ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ 2022ನೇ ಸಾಲಿನ ಉದ್ಘಾಟನಾ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಧೋನಿ ಅಮೋಘ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ ನಾಯಕ ಸ್ಥಾನ ತೊರೆದ ಬೆನ್ನಲ್ಲೇ ಆಕರ್ಷಕಅರ್ಧಶತಕ ಬಾರಿಸಿ ಎದುರಾಳಿಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

IPL 2022 LIVE | CSK vs KKR : ಧೋನಿ ಅರ್ಧಶತಕ; ಕೆಕೆಆರ್ ಗೆಲುವಿಗೆ 132 ರನ್ ಗುರಿ ಒಡ್ಡಿದ ಚೆನ್ನೈ Live

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಒಂದು ಹಂತದಲ್ಲಿ 61 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ನಾಯಕ ರವೀಂದ್ರ ಜಡೇಜ ಅವರೊಂದಿಗೆ ಜೊತೆಗೂಡಿದ ಧೋನಿ, ಮುರಿಯದ ಆರನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟ ಕಟ್ಟಿ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು.

ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಅರ್ಧಶತಕ ಪೂರ್ಣಗೊಳಿಸಿದ ಧೋನಿ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.

ಇದನ್ನೂ ಓದಿ:IPL 2022: ಶೆಲ್ಡನ್ ಜ್ಯಾಕ್ಸನ್ ಸ್ಟಂಪಿಂಗ್ ಮ್ಯಾಜಿಕ್; ಧೋನಿಗೆ ಹೋಲಿಸಿದ ಸಚಿನ್

ತಾವು ಎದುರಿಸಿದ್ದ ಮೊದಲ 10 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದ ಧೋನಿ ಅಂತಿಮ 28 ಎಸೆತಗಳಲ್ಲಿ 48 ರನ್ ಬಾರಿಸಿದರು.

ಇದು ಐಪಿಎಲ್‌ನಲ್ಲಿ ಧೋನಿ ಬ್ಯಾಟ್‌ನಿಂದ ಸಿಡಿದ 24ನೇ ಅರ್ಧಶತಕವಾಗಿದೆ. ಮಹಿ ಕೊನೆಯದಾಗಿ 2019ರಲ್ಲಿ ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಫಿಫ್ಟಿ ಗಳಿಸಿದ್ದರು.

ಅಲ್ಲದೆ 40ರ ಹರೆಯದಲ್ಲೂಅದ್ಭುತ ಫಿಟ್‌ನೆಸ್ ಹಾಗೂ ಬ್ಯಾಟಿಂಗ್ ಕೌಶಲ್ಯ ಮೆರೆಯುವ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:IPL 2022: ಧೋನಿ ಸಿಕ್ಸರ್ ನೋಡಲು ಎಬಿ ಡಿವಿಲಿಯರ್ಸ್ ಕಾತರ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.