ಕೊಯಂಬತ್ತೂರು: ತಮಿಳುನಾಡು ನಾಯಕ ಸಾಯಿ ಕಿಶೋರ್ ಅವರ ಐದು ವಿಕೆಟ್ ಗೊಂಚಲು ಪಡೆದು ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಶುಕ್ರವಾರ ಸೌರಾಷ್ಟ್ರ ತಂಡವನ್ನು 183 ರನ್ನಿಗೆ ಉರುಳಿಸಲು ನೆರವಾದರು. ದಿನದ ಕೊನೆಗೆ ಆತಿಥೇಯರು ಒಂದು ವಿಕೆಟ್ಗೆ 23 ರನ್ ಗಳಿಸಿದ್ದರು.

ಒಟ್ಟು 43 ವಿಕೆಟ್ಗಳೊಡನೆ, 27 ವರ್ಷದ ಎಡಗೈ ಸ್ಪಿನ್ನರ್ ಸಾಯಿ ಕಿಶೋರ್ ಈ ರಣಜಿ ಋತುವಿನಲ್ಲಿ ಅತ್ಯಧಿಕ ವಿಕೆಟ್ ಗಳಿಕೆದಾರ ಎನಿಸಿದ್ದಾರೆ.

ಸ್ಕೋರುಗಳು: ಮೊದಲ ಇನಿಂಗ್ಸ್: ಸೌರಾಷ್ಟ್ರ: 77.1 ಓವರುಗಳಲ್ಲಿ 183 (ಹರ್ವಿಕ್ ದೇಸಾಯಿ 83, ಅರ್ಪಿತ್ 25, ಪ್ರೇರಕ್ ಮಂಕಡ್ 35, ಸಾಯಿ ಕಿಶೋರ್ 66ಕ್ಕೆ5, ಅರ್ಪಿತ್ ರಾಮ್ 56ಕ್ಕೆ3, ಸಂದೀಪ್ ವಾರಿಯರ್ 41ಕ್ಕೆ2); ತಮಿಳುನಾಡು: 10 ಓವರುಗಳಲ್ಲಿ 1 ವಿಕೆಟ್ಗೆ 23

ಮಧ್ಯಪ್ರದೇಶಕ್ಕೆ ಲಗಾಮು: ಇಂದೋರ್ನಲ್ಲಿ ಆಂಧ್ರ ವಿರುದ್ಧ ನಡೆಯುತ್ತಿರುವ ಎಂಟರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಮೊದಲ ದಿನದಾಟ ಮುಗಿದಾಗ 9 ವಿಕೆಟ್ಗೆ 234 ರನ್ ಗಳಿಸಿತ್ತು.

ಒಂದು ಹಂತದಲ್ಲಿ 1 ವಿಕೆಟ್ಗೆ 123 ರನ್ ಗಳಿಸಿದ್ದ ಆತಿಥೇಯರು ವೇಗಿಗಳಾದ ಕೆ.ವಿ.ಶಶಿಕಾಂತ್ ಮತ್ತು ನಿತೀಶ್ ಕುಮಾರ್ ರೆಡ್ಡಿ ದಾಳಿಯೆದುರು ಕುಸಿದರು. ಇವರಿಬ್ಬರು ಏಳು ವಿಕೆಟ್ಗಳನ್ನು ತಮ್ಮೊಳಗೆ ಹಂಚಿಕೊಂಡರು.

ಸ್ಕೋರುಗಳು: ಮೊದಲ ಇನಿಂಗ್ಸ್: ಮಧ್ಯಪ್ರದೇಶ: 81 ಓವರುಗಳಲ್ಲಿ 9 ವಿಕೆಟ್ಗೆ 234 (ಯಶ್ ದುಬೆ 64, ಹಿಮಾಂಶು ಮಂತ್ರಿ 49, ಸಾರಾನ್ಷ್ ಜೈನ್ ಬ್ಯಾಟಿಂಗ್ 41, ಕುಮಾರ ಕಾರ್ತಿಕೇಯ 29; ಶಶಿಕಾಂತ್ 37ಕ್ಕೆ4, ನಿತೀಶ್ 50ಕ್ಕೆ3) ವಿರುದ್ಧ ಆಂಧ್ರ.

ಮುಂಬೈ ಚೇತರಿಕೆ: ಬರೋಡಾ ವಿರುದ್ಧ ಮುಂಬೈನಲ್ಲಿ ನಡೆಯುತ್ತಿರುವ ಇನ್ನೊಂದು ಕ್ವಾರ್ಟರ್ಫೈನಲ್ನಲ್ಲಿ ಉದಯೋನ್ಮುಖ ಆಟಗಾರ ಮುಷೀರ್ ಖಾನ್ ಅವರ ಶತಕದ (ಬ್ಯಾಟಿಂಗ್ 128) ನೆರವಿನಿಂದ ಮುಂಬೈ ಮೊದಲ ದಿನದ ಕೊನೆಗೆ 5 ವಿಕೆಟ್ಗೆ 248 ರನ್ ಗಳಿಸಿದೆ.

ಸ್ಕೋರುಗಳು: ಮೊದಲ ಇನಿಂಗ್ಸ್: ಮುಂಬೈ: 90 ಓವರುಗಳಲ್ಲಿ 5 ವಿಕೆಟ್ಗೆ 248 (ಪೃಥ್ವಿ ಶಾ 33, ಮುಷೀರ್ ಖಾಣ್ ಔಟಾಗದೇ 128, ಹಾರ್ದಿಕ್ ತಮೋರೆ ಔಟಾಗದೇ 30; ಭಾರ್ಗವ್ ಭಟ್ 82ಕ್ಕೆ4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.