ಡಬ್ಲಿನ್: ಭಾರತ ತಂಡಕ್ಕೆ ಪುನರಾಗಮನ ಮಾಡಿದ ಜಸ್‌ಪ್ರೀತ್ ಬೂಮ್ರಾ ಮತ್ತು ಪ್ರಸಿದ್ಧ ಕೃಷ್ಣ ಅವರು ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಐರ್ಲೆಂಡ್ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಇವರಿಬ್ಬರು ತಲಾ ಎರಡು ವಿಕೆಟ್ ಪಡೆದರು.

ಮಳೆ ಅಡ್ಡಿಪಡಿಸಿದ ಈ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಎರಡು ರನ್‌ಗಳಿಂದ ಗೆದ್ದುಕೊಂಡು, ಮೂರು ಪಂದ್ಯಗಳ ಸರಣಿಯಲ್ಲಿ 1–0ಯಿಂದ ಮುನ್ನಡೆ ಪಡೆಯಿತು.

ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡ ಬ್ಯಾರಿ ಮೆಕಾರ್ಥಿ ಅವರ ಬಿರುಸಿನ ಅರ್ಧ ಶತಕದ ನೆರವಿನಿಂದ 7 ವಿಕೆಟ್‌ಗಳಿಗೆ 139 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತು. ಈ ಮೊತ್ತವನ್ನು ಬೆನ್ನುಹತ್ತಿದ ಭಾರತ ತಂಡ 6.5 ಓವರುಗಳಲ್ಲಿ 2 ವಿಕೆಟ್‌ಗೆ 47 ರನ್ ಗಳಿಸಿತ್ತು. ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಂಡಿದ್ದು, ರನ್‌ರೇಟ್ ಆಧಾರದಲ್ಲಿ ಭಾರತಕ್ಕೆ ಜಯ ಲಭಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 11 ಓವರುಗಳಲ್ಲಿ 59 ರನ್ನಿಗೆ 6 ವಿಕೆಟ್ ಕಳೆದುಕೊಂಡಿತ್ತು. ಆದರೆ, ಏಳನೇ ವಿಕೆಟ್‌ಗೆ ಕರ್ಟಿಸ್ ಕ್ಯಾಂಫರ್ (39, 33 ಎಸೆತ) ಮತ್ತು ಮೆಕಾರ್ಥಿ (ಔಟಾಗದೇ 51, 33ಎ, 4x6, 4x4) ಅತ್ಯಮೂಲ್ಯ 57 ರನ್ ಸೇರಿಸಿ ಪ್ರತಿರೋಧ ಪ್ರದರ್ಶಿಸಿದರು.

ಅರ್ಷದೀಪ್ ಅವರು ಮಾಡಿದ ಕೊನೆಯ ಓವರ್‌ನ ಕೊನೆಯ ಎಸೆತವನ್ನು ಕವರ್ಸ್ ಮೇಲೆ ಸಿಕ್ಸರ್‌ಗೆತ್ತುವ ಮೂಲಕ ಮೆಕಾರ್ಥಿ ಅರ್ಧಶತಕ ಪೂರೈಸಿದರು. ದುಬಾರಿಯಾದ ಅರ್ಷದೀಪ್ ಈ ಓವರ್‌ನಲ್ಲಿ 22 ರನ್ ತೆತ್ತರು.

ಬೆನ್ನಿನ ಶಸ್ತ್ರಚಿಕಿತ್ಸೆಯಿಂದಾಗಿ 11 ತಿಂಗಳ ಕಾಲ ದೀರ್ಘ ವಿಶ್ರಾಂತಿಯ ನಂತರ ನಾಯಕನಾಗಿ ಮರಳಿದ ಬೂಮ್ರಾ 24 ರನ್ನಿಗೆ 2 ವಿಕೆಟ್ ಪಡೆದರೆ, ಸೊಂಟದ ನೋವಿನಿಂದ ಚೇತರಿಸಿಕೊಂಡಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ 32 ರನ್ನಿಗೆ 2 ವಿಕೆಟ್ ಪಡೆದರು. ಇದು ಪ್ರಸಿದ್ಧ ಅವರ ಮೊದಲ ಟಿ–20 ಪಂದ್ಯ. ಸ್ಪಿನ್ನರ್ ರವಿ ಬಿಷ್ಣೋಯಿ ಕೂಡ ಎರಡು ವಿಕೆಟ್ ಪಡೆದರು.

ಬೂಮ್ರಾ ಮೊದಲ ಓವರ್‌ನಲ್ಲೇ ಆ್ಯಂಡ್ರೂ ಬಲ್ಬರ್ನಿ ಅವರನ್ನು ಬೌಲ್ಡ್ ಮಾಡಿದರು. ಅದೇ ಓವರ್‌ನಲ್ಲಿ ಲೋರ್ಕನ್ ಟಕ್ಕರ್ ಅವರನ್ನೂ ಪೆವಿಲಿಯನ್‌ಗೆ ಮರಳಿಸಿದರು. ನಾಲ್ಕು ಓವರುಗಳ ನಂತರ ದಾಳಿಗಿಳಿದ ಪ್ರಸಿದ್ಧ ಕೃಷ್ಣ ಮೊದಲ ಓವರ್‌ನಲ್ಲೇ ಹ್ಯಾರಿ ಟೆಕ್ಟರ್ (9) ಅವರ ಪರದಾಟಕ್ಕೆ ತೆರೆಯೆಳೆದರು. ಬಿಷ್ಣೋಯಿ ಅವರ ಗೂಗ್ಲಿ ಎಸೆತವನ್ನು ಅರಿಯದೇ ನಾಯಕ ಪಾಲ್ ಸ್ಟರ್ಲಿಂಗ್ (11) ಬೌಲ್ಡ್ ಆದರು. ಪವರ್‌ಪ್ಲೇ ಆಗುವಷ್ಟರಲ್ಲಿ ಐರ್ಲೆಂಡ್ 4 ವಿಕೆಟ್‌ಗೆ 27 ರನ್ ಗಳಿಸಿತ್ತು.

ಭಾರತದ ಆರಂಭಿಕ ಆಟಗಾರ ಜೈಸ್ವಾಲ್ 24 ರನ್ ಗಳಿಸಿದರೆ, ಮತ್ತು ತಿಲಕ್ ವರ್ಮಾ (0) ಬೇಗನೆ ನಿರ್ಗಮಿಸಿದ್ದರು. ಮಳೆ ಆರಂಭವಾದಾಗ ಋತುರಾಜ್ ಗಾಯಕವಾಡ್ 19, ಸಂಜು ಸ್ಯಾಮ್ಸನ್ 1 ರನ್ ಗಳಿಸಿ ಕ್ರೀಸಿನಲ್ಲಿದ್ದರು. ಐರ್ಲೆಂಡ್‌ನ ಕ್ರೇಗ್ ಯಂಗ್ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್: ಐರ್ಲೆಂಡ್: 20 ಓವರುಗಳಲ್ಲಿ 7 ವಿಕೆಟ್‌ಗೆ 139 (ಕರ್ಟಿಸ್ ಕ್ಯಾಂಫರ್ 39, ಬ್ಯಾರಿ ಮೆಕಾರ್ಥಿ ಔಟಾಗದೇ 51; ಜಸ್‌ಪ್ರೀತ್ ಬೂಮ್ರಾ 24ಕ್ಕೆ2, ಪ್ರಸಿದ್ಧ ಕೃಷ್ಣ 32ಕ್ಕೆ2, ರವಿ ಬಿಷ್ಣೋಯಿ 23ಕ್ಕೆ2).

ಭಾರತ: 6.5 ಓವರುಗಳಲ್ಲಿ 2 ವಿಕೆಟ್‌ಗೆ 47 (ಯಶಸ್ವಿ ಜೈಸ್ವಾಲ್ 24, ಋತುರಾಜ್ ಗಾಯಕವಾಡ್ 19; ಕ್ರೇಗ್ ಯಂಗ್ 2ಕ್ಕೆ 2)

ಫಲಿತಾಂಶ: ಭಾರತಕ್ಕೆ 2 ರನ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.