾರೆ. ವಿಕೆಟ್ ಕೀಪಿಂಗ್ನಲ್ಲಿ ಪಂತ್ ಮತ್ತು ದಿನೇಶ್ ಕಾರ್ತಿಕ್ ನಡುವೆ ಭಾರಿ ಪೈಪೋಟಿ ನಡೆಯಲಿದೆ.

ಬೆನ್ನುನೋವಿನಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಈ ಸರಣಿಗಳಿಗೆ ಲಭ್ಯರಿಲ್ಲ. ಅವರ ಅನುಪಸ್ಥಿತಿಯಲ್ಲಿ ಮಿಂಚಲು ವಿಜಯ್ ಶಂಕರ್ಗೆ ಉತ್ತಮ ಅವಕಾಶವಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಸಮಸ್ಯೆಗಳನ್ನು ಎದುರಿಸಿದ್ದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲು ಜಸ್ಪ್ರೀತ್ ಬೂಮ್ರಾ ಮರಳಿದ್ದಾರೆ.

ಟ್ವೆಂಟಿ–20 ಕ್ರಿಕೆಟ್ನಲ್ಲಿ ರವಿಚಂದ್ರನ್ ಅಶ್ವಿನ್ ನಂತರ 50 ವಿಕೆಟ್ ಕಬಳಿಸಿದ ಏಕೈಕ ಬೌಲರ್ ಎನಿಸಿರುವ ಬೂಮ್ರಾ ಅವರು ಸರಣಿಯಲ್ಲಿ ಉತ್ತಮ ಸಾಧನೆ ಮಾಡುವ ಭರವಸೆಯಲ್ಲಿದ್ದಾರೆ. ಸ್ಪಿನ್ ವಿಭಾಗಕ್ಕೆ ಮೊನಚು ನೀಡಲು ಯಜುವೇಂದ್ರ ಚಾಹಲ್ ಮತ್ತು ಕೃಣಾಲ್ ಪಾಂಡ್ಯ ಅವರ ಜೊತೆ ಲೆಗ್ ಬ್ರೇಕ್ ಬೌಲರ್ ಮಯಂಕ್ ಮಾರ್ಕಂಡೆ ಕೂಡ ಇದ್ದಾರೆ.

ನ್ಯೂಜಿಲೆಂಡ್ನಲ್ಲಿ ಇತ್ತೀಚೆಗೆ ನಡೆದ ಸರಣಿಯಲ್ಲಿ ಸೋತಿರುವ ಭಾರತ ತಂಡ ತವರಿನಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದೆ. ಆಸ್ಟ್ರೇಲಿಯಾ ಎದುರು ಟ್ವೆಂಟಿ–20 ಸರಣಿಯಲ್ಲಿ ಕೊನೆಯದಾಗಿ ಭಾರತ 2016ರಲ್ಲಿ ಗೆದ್ದಿತ್ತು.

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಆಗ 3–0 ಗೆಲುವಿನ ಸಾಧನೆ ಮಾಡಿತ್ತು. ನಂತರ ಅನುಭವಿಸಿದ ಸೋಲಿನ ಕಹಿಯನ್ನು ಮರೆಯಲು ಈ ಸರಣಿಯಲ್ಲಿ ಪ್ರಯತ್ನ ನಡೆಯಲಿದೆ. 2018ರಲ್ಲಿ ಮೂರು ಮಾದರಿಯ ಪಂದ್ಯಗಳಲ್ಲಿ ಒಟ್ಟು 2735 ರನ್ ಕಲೆ ಹಾಕಿದ್ದ ವಿರಾಟ್ ಕೊಹ್ಲಿ ಈ ಬಾರಿಯೂ ಬ್ಯಾಟಿಂಗ್ ವೈಭವ ಮುಂದುವರಿಸುವ ಗುರಿ ಹೊಂದಿದ್ದು, ಇದಕ್ಕೆ ತವರಿನ ಈ ಸರಣಿಗಳಲ್ಲೇ ನಾಂದಿ ಹಾಡಲು ಮುಂದಾಗಲಿದ್ದಾರೆ.

ಆಸ್ಟ್ರೇಲಿಯಾ ಎದುರು ಅವರು ಈ ವರೆಗೆ 13 ಪಂದ್ಯಗಳನ್ನು ಆಡಿದ್ದು 61ರ ಸರಾಸರಿಯಲ್ಲಿ ರನ್ ಕಲೆ ಹಾಕಿದ್ದಾರೆ. ಐದು ಅರ್ಧಶತಕಗಳು ಅವರ ಖಾತೆಯಲ್ಲಿವೆ. ಇದು ಅವರ ವಿಶ್ವಾಸವನ್ನು ಹೆಚ್ಚಿಸಲು ನೆರವಾಗಲಿದೆ.

ಬಿಗ್ ಬ್ಯಾಷ್ನ ಅನುಭವ: ಮೂರು ತಿಂಗಳ ಹಿಂದೆ ಭಾರತದ ವಿರುದ್ಧ ನಡೆದ ಸರಣಿಯ ನಂತರ ಆಸ್ಟ್ರೇಲಿಯಾ ತಂಡ ಟ್ವೆಂಟಿ–20 ಪಂದ್ಯಗಳನ್ನು ಆಡಿಲ್ಲ. ಆದರೆ ಈಚೆಗೆ ನಡೆದ ಬಿಗ್ಬ್ಯಾಷ್ನಲ್ಲಿ ಲಭಿಸಿದ ಅನುಭವ ತಂಡದ ಆಟಗಾರರಲ್ಲಿ ಭರವಸೆ ತುಂಬಿದೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಕೃಣಾಲ್ ಪಾಂಡ್ಯ, ವಿಜಯ್ ಶಂಕರ್, ಯಜುವೇಂದ್ರ ಚಾಹಲ್, ಜಸ್ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಸಿದ್ಧಾರ್ಥ್ ಕೌಲ್, ಮಯಂಕ್ ಮಾರ್ಕಂಡೆ.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಡಿ’ಆರ್ಸಿ ಶಾರ್ಟ್, ಪ್ಯಾಟ್ ಕುಮಿನ್ಸ್, ಅಲೆಕ್ಸ್ ಕ್ಯಾರಿ, ಜೇಸನ್ ಬೆಹ್ರೆಂಡಾರ್ಫ್, ನೇಥನ್ ಕಾಲ್ಟರ್ನೈಲ್, ಪೀಟರ್ ಹ್ಯಾಂಡ್ಸ್ಕಂಬ್, ಉಸ್ಮಾನ್ ಖ್ವಾಜ, ನೇಥನ್ ಲಯನ್, ಗ್ಲೆನ್ ಮ್ಯಾಕ್ಸ್ವೆಲ್, ಜೇ ರಿಚರ್ಡ್ಸನ್, ಕೇನ್ ರಿಚರ್ಡ್ಸನ್, ಮಾರ್ಕಸ್ ಸ್ಟೊಯಿನಿಸ್, ಆ್ಯಶ್ಟನ್ ಟರ್ನರ್, ಆ್ಯಡಂ ಜಂಪಾ.

ಪಂದ್ಯ ಆರಂಭ: ಸಂಜೆ 7.00

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.