ಪಿಟಿಐ: ವಿಶ್ವಕಪ್ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ತಂಡದ ಕಳಪೆ ಸಾಧನೆ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ಮುಖ್ಯ ಕೋಚ್ ಮಿಕಿ ಆರ್ಥರ ಹಾಗೂ ನೆರವು ಸಿಬ್ಬಂದಿ ಗ್ರಾಂಟ್ ಬ್ರಾಡ್ಬರ್ನ್ ಮತ್ತು ಆಂಡ್ರ್ಯೂ ಪುಟ್ಟಿಕ್ ಅವರ ಕಾರ್ಯಾವಧಿ ಮುಕ್ತಾಯಗೊಳಿಸಲು ನಿರ್ಧರಿಸಿದೆ.

ಪಿಸಿಬಿ ಅಧ್ಯಕ್ಷ ಝಕಾ ಅಶ್ರಫ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಸೀರ್ ಈ ಮೂವರೊಂದಿಗೆ ಅಂತಿಮ ಮಾತುಕತೆ ನಡೆಸಲಿದ್ದಾರೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಏಷ್ಯಾ ಕಪ್ ಮತ್ತು ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನ ತಂಡದ ನಿರ್ವಹಣೆಯ ಭಾಗವಾಗಿದ್ದ ಈ ಮೂವರು, ಭಾರತದಿಂದ ಲಾಹೋರ್ಗೆ ಮರಳಿದ ನಂತರ ರಜೆ ತೆಗೆದುಕೊಳ್ಳಲು ನಿರ್ಧರಿಸಿದರು. ಅವರ ಸೇವೆಗಳು ಇನ್ನು ಮುಂದೆ ರಾಷ್ಟ್ರೀಯ ತಂಡಕ್ಕೆ ಅಗತ್ಯವಿಲ್ಲ ಎಂದು ತಿಳಿಸಲಾಯಿತು.

‘ಮಿಕ್ಕಿ ಅರ್ಥರ್ ಅವರು ಈಗಾಗಲೇ ಡರ್ಬಿಶೈರ್ ಹಾಗೂ ಪುಟ್ಟಿಕ್ ಮತ್ತು ಬ್ರಾಡ್ಬರಿನ್ ಅವರು ಹೊಸ ಕಾರ್ಯಯೋಜನೆ ಕಂಡುಕೊಂಡಿರುವುದರಿಂದ ಸಮಾಲೋಚನೆ ಬಳಿಕ ಈ ವಿಷಯವನ್ನು ಸೌಹಾರ್ದಯುತವಾಗಿ ಕೊನೆಗೊಳಿಸಲು ಮತ್ತು ಅವರನ್ನು ಅವರ ಒಪ್ಪಂದಗಳಿಂದ ಬಿಡುಗಡೆ ಮಾಡಲು ನಿರ್ಧರಿಸಲಾಯಿತು’ ಎಂದು ಅಧಿಕಾರಿ ಹೇಳಿದರು.

ಮಂಡಳಿಯು ಈ ಮೂವರಿಗೆ ಪರಿಹಾರವಾಗಿ ಕೆಲವು ತಿಂಗಳ ವೇತನವನ್ನು ಪಾವತಿಸಲಿದೆ ಎಂದು ಅವರು ಒಪ್ಪಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.