ಜೋಹಾನ್ಸ್ಬರ್ಗ್:ಸ್ತನ ಕ್ಯಾನ್ಸರ್ ಜಾಗೃತಿ ಹಾಗೂ ಹಣ ಸಂಗ್ರಹಿಸುವ ಸಲುವಾಗಿ ದಕ್ಷಿಣ ಆಫ್ರಿಕಾ ತಂಡದೊಂದಿಗೆ ಕೈ ಜೋಡಿಸಲಿರುವ ಇಂಗ್ಲೆಂಡ್ ತಂಡ, ಏಕದಿನ ಸರಣಿಯಮೂರನೇ ಪಂದ್ಯದ ವೇಳೆ ಪಿಂಕ್ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ.ಈ ಪಂದ್ಯವು ಭಾನುವಾರ ಇಲ್ಲಿನ ವಾಂಡೆರರ್ಸ್ ಮೈದಾನದಲ್ಲಿ ನಡೆಯಲಿದೆ.

ಆಫ್ರಿಕಾ ತಂಡ ತವರಿನಲ್ಲಿ ನಡೆಯುವ ಸರಣಿ ವೇಳೆ ಧತ್ತಿ ಹಣ ಸಂಗ್ರಹಿಸುವ ಸಲುವಾಗಿ ಇದುವರೆಗೆ ಎಂಟು ಬಾರಿ ಪಿಂಕ್ ಜೆರ್ಸಿ ತೊಟ್ಟು ಕಣಕ್ಕಿಳಿದಿದೆ. ಭಾನುವಾರ 9ನೇ ಸಲ ‘ಪಿಂಕ್ ಪಂದ್ಯ’ ಆಡಲಿದೆ. ಆದರೆ, ಎದುರಾಳಿ ತಂಡದ ಆಟಗಾರರು ಪಿಂಕ್ ಧರಿಸುತ್ತಿರುವುದು ಇದೇ ಮೊದಲು.

ಇದರಿಂದ ಬರುವ ಹಣವನ್ನು ಇಲ್ಲಿನ ಚಾರ್ಲೆಟ್ ಮ್ಯಾಕ್ಸೆಕೆ ಅಕಾಡೆಮಿ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ಘಟಕಕ್ಕೆ ನೀಡಲಾಗುತ್ತದೆ.

‘ಕಳೆದ ನಾಲ್ಕು ವರ್ಷಗಳಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಪಿಂಕ್ ಕಿಟ್ ಹಾಗೂ ಜೆರ್ಸಿಗಳನ್ನು ಸರಬರಾಜು ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ. ಇದೇ ಮೊದಲ ಬಾರಿಗೆ ಎರಡೂ ತಂಡಕ್ಕೆ ಜೆರ್ಸಿ ಕಳುಹಿಸಿಕೊಡುತ್ತಿರುವುದು ವಿಶೇಷ ಎನಿಸುತ್ತಿದೆ’ ಎಂದು ನ್ಯೂ ಬ್ಯಾಲೆನ್ಸ್ ಸಂಸ್ಥೆಯ ಮುಖ್ಯಸ್ಥ ಲಿಯಾಮ್ ಬರ್ನ್ ಹೇಳಿದ್ದಾರೆ.

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯ ಮಳಿಗೆಗಳಲ್ಲಿ ನಾಳೆಯಿಂದಪಿಂಕ್ ಕಿಟ್ಗಳು ಲಭ್ಯವಿರಲಿದ್ದು, ಅಭಿಮಾನಿಗಳು ಖರೀದಿಸಬಹುದಾಗಿದೆ.

ಮೂರು ಪಂದ್ಯಗಳ ಸರಣಿಯಲ್ಲಿ ಸದ್ಯ ಆಫ್ರಿಕಾ 1–0 ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯವು ಡರ್ಬನ್ನ ಕಿಂಗ್ಸ್ಮೇಡ್ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.