ಬೆಂಗಳೂರು: ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದ ಆಟದಲ್ಲಿ ಭಾರತದ ಆಟಗಾರ ರಿಷಬ್ ಪಂತ್ ಉತ್ತಮ ಆರಂಭ ದೊರಕಿಸಿಕೊಟ್ಟಿದ್ದಾರೆ. ಚೇತೇಶ್ವರ ಪೂಜಾರ ಮತ್ತು ರಿಷಬ್ ಪಂತ್ ಆಕರ್ಷಕ ಜತೆಯಾಟ ಪ್ರದರ್ಶಿಸಿದ್ದು, ಟೀಮ್ ಇಂಡಿಯಾ ಸ್ಕೋರ್ ಭೋಜನ ವಿರಾಮದ ವೇಳೆಗೆ 3 ವಿಕೆಟ್ ನಷ್ಟಕ್ಕೆ 206 ಆಗಿದೆ.

ಮೂರನೇ ಟೆಸ್ಟ್ ಪಂದ್ಯದ ಕೊನೆಯ ದಿನವಾದ ಸೋಮವಾರ, ರಿಷಬ್ ಪಂತ್, 97 ಬಾಲ್ ಮೂಲಕ 73 ರನ್ ಗಳಿಸುವಲ್ಲಿ ಯಶಸ್ವಿಯಾದರು. 407 ರನ್ ಗುರಿ ಬೆನ್ನಟ್ಟಲು ಟೀಂ ಇಂಡಿಯಾಗೆ 201 ರನ್ ಅವಶ್ಯಕತೆಯಿದ್ದು, ಚೇತೇಶ್ವರ ಪೂಜಾರ ಕೂಡ ಜತೆಯಾಗಿದ್ದಾರೆ. ಇಬ್ಬರ ಜತೆಯಾಟ ಭಾರತಕ್ಕೆ 104 ರನ್ ಸೇರ್ಪಡೆ ಮಾಡಿದೆ. ಪೂಜಾರ 147 ಎಸೆತಗಳಲ್ಲಿ 41 ರನ್ ಗಳಿಸಿದರೆ, ಪಂತ್ 8 ಬೌಂಡರಿ ಜತೆಗೆ 3 ಸಿಕ್ಸ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

407 ರನ್ ಗುರಿ

ಟೀಂ ಇಂಡಿಯಾ ಗೆಲುವಿಗೆ ಸೋಮವಾರದ ಪಂದ್ಯದಲ್ಲಿ ಒಟ್ಟಾರೆ 407 ರನ್ ಬೇಕಾಗಿದ್ದು, ಪಂತ್ ಗುರಿ ಬೆನ್ನಟ್ಟುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ:ಆಸೀಸ್ ಅಭಿಮಾನಿಗಳು ಅಸಂಬದ್ಧವಾಗಿ ವರ್ತಿಸುವುದು ಇದೇ ಮೊದಲಲ್ಲ: ಹರಭಜನ್ ಸಿಂಗ್

ಭಾನುವಾರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರ ವಿರುದ್ಧ ಆಸ್ಟ್ರೇಲಿಯಾ ಪ್ರೇಕ್ಷಕರು ಜನಾಂಗೀಯ ನಿಂದನೆ ನಡೆಸಿದ್ದು ಮತ್ತು ಕ್ರಿಕೆಟಿಗರನ್ನು ದೂಷಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಗೆಲುವಿನ ಮೂಲಕ ಉತ್ತರ ನೀಡಲು ಟೀಮ್ ಇಂಡಿಯಾ ಮುಂದಾಗಿದೆ.

ಇದನ್ನೂ ಓದಿ:ಜನಾಂಗೀಯ ನಿಂದನೆ ಗೂಂಡಾ ವರ್ತನೆಯ ಪರಮಾವಧಿ: ವಿರಾಟ್ ಕೊಹ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.