ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಶತಕ ಗಳಿಸಿ ದಾಖಲೆ ಬರೆದಿದ್ದಾರೆ.

ತಮ್ಮ ನೂರನೇ ಪಂದ್ಯದಲ್ಲಿ ಅವರು ನೂರು ರನ್ ಗಳಿಸಿ ಸಂಭ್ರಮಿಸಿದ್ದಾರೆ. ನೂರನೇ ಪಂದ್ಯದಲ್ಲಿ ಶತಕ ಗಳಿಸಿದ ವಿಶ್ವದ 9ನೇ ಆಟಗಾರ ಎಂಬ ಖ್ಯಾತಿಗೆ ಜೋ ರೂಟ್ ಪಾತ್ರರಾದರು. ಇಂದಿನ ಶತಕವೂ ಸೇರಿ ರೂಟ್ ಅವರ ಖಾತೆಯಲ್ಲಿ ಒಟ್ಟು 20 ಟೆಸ್ಟ್ ಶತಕಗಳಿವೆ

ಹ್ಯಾಟ್ರಿಕ್ ಶತಕ: ವಿಶ್ವದ ಮೊದಲ ಸಾಧನೆ

ನೂರನೇ ಪಂದ್ಯದಲ್ಲಿ ಶತಕಗಳಿಸಿದ ಜೋ ರೂಟ್ ಇಲ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ. ಈ ಹಿಂದಿನ 98, 99ನೇ ಪಂದ್ಯದಲ್ಲೂ ಅವರು ಶತಕ ಗಳಿಸಿದ್ದರು. 98, 99, 100ನೇ ಪಂದ್ಯದ ಮೂಲಕ ಹ್ಯಾಟ್ರಿಕ್ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಖ್ಯಾತಿಯನ್ನೂ ಅವರು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದಿನ ಎರಡು ಶತಕಗಳು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೂಡಿ ಬಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.