ನವದೆಹಲಿ: ಭಾರತದಮಾಜಿ ಕ್ರಿಕೆಟಿಗ ಮೊಹಮದ್ ಕೈಫ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ‘ಗಲ್ಲಿ ಕ್ರಿಕೆಟ್’ ವಿಡಿಯೊವೊಂದು ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದು, ವೈರಲ್ ಆಗಿದೆ.

ಪುಟ್ಟ ಮಗುವೊಂದು ಬ್ಯಾಟಿಂಗ್ ಮಾಡುವ ಮತ್ತು ಆತನಿಗೆ ತಾಯಿ ಚೆಂಡು ಎಸೆಯುವ ದೃಶ್ಯಗಳು ವಿಡಿಯೊದಲ್ಲಿದೆ.ಈ ವಿಡಿಯೊ ಹಂಚಿಕೊಂಡಿರುವ ಕೈಫ್, ‘ತಾಯಿಯ ಬೌಲಿಂಗ್, ಮಗುವಿನ ಬ್ಯಾಟಿಂಗ್. ಇದನ್ನು ವರ್ಣಿಸೋಕೆ ಇರೋದು ಒಂದೇ ಪದ, ಅದು ಬ್ಯೂಟಿಫುಲ್’ ಎಂದು ಒಕ್ಕಣಿಸಿದ್ದಾರೆ.

27 ಸೆಕೆಂಡ್ ಇರುವ ಈ ವಿಡಿಯೊ ಬಾಲಕ ಬಾರಿಸುವ ಚೆಂಡನ್ನುತಾಯಿ ಹಿಂಬಾಲಿಸಿ ಹಿಡಿಯುವುದು ಮತ್ತು ಮತ್ತೆಮತ್ತೆ ಬೌಲ್ ಮಾಡುತ್ತಾರೆ. ಜನವರಿ 13ರಂದು ಪ್ರಕಟವಾಗಿರುವ ಈ ವಿಡಿಯೊವನ್ನು ಇದುವರೆಗೆ ಸುಮಾರು 13 ಸಾವಿರಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ. ಒಂದೂವರೆ ಸಾವಿರಕ್ಕೂ ಹೆಚ್ಚಿನವರು ಮರುಹಂಚಿಕೆ ಮಾಡಿದ್ದಾರೆ.

‘ಇದು ಅಮ್ಮನ ಪ್ರೇಮವೆಂದರೆ’, ‘ವರ್ಣಿಸಲು ಪದಗಳೇ ಇಲ್ಲ’, ‘ಅತ್ಯಂತ ಭಾವುಕವಾದ ವಿಡಿಯೊ’, ‘ಒಂದೊಳ್ಳೆ ಸಂದೇಶ ಹಂಚಿಕೊಂಡಿದ್ದೀರಿ’ ಎಂಬಿತ್ಯಾದಿ ಸಂದೇಶಗಳೊಂದಿಗೆ ಕೈಫ್ಗೆ ಧನ್ಯವಾದಗಳ ಮಹಾಪೂರವೇ ಹರಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.