ಬೆಂಗಳೂರು: ತ್ರಿವಳಿ ಮಧ್ಯಮ ವೇಗಿಗಳ ದಾಳಿಯ ನೆರವಿನಿಂದ ಕರ್ನಾಟಕ ತಂಡವು ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದ ಎರಡನೇ ದಿನ ಉತ್ತರಪ್ರದೇಶ ಎದುರು ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು.

ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ ಗಳಿಸಿದ್ದ 253 ರನ್ಗಳಿಗೆ ಉತ್ತರವಾಗಿ ಉತ್ತರಪ್ರದೇಶ ತಂಡವು 37.3 ಓವರ್ಗಳಲ್ಲಿ 155 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಕರ್ನಾಟಕದ ರೋನಿತ್ ಮೋರೆ (47ಕ್ಕೆ3), ವೈಶಾಖ್ ವಿಜಯಕುಮಾರ್ (29ಕ್ಕೆ2) ಮತ್ತು ವಿದ್ವತ್ ಕಾವೇರಪ್ಪ (19ಕ್ಕೆ2) ದಾಳಿಗೆ ಎದುರಾಳಿ ಬ್ಯಾಟಿಂಗ್ ಪಡೆ ತತ್ತರಿಸಿತು. ಇದರಿಂದಾಗಿ ಕರ್ನಾಟಕ ತಂಡವು 98 ರನ್ಗಳ ಮುನ್ನಡೆ ಗಳಿಸಿ, ಎರಡನೇ ಇನಿಂಗ್ಸ್ ಆರಂಭಿಸಿತು.

ಪಂದ್ಯದ ಮೊದಲ ದಿನವಾದ ಸೋಮವಾರ ಟಾಸ್ ಸೋತು ಬ್ಯಾಟಿಂಗ್ ಪಡೆದಿದ್ದ ಕರ್ನಾಟಕವು 72 ಓವರ್ಗಳಲ್ಲಿ 7 ವಿಕೆಟ್ಗಳಿಗೆ 213 ರನ್ ಗಳಿಸಿತ್ತು. ಕ್ರೀಸ್ನಲ್ಲಿದ್ದ ಶ್ರೇಯಸ್ ಗೋಪಾಲ್ ಮಂಗಳವಾರ ಬೆಳಿಗ್ಗೆ ತಂಡದ ಮೊತ್ತಕ್ಕೆ ಮತ್ತಷ್ಟು ರನ್ಗಳ ಕಾಣಿಕೆ ನೀಡಿದರು. ಜೊತೆಗೆ ಅರ್ಧಶತಕ (ಔಟಾಗದೆ 56, 80ಎ, 4X6, 6X2) ಗಳಿಸಿದರು.

ರೋನಿತ್, ವಿದ್ವತ್ ಮತ್ತು ವೈಶಾಖ್ ಅವರು ಉತ್ತಮ ದಾಳಿಯ ಮೂಲಕ ಉತ್ತರಪ್ರದೇಶಕ್ಕೆ ಆರಂಭದಲ್ಲಿಯೇ ಪೆಟ್ಟುಕೊಟ್ಟರು. ಪರಿಣಾಮಕಾರಿ ಸ್ವಿಂಗ್ ದಾಳಿ ನಡೆಸಿದ ಅವರು ಬ್ಯಾಟರ್ಗಳ ಮೇಲೆ ಒತ್ತಡ ಹೇರಿದರು.

ಕರ್ನಾಟಕದ ಸ್ಪಿನ್ನರ್ ಕೆ. ಗೌತಮ್ ಕೂಡ ಎರಡು ವಿಕೆಟ್ ಗಳಿಸಿ ಉತ್ತರಪ್ರದೇಶಕ್ಕೆ ಪೆಟ್ಟು ಕೊಟ್ಟರು. ಆದರೆ, ಉತ್ತರಪ್ರದೇಶ ತಂಡದ ಕೊನೆ ಕ್ರಮಾಂಕದ ಬ್ಯಾಟರ್ ಅಂಕಿತ್ ರಜಪೂತ್ (ಔಟಾಗದೆ 18) ಮತ್ತು ಶಿವಂ ಮಾವಿ (32; 35ಎ) 10ನೇ ವಿಕೆಟ್ ಪಾಲುದಾರಿಕೆಯಲ್ಲಿ 44 ರನ್ ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.