ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜ ಡಾನ್ ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್ ಲೋಕದದಂತಕಥೆಯಾಗಿ ಉಳಿದಿದ್ದಾರೆ.ಮೃತಪಟ್ಟು ಇಂದಿಗೆ ಬರೋಬ್ಬರಿ 19 ವರ್ಷಗಳು ಕಳೆದಿದ್ದರೂದೀರ್ಘ ಮಾದರಿಯ ಕ್ರಿಕೆಟ್ಗೆ ಈಗಲೂ ಅವರೇ ಸಾಮ್ರಾಟ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ಕೂಟಮಂಡ್ರದಲ್ಲಿ 1908ರ ಆಗಸ್ಟ್ 27ರಂದು ಜನಿಸಿದ ಡಾನ್,2001ರ ಫೆಬ್ರುವರಿ 25ರಂದು ತಮ್ಮ 92ನೇ ವಯಸ್ಸಿನಲ್ಲಿ ಸಾವಿಗೀಡಾಗಿದ್ದರು.

1928ರ ನವೆಂಬರ್ 30 ರಂದು ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅವರು,ಅದೇ ತಂಡದ ವಿರುದ್ಧ 1948ರ ಆಗಸ್ಟ್ 14 ರಂದು ವಿದಾಯ ಹೇಳಿದ್ದರು. ಆ ಅವಧಿಯಲ್ಲಿ ಅವರು ಆಡಿದ್ದು ಕೇವಲ 52 ಟೆಸ್ಟ್ಗಳು ಅಷ್ಟೇ. ಆದರೆ, ಅಷ್ಟು ಕಡಿಮೆ ಪಂದ್ಯಗಳಿಂದಲೇ ಅವರು ಬರೆದಿರುವ ಹಲವು ದಾಖಲೆಗಳು ಇನ್ನೂ ಅಜೇಯವಾಗಿ ಉಳಿದಿವೆ.

ಆ ಸಾಧಕ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ 72 ವರ್ಷ ಕಳೆದರೂ, ಅವರ ದಾಖಲೆಗಳನ್ನು ಮುರಿಯಲು ವಿಶ್ವದ ಬೇರಾವ ಬ್ಯಾಟ್ಸ್ಮನ್ಗೆ ಇಂದಿಗೂ ಸಾಧ್ಯವಾಗಿಲ್ಲ ಎಂಬುದು ವಿಶೇಷ.ಅಂತಹ ಪ್ರಮುಖ ಐದು ಸಾಧನೆಗಳ ಕುರಿತ ವಿವರ ಇಲ್ಲಿದೆ.

99.94ರ ಬ್ಯಾಟಿಂಗ್ ಸರಾಸರಿ
52 ಪಂದ್ಯಗಳ 80 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಡಾನ್ ಬರೋಬ್ಬರಿ 99.94ರ ಬ್ಯಾಟಿಂಗ್ ಸರಾಸರಿ6,996 ರನ್ ಕಲೆಹಾಕಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ವೇಳೆ ಡಾನ್ ಬ್ಯಾಟಿಂಗ್ ಸರಾಸರಿ 101.51ರಷ್ಟಿತ್ತು. ಈ ಎರಡೂ ದಾಖಲೆಗಳನ್ನು ಮೀರಲು ಪವಾಡವೇ ನಡೆಯಬೇಕಿದೆ.ಸದ್ಯ ಆಸ್ಟ್ರೇಲಿಯಾ ತಂಡದಲ್ಲಿರುವ ಮಾರ್ನಸ್ ಲಾಬುಶೇನ್ ಮತ್ತು ಸ್ಟೀವ್ ಸ್ಮಿತ್ ಕ್ರಮವಾಗಿ 63.43ನ ಮತ್ತು 62.84ರ ಸರಾಸರಿಯಲ್ಲಿ ರನ್ ಗಳಿಸುತ್ತಿರುವುದು, ಎರಡು ಮತ್ತು ಮೂರನೇ ಶ್ರೇಷ್ಠ ಸರಾಸರಿಯಾಗಿದೆ.

ಇಂಗ್ಲೆಂಡ್ ವಿರುದ್ಧ 5,028 ರನ್
ಇಂಗ್ಲೆಂಡ್ ತಂಡದ ವಿರುದ್ಧ ಒಟ್ಟು 27 ಟೆಸ್ಟ್ ಪಂದ್ಯ ಆಡಿರುವ ಡಾನ್, ಒಟ್ಟು 5,028 ರನ್ ಗಳಿಸಿದ್ದಾರೆ. ಒಂದೇ ತಂಡದ ವಿರುದ್ಧ ಇಷ್ಟು ರನ್ ಗಳಿಸಿದ ಮತ್ತೊಬ್ಬ ಆಟಗಾರ ಇಲ್ಲ. ಇಂಗ್ಲೆಂಡ್ ಆಟಗಾರ ಜಾಕ್ ಹಾಬ್ಸ್ ಹಾಗೂಭಾರತದ ಸಚಿನ್ ತೆಂಡೂಲ್ಕರ್ ಅವರು ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ 3,636 ಮತ್ತು 3,630 ರನ್ ಗಳಿಸಿದ್ದು,ಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದಾರೆ.

ಸದ್ಯದ ಆಟಗಾರರ ಪೈಕಿ ಸ್ಟೀವ್ ಸ್ಮಿತ್ ಇಂಗ್ಲೆಂಡ್ ವಿರುದ್ಧ 2,800ರನ್ ಗಳಿಸಿದ್ದಾರೆ. ಒಂದು ವೇಳೆ ಸ್ಮಿತ್ ಮುಂದಿನ ಮೂರು ವರ್ಷವೂ ಆಷ್ಯಸ್ ಟೂರ್ನಿಯಲ್ಲಿ ಸರಾಸರಿ 700ಕ್ಕಿಂತ ಹೆಚ್ಚು ರನ್ ಗಳಿಸಿದರೂ ಬ್ರಾಡ್ಮನ್ ದಾಖಲೆ ಸರಿಗಟ್ಟಲು ಸಾಧ್ಯವಿಲ್ಲ.

ಒಂದೇ ತಂಡದ ವಿರುದ್ಧ 19 ಶತಕ
ತಂಡವೊಂದರ ವಿರುದ್ಧ ಹೆಚ್ಚು ಶತಕಗಳಿಸಿದ ದಾಖಲೆ ಡಾನ್ ಹೆಸರಲ್ಲಿದೆ.ಇಂಗ್ಲೆಂಡ್ ವಿರುದ್ಧ ಅವರು19 ಶತಕಗಳನ್ನು ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ 13 ಬಾರಿ ಮೂರಂಕಿ ದಾಟಿರುವ ಭಾರತದ ಸುನೀಲ್ ಗವಾಸ್ಕರ್ ಎರಡನೇ ಸ್ಥಾನದಲ್ಲಿದ್ದಾರೆ.ಇಂಗ್ಲೆಂಡ್ ಆಟಗಾರ ಜಾಕ್ ಹಾಬ್ಸ್ ಆಸಿಸ್ ವಿರುದ್ಧ 12 ಸಲ ನೂರರ ಗಡಿ ದಾಟಿದ್ದಾರೆ.

ಸದ್ಯ ಆಡುತ್ತಿರುವ ಆಟಗಾರರ ಪೈಕಿಸ್ಟೀವ್ ಸ್ಮಿತ್ ಇಂಗ್ಲೆಂಡ್ ವಿರುದ್ಧ 11 ಬಾರಿ ಶತಕ ಸಿಡಿಸಿದ್ದಾರೆ. ಡಾನ್ ದಾಖಲೆ ಮುರಿಯಲು ಅವರು ಇನ್ನೂ 9 ಶತಕ ಗಳಿಸಿಕೊಳ್ಳಬೇಕಿದೆ.

ಮಾತ್ರವಲ್ಲದೆ,ಕೇವಲ 52 ಪಂದ್ಯಗಳಲ್ಲೇ 29 ಶತಕ ಸಿಡಿಸಿದ ಸಾಧನೆ ಕೂಡ ಡಾನ್ರದ್ದು. ಅದನ್ನೂಈ ವರೆಗೆ ಯಾರೂ ಮುರಿದಿಲ್ಲ.

ಡಾನ್ ಬ್ರಾಡ್ಮನ್

ಕನಿಷ್ಠ ಸರಾಸರಿ 74.5
ತಾವು ಆಡಿದ ಪ್ರತಿಯೊಂದು ಎದುರಾಳಿ ತಂಡದ ವಿರುದ್ಧವೂ ಕನಿಷ್ಠ 74.5 ರ ಸರಾಸರಿಯಲ್ಲಿ ರನ್ ಗಳಸಿರುವುದು ಡಾನ್ರ ಮತ್ತೊಂದು ಸಾಧನೆ.

ಡಾನ್ಕಾಲಘಟ್ಟದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಷ್ಟೇ ಟೆಸ್ಟ್ ಆಡುತ್ತಿದ್ದವು. ಆದರೆ, ಈಗ ಒಟ್ಟು 12ರಾಷ್ಟ್ರಗಳ ತಂಡಗಳು ಟೆಸ್ಟ್ ಸ್ಥಾನಮಾನ ಪಡೆದಿವೆ. ಎದುರಾಳಿ ತಂಡಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಯಾವುದೇ ಬ್ಯಾಟ್ಸ್ಮನ್ ಎಲ್ಲ ತಂಡಗಳ ವಿರುದ್ಧವೂ ಕನಿಷ್ಠ 75ರ ಸರಾಸರಿಯಲ್ಲಿ ರನ್ ಗಳಿಸುವುದು ಸುಲಭದ ಮಾತಲ್ಲ.

ಹೀಗಾಗಿ ಈದಾಖಲೆ ಟೆಸ್ಟ್ ಕ್ರಿಕೆಟ್ ಇರುವವರೆಗೂ ಡಾನ್ ಹೆಸರಲ್ಲೇ ಉಳಿದುಕೊಳ್ಳಲಿದೆ ಎನ್ನಬಹುದು.

ರನ್ ದಾಹ
ಬ್ಯಾಟಿಂಗ್ ಸರಾಸರಿ, ಶತಕ ಗಳಿಕೆಯ ವಿಚಾರದಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಡಾನ್, ವೇಗವಾಗಿ ಸಹಸ್ರ ರನ್ಗಳ ಶಿಖರ ಕಟ್ಟಿದ ದಾಖಲೆಯನ್ನೂ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಸಾವಿರ ರನ್ ಪೂರೈಸಲು 13 ಇನಿಂಗ್ಸ್ಗಳನ್ನು ತೆಗೆದುಕೊಂಡ ಬ್ರಾಡ್ಮನ್ ವೇಗವಾಗಿ 1 ಸಾವಿರ ರನ್ ಪೂರೈಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ನ ಹೆರ್ಬರ್ ಸಟ್ಕ್ಲಿಫ್ ಹಾಗೂ ವೆಸ್ಟ್ ಇಂಡೀಸ್ನ ಸರ್ ಎವರ್ಟನ್ ವೀಕ್ಸ್ ಕೇವಲ 12 ಇನಿಂಗ್ಸ್ಗಳಲ್ಲೇ 1000 ರನ್ ಕಲೆಹಾಕಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ. ಸಾವಿರ ರನ್ ದಾಟಿದ ಮೇಲೆ ಅದೇ ಸರಾಸರಿಯಲ್ಲಿ ರನ್ ಗಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ, ಬಳಿಕ ರನ್ ವೇಗ ಹೆಚ್ಚಿಸಿಕೊಂಡ ಡಾನ್, ಕ್ರಮವಾಗಿ 2, 3, 4, 5, 6 ಸಾವಿರ ರನ್ಗಳನ್ನು ಕಡಿಮೆ ಇನಿಂಗ್ಸ್ಗಳಲ್ಲಿ ಪೂರೈಸಿದಾಖಲೆ ಬರೆದಿದ್ದಾರೆ.

ಡಾನ್,2000 ರನ್ ಗಳಿಸಲು 22 ಇನಿಂಗ್ಸ್,3000 ರನ್ಗಳಿಸಲು 33 ಇನಿಂಗ್ಸ್,4000 ರನ್ಗಳಿಸಲು 48 ಇನಿಂಗ್ಸ್,5000 ರನ್ಗಳಿಸಲು 56 ಇನಿಂಗ್ಸ್,6000 ರನ್ಗಳಿಸಲು 68 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ. ಈ ದಾಖಲೆಗಳನ್ನು ಸರಿಗಟ್ಟಲು ಈವರೆಗೆ ಯಾರಿಗೂ ಸಾಧ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.