ನವದೆಹಲಿ: ಭವಿಷ್ಯದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದೇನೆ ಎಂದು ವಿದರ್ಭ ತಂಡದತರಬೇತುದಾರ ಚಂದ್ರಕಾಂತ್ ಪಂಡಿತ್ ಅವರು ತಿಳಿಸಿದ್ದಾರೆ.

ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಆದ ಚಂದ್ರಕಾಂತ್ ಅವರು ತರಬೇತುದಾರರಾದ ಬಳಿಕ ವಿದರ್ಭ ತಂಡ ಎರಡು ಬಾರಿ ರಣಜಿ ಟ್ರೋಫಿ, ನಿರಂತರ ಎರಡು ಸಲ ಇರಾನಿ ಟ್ರೋಫಿ ಗೆದ್ದುಕೊಂಡಿತ್ತು. ಇದಾದ ಬಳಿಕ ಇತರೆ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ಪಾಟೀಲ್ ಅವರಿಗೆ ಕೋಚ್ ಆಗುವಂತೆ ಆಹ್ವಾನ ಬಂದಿತ್ತು.

ವಿದರ್ಭ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳ ಜೊತೆಗೆ ಮಾತನಾಡಲು ನಾಗಪುರಕ್ಕೆ ಬಂದಿದ್ದೇನೆ. ಇನ್ನೆರಡು ದಿನಗಳಲ್ಲಿ ಭವಿಷ್ಯದ ಬಗ್ಗೆ ನಿರ್ಧರಿಸಲಿದ್ದು, ಈ ಬಗ್ಗೆ ಶೀಘ್ರವೇ ಅಂತಿಮ ನಿರ್ಧಾರ ಪ್ರಕಟಿಸುವೆ ಎಂದರು.

ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು ನಿರ್ಧರಿಸಿರುವುದು ಸತ್ಯ. ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.ಕೆಲವು ರಾಜ್ಯ ಸಂಸ್ಥೆಗಳು ನನ್ನ ಸೇವೆ ಬಳಸಿಕೊಳ್ಳಲು ಆಸಕ್ತಿ ತೋರಿವೆ, ಆದರೆ ನಾನು ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.

1986ರಿಂದ 1992ರ ತನಕ ಪಂಡಿತ್ ಅವರು ಭಾರತದ ಪರ ಐದು ಟೆಸ್ಟ್ ಹಾಗೂ 36 ಏಕದಿನ ಪಂದ್ಯಗಳನ್ನು ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.