ನಾರ್ಥಾಂಪ್ಟನ್: ಕಳೆದ ಹಲವು ದಿನಗಳಿಂದ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದ ಭಾರತದ ಪೃಥ್ವಿ ಶಾ ಅವರು ಇಂಗ್ಲೆಂಡ್ನ ಒನ್ ಡೇ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೊಮರ್ಸೆಟ್ ವಿರುದ್ಧ ದ್ಚಿಶತಕ ದಾಖಲಿಸಿದರು.

ಈ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪೃಥ್ವಿ ಶಾ ನಾರ್ಥಾಂಪ್ಟನ್ಶೈರ್ ತಂಡವನ್ನು ಪ್ರತಿನಿಧಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಮುಂಬೈನ ಪೃಥ್ವಿ 153 ಎಸೆತಗಳಲ್ಲಿ 244 ರನ್ ಗಳಿಸಿದರು.

23 ವರ್ಷದ ಪೃಥ್ವಿ ಆಡುತ್ತಿರುವ ಚೊಚ್ಚಲ ಕೌಂಟಿ ಟೂರ್ನಿ ಇದಾಗಿದೆ. 11 ಸಿಕ್ಸರ್ ಮತ್ತು 28 ಬೌಂಡರಿಗಳು ಅದರಲ್ಲಿ ಸೇರಿವೆ. ಲಿಸ್ಟ್ ಎ ಕ್ರಿಕೆಟ್ ನಲ್ಲಿ ಇದು ಅವರ ಎರಡನೇ ದ್ವಿಶತಕ. 2021ರಲ್ಲಿ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪುದುಚೇರಿ ವಿರುದ್ಧ ಅಜೇಯ 227 ರನ್ ಗಳಿಸಿದ್ದರು.

ನಾರ್ಥಾಂಪ್ಟನ್ ಶೈರ್ ತಂಡದ ಪರವಾಗಿ ಅವರು ಆಡಿದ ಮೂರನೇ ಪಂದ್ಯ ಇದು. 81 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟು 129 ಎಸೆತಗಳಲ್ಲಿ ದ್ವಿಶತಕದ ಗಡಿ ಮುಟ್ಟಿದರು.

ನಾರ್ಥಾಂಪ್ಟನ್ಶೈರ್ ಪರವಾಗಿ ಅವರು ಆಡುತ್ತಿರುವ ಮೂರನೇ ಪಂದ್ಯ ಇದಾಗಿದೆ. ತಂಡವು 50 ಓವರ್ಗಳಲ್ಲಿ 8 ವಿಕೆಟ್ಗಳಿಗೆ 415 ರನ್ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.