ಬರ್ಮಿಂಗಂ: ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡನಿಗದಿತ 49 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ241 ರನ್ ಗಳಿಸಿದೆ.ಮೈದಾನ ಒದ್ದೆಯಾಗಿದ್ದ ಕಾರಣಪಂದ್ಯ ಆರಂಭ ವಿಳಂಬವಾಯಿತು. ಹೀಗಾಗಿಪಂದ್ಯವನ್ನು1 ಓವರ್ ಕಡಿತಗೊಳಿಸಿ 49 ಓವರ್ಗೆ ಇಳಿಸಲಾಗಿದೆ.

ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಗಾಯಗೊಂಡಿದ್ದವೇಗದ ಬೌಲರ್ ಲುಂಗಿ ಗಿಡಿದಕ್ಷಿಣಆಫ್ರಿಕಾ ತಂಡ ಕೂಡಿಕೊಂಡಿದ್ದರೆ,ನ್ಯೂಜಿಲೆಂಡ್ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಆಡಲಿಳಿದಿದೆ.

ಇಲ್ಲಿವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿಗೆದ್ದು ಆತ್ಮವಿಶ್ವಾಸದಲ್ಲಿರುವ ಕೇನ್ ವಿಲಿಯಮ್ಸ್ ಪಡೆ,ಈ ಪಂದ್ಯವನ್ನೂ ಗೆದ್ದು ಅಗ್ರ ಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ. ಮಳೆಯಿಂದಾಗಿರದ್ದಾಗಿದ್ದ ಒಂದು ಪಂದ್ಯದಲ್ಲಿ ಭಾರತ ಹಾಗೂ ಕಿವೀಸ್ ಪಡೆ ಅಂಕ ಹಂಚಿಕೊಂಡಿದ್ದವು. ಸದ್ಯ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ಮೂರನೇಸ್ಥಾನದಲ್ಲಿದೆ.

ಇತ್ತ ದಕ್ಷಿಣ ಆಫ್ರಿಕ ಪಂದ್ಯ ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ. ಆಡಿರುವಐದರಲ್ಲಿಮೂರು ಪಂದ್ಯ ಸೋತಿರುವ ಪಾಪ್ ಡು ಫ್ಲೆಸಿ ಪಡೆಒಂದೇ ಒಂದು ಪಂದ್ಯ ಗೆದ್ದಿದೆ. ಇನ್ನೊಂದುಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಖಾತೆಯಲ್ಲಿಮೂರು ಅಂಕ ಹೊಂದಿರುವ ಆಫ್ರಿಕಾ ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಆಸರೆಯಾದ ಆಮ್ಲಾ
ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ದಾಂಡಿಗರಾಗಿ ಕ್ವಿಂಟನ್ ಡಿಕಾಕ್(5) ಮತ್ತು ಹಾಶಿಂ ಆಮ್ಲಾ ಕಣಕ್ಕಿಳಿದಿದ್ದರು. 2ನೇ ಓವರ್ ಎಸೆದಟ್ರೆಂಟ್ ಬೌಲ್ಟ್, ಡಿಕಾಕ್ರನ್ನುಪೆವಿಲಿಯನ್ಗೆ ಕಳಿಸಿದರು.ಹಾಶಿಂ ಆಮ್ಲಾ ಫಾರ್ಮ್ನಲ್ಲಿದ್ದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡುಪ್ಲೆಸಿಸ್ ಜತೆ ಉತ್ತಮ ಜೊತೆಯಾಟ ಪ್ರದರ್ಶಿಸಿದರು. 35 ಎಸೆತಗಳಲ್ಲಿ 23 ರನ್ ಗಳಿಸಿ ಆಡುತ್ತಿದ್ದಡುಪ್ಲೆಸಿ14ನೇ ಓವರ್ನಲ್ಲಿ ಲಾಕಿ ಫರ್ಗ್ಯುಸನ್ಗೆ ವಿಕೆಟ್ ಒಪ್ಪಿಸಿದರು.

ನಂತರ ಹಾಶೀಂ ಆಮ್ಲಾ ಅವರಿಗೆ ಜತೆಯಾಗಿದ್ದು ಏಡನ್ ಮರ್ಕರಮ್. ಮರ್ಕರಮ್, ಆಮ್ಲಾಗೆ ಉತ್ತಮ ಸಾಥ್ ನೀಡಿದ್ದು ತಂಡಸ್ಕೋರ್ ಏರಿಸುವಲ್ಲಿ ನೆರವಾದರು. ಅರ್ಧಶತಕ ಬಾರಿಸಿ ಸಂಯಮದ ಬ್ಯಾಟಿಂಗ್ ಮಾಡುತ್ತಿದ್ದ ಆಮ್ಲಾ ಅವರನ್ನು 28ನೇ ಓವರ್ನಲ್ಲಿ ಸ್ಯಾಂಟ್ನರ್ ಪೆವಿಲಿಯನ್ಗಟ್ಟಿದರು. 33ನೇ ಓವರ್ನಲ್ಲಿ ಕಾಲಿನ್ ಡಿ ಗ್ರಾಂಡೋಮ್ ಎಸೆತಕ್ಕೆ ಬ್ಯಾಟ್ ಬೀಸಿದ ಮರ್ಕರಮ್ ಕಾಲಿನ್ ಮನ್ರೊಗೆ ಕ್ಯಾಚಿತ್ತು ಔಟಾದರು.

ಆಮೇಲೆ ಕ್ರೀಸ್ಗಿಳಿದ ರಾಸಿ ವಾನ್ ಡರ್ ಡಸೇನ್ ಮತ್ತು ಡೇವಿಡ್ ಮಿಲ್ಲರ್ ಉತ್ತಮ ಪ್ರದರ್ಶನ ನೀಡಿದರು.ಮಿಲ್ಲರ್ 37 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು. ಬಳಿಕ ಬಂದಪಿಶುವಾಯೊ ಸೊನ್ನೆ ಸುತ್ತಿದರು.47ನೇ ಓವರ್ನಲ್ಲಿ ಬಂದ ಮೋರಿಸ್ 6 ರನ್ ಗಳಿಸಿದರು. ಡಸೇನ್ ಅಜೇಯ 67 ರನ್ ಗಳಿಸಿದರು. ಅಂತಿಮವಾಗಿ ಆಫ್ರಿಕನ್ನರು 6 ವಿಕೆಟ್ ನಷ್ಟಕ್ಕೆ 241ರನ್ ಗಳಿಸಿದರು.

ನ್ಯೂಜಿಲೆಂಡ್ ಪರವಾಗಿ ಬೌಲ್ಟ್ -1, ಫರ್ಗ್ಯುಸನ್ -3, ಕಾಲಿನ್ ಡಿ ಗ್ರಾಂಡೋಮ್ -1 , ಮಿಚೆಲ್ ಸ್ಯಾಂಟ್ನರ್ -1 ವಿಕೆಟ್ ಗಳಿಸಿದ್ದಾರೆ.

ಇದನ್ನೂ ಓದಿ:
*ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ
*ಮೈದಾನ ಒದ್ದೆ: ನ್ಯೂಜಿಲೆಂಡ್- ದಕ್ಷಿಣ ಆಫ್ರಿಕ ಪಂದ್ಯ ವಿಳಂಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.