ಬೆಂಗಳೂರು: ಐಪಿಎಲ್ ಕ್ರಿಕೆಟ್ ಕುರಿತು ಕ್ರೀಡಾ ಚಾನಲ್‌ಗಳಲ್ಲಿ ಚರ್ಚೆ ನಡೆಸಲು ಬಂದಿರುವ ಇಂಗ್ಲೆಂಡ್‌ನ ಹಿರಿಯ ಕ್ರಿಕೆಟ್ ಆಟಗಾರ ಮೈಕೆಲ್ ವಾನ್ ಭಾರತದ ರಸ್ತೆಗಳ ಬಗ್ಗೆ ಮಾಡಿರುವ ಟ್ವೀಟ್‌ಗೆ ನೆಟ್ಟಿಗರು ಖಾರವಾಗಿ ಉತ್ತರಿಸಿದ್ದಾರೆ.

‘ಭಾರತದ ರಸ್ತೆಗಳಲ್ಲಿ ಓಡಾಡಲು ಖುಷಿಯಾಗುತ್ತದೆ. ಇಲ್ಲಿ ಹಂದಿ, ಆನೆ, ಒಂಟೆ, ದನ, ಕುರಿ ಎಲ್ಲವೂ ಕಾಣಸಿಗುತ್ತವೆ’ ಎಂದು ಅವರು ಮಂಗಳವಾರ ಟ್ವೀಟ್ ಮಾಡಿದ್ದರು.

ಇದನ್ನು ಟೀಕಿಸಿರುವ ಒಬ್ಬರು ನಿಮ್ಮ ದೇಶದ ಆಟಗಾರರೇ ನಮ್ಮ ರಸ್ತೆಯಲ್ಲಿ ಕಂಡಿರಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅಂದು, 150ಕ್ಕೂ ಹೆಚ್ಚು ವರ್ಷ ಇಲ್ಲಿದ್ದು ನೀವು (ಬ್ರಿಟಿಷರು) ನಮ್ಮನ್ನು ಲೂಟಿ ಮಾಡಿದ್ದೀರಿ. ಈಗಲೂ ದುಡ್ಡು ಮಾಡುವುದಕ್ಕಾಗಿಯೇ ಇಲ್ಲಿಗೆ ಬರುತ್ತಿದ್ದೀರಿ ಮತ್ತೊಬ್ಬರು ಹೇಳಿದ್ದಾರೆ.

ರಸ್ತೆಗಳಲ್ಲಿ ಪ್ರಾಣಿಗಳಿವೆ ಎಂದು ಹೇಳುತ್ತೀರಿ, ಅದೇ ರಸ್ತೆಯಲ್ಲಿ ಓಡಾಡಲು ಖುಷಿಯಾಗುತ್ತಿದೆ ಎಂದೂ ಹೇಳುತ್ತೀರಿ. ಇದರ ಅರ್ಥವೇನು ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.