ಲಂಡನ್: ಉದ್ವೇಗದ ಸಮಸ್ಯೆಯಿಂದ ಇಂಗ್ಲೆಂಡ್ ಮಹಿಳಾ ತಂಡದ ವಿಕೆಟ್ ಕೀಪರ್ ಸಾರಾ ಟೇಲರ್, ಅಂತರರಾಷ್ಟ್ರೀಯ ಕ್ರಿಕೆಟ್ಗೆ ಶುಕ್ರವಾರ ವಿದಾಯ ಹೇಳಿದ್ದಾರೆ.

2006ರಲ್ಲಿ ಇಂಗ್ಲೆಂಡ್ ತಂಡಕ್ಕೆ ಪದಾರ್ಪಣೆ ಮಾಡಿದ್ದ 30 ವರ್ಷದ ಸಾರಾ, ಮೂರೂ ಮಾದರಿಯಲ್ಲಿ ಒಟ್ಟು 226 ಪಂದ್ಯಗಳನ್ನು ಆಡಿದ್ದಾರೆ. ವಿಶ್ವದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿದ ಆಟಗಾರ್ತಿರಯರಲ್ಲಿ ಒಬ್ಬರೆನಿಸಿದ್ದಾರೆ. ಇವುಗಳಲ್ಲಿ 6,533 ರನ್ ಕಲೆಹಾಕಿದ್ಧಾರೆ. ಅವರು ಅತ್ಯಧಿಕ ರನ್ ಗಳಿಸಿದ ಇಂಗ್ಲೆಂಡ್ ಆಟಗಾರ್ತಿಯರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಸಾರಾ ಅವರ ವ್ಯಾಕುಲಚಿತ್ತದ ಸಮಸ್ಯೆಯಿಂದ ಅವರ ಆಟದ ಮೇಲೆ ಪರಿಣಾಮ ಆಗುತಿತ್ತು ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ತಿಳಿಸಿದೆ. ‘ಇದು ಕಠಿಣ ನಿರ್ಧಾರ. ಆದರೆ ಸಕಾಲದಲ್ಲಿ ಆಗಿದೆ’ ಎಂದಿದ್ದಾರೆ ಸಾರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.