ಜೋಹಾನ್ಸ್ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ 191 ರನ್ ಅಂತರದ ಸುಲಭ ಜಯ ಸಾಧಿಸಿತು. ಇದರೊಂದಿಗೆ ಸರಣಿಯನ್ನು 3–1ರಿಂದ ವಶಪಡಿಸಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ನಲ್ಲಿ 400 ರನ್ ಗಳಿಸಿ ಆಲೌಟ್ ಆಗಿತ್ತು. ಈ ಮೊತ್ತದೆದುರು ಫಾಫ್ ಡು ಪ್ಲೆಸಿ ಪಡೆ 183 ರನ್ ಗಳಿಸಿ ಮುಗ್ಗರಿಸಿತ್ತು. ಬಳಿಕ ಇಂಗ್ಲೆಂಡ್ ಎರಡನೇ ಇನಿಂಗ್ಸ್ನಲ್ಲಿ 248 ರನ್ ಗಳಿಸಿ, ಒಟ್ಟಾರೆ 465 ರನ್ಗಳ ಗುರಿ ನೀಡಿತ್ತು.

ಈ ಕಠಿಣ ಗುರಿ ಎದುರು ಆಫ್ರಿಕಾ 274 ರನ್ ಗಳಿಸಿ ಸರ್ವಪತನ ಕಂಡಿತು. ಒಂದು ಹಂತದಲ್ಲಿ ಕೇವಲ 5 ವಿಕೆಟ್ ನಷ್ಟಕ್ಕೆ235 ರನ್ ಗಳಿಸಿ ಆಡುತ್ತಿದ್ದ ಈ ತಂಡ ನಂತರ ದಿಢೀರ್ ಕುಸಿತ ಅನುಭವಿಸಿತು.ಕೊನೆಯಲ್ಲಿ 39 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಹೀಗಾಗಿ ಪಂದ್ಯವು ನಾಲ್ಕನೇದಿನದಲ್ಲೇ ಮುಕ್ತಾಯವಾಯಿತು.

ಮೊದಲ ಇನಿಂಗ್ಸ್ನಲ್ಲಿ ಕ್ವಿಂಟನ್ ಡಿ ಕಾಕ್ (76) ಹಾಗೂ ಎರಡನೇ ಇನಿಂಗ್ಸ್ನಲ್ಲಿರಸ್ಸಿ ವಾನ್ ಡಿ ಡಸ್ಸೆನ್ (98) ಹೊರತುಪಡಿಸಿ ಆತಿಥೇಯ ತಂಡದ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. ಇಂಗ್ಲೆಂಡ್ ಪರ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಪಡೆದಿದ್ದ ಮಾರ್ಕ್ ವುಡ್ ಈ ಬಾರಿ 4 ವಿಕೆಟ್ ಪಡೆದು ಮಿಂಚಿದರು.

ಸರಣಿಯ ಮೊದಲ ಪಂದ್ಯದಲ್ಲಿ ಆಫ್ರಿಕಾ 107 ರನ್ ಜಯ ಸಾಧಿಸಿತ್ತು. ಎರಡು ಮತ್ತು ಮೂರನೇ ಪಂದ್ಯದಲ್ಲಿ ಆಂಗ್ಲರು ಕ್ರಮವಾಗಿ ಇನಿಂಗ್ಸ್ ಹಾಗೂ 53 ರನ್ ಮತ್ತು 191 ರನ್ ಗೆಲುವು ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರು
ಇಂಗ್ಲೆಂಡ್ ಮೊದಲ ಇನಿಂಗ್ಸ್: 98.2 ಓವರ್ಗಳಲ್ಲಿ 400 ರನ್
ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್: 68.3 ಓವರ್ಗಳಲ್ಲಿ 183 ರನ್
ಇಂಗ್ಲೆಂಡ್ ಎರಡನೇ ಇನಿಂಗ್ಸ್: 61.3 ಓವರ್ಗಳಲ್ಲಿ 248
ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್: 77.1 ಓವರ್ಗಳಲ್ಲಿ 274

ಫಲಿತಾಂಶ ಇಂಗ್ಲೆಂಡ್ಗೆ 191 ರನ್ ಜಯ
ಪಂದ್ಯಶ್ರೇಷ್ಠ:ಮಾರ್ಕ್ ವುಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.