ನವದೆಹಲಿ: ‘ರೋಹಿತ್ ಶರ್ಮಾ ಅವರು ಏಕದಿನ ಮಾದರಿಯ ವಿಶ್ವ ಶ್ರೇಷ್ಠ ಆರಂಭಿಕ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು’ ಎಂದು ಭಾರತದ ಹಿರಿಯ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಮಂಗಳವಾರ ತಿಳಿಸಿದ್ದಾರೆ.

33 ವರ್ಷ ವಯಸ್ಸಿನ ರೋಹಿತ್ ಏಕದಿನ ಮಾದರಿಯಲ್ಲಿ 29 ಶತಕಗಳನ್ನು ದಾಖಲಿಸಿದ್ದಾರೆ. 11 ಬಾರಿ 140ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಮೂರು ದ್ವಿಶತಕಗಳೂ ಅವರ ಖಾತೆಯಲ್ಲಿವೆ.

‘ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ರೋಹಿತ್ ಅವರು ಅಗ್ರ ಮೂರು ಅಥವಾ ಐದರೊಳಗೆ ಸ್ಥಾನ ಪಡೆಯಬಹುದು. ಅವರು ಪ್ರತಿ ಪಂದ್ಯದಲ್ಲೂ ಶತಕ ಹಾಗೂ ದ್ವಿಶತಕ ಬಾರಿಸಲು ಪ್ರಯತ್ನಿಸುತ್ತಾರೆ. ಅವರ ಆ ಗುಣ ತುಂಬಾ ಇಷ್ಟವಾಗುತ್ತದೆ’ ಎಂದಿದ್ದಾರೆ.

‘ಏಕದಿನ ಮಾದರಿಯಲ್ಲಿ ಬ್ಯಾಟ್ಸ್ಮನ್ ಒಬ್ಬನೇ 150, 180 ಅಥವಾ 200 ರನ್ ಗಳಿಸಿದರೆ ತಂಡದ ಒಟ್ಟು ಮೊತ್ತ ಎಷ್ಟಾಗಬಹುದು. ತಾವು ದೊಡ್ಡ ಮೊತ್ತ ಕಲೆಹಾಕುವ ಮೂಲಕ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸುವಂತೆ ಮಾಡುವ ಸಾಮರ್ಥ್ಯ ರೋಹಿತ್ ಅವರಿಗೆ ಇದೆ’ ಎಂದು 60 ವರ್ಷ ವಯಸ್ಸಿನ ಶ್ರೀಕಾಂತ್ ನುಡಿದಿದ್ದಾರೆ.

ರೋಹಿತ್ ಅವರು ಏಕದಿನ ಮಾದರಿಯಲ್ಲಿ 224 ಪಂದ್ಯಗಳನ್ನು ಆಡಿದ್ದು 9,115ರನ್ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.