ಬೆಂಗಳೂರು: ಭರ್ಜರಿ ಬ್ಯಾಟಿಂಗ್ ಮತ್ತು ಚುರುಕಿನ ವಿಕೆಟ್ ಕೀಪಿಂಗ್‌ಗೆ ಹೆಸರಾಗಿದ್ದ ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸಾರಾ ಟೇಲರ್ ಬೆತ್ತಲೆಯಾಗಿ ವಿಕೆಟ್ ಕೀಪಿಂಗ್ ಮಾಡಿ ಸುದ್ದಿಯಾಗಿದ್ದಾರೆ.

ಈ ಚಿತ್ರವನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಚಿತ್ರ ತೆಗೆದದ್ದು ಕ್ರೀಡಾಂಗಣದಲ್ಲಿ ಅಲ್ಲ; ಸ್ಟುಡಿಯೊದಲ್ಲಿ!

ವಿಮೆನ್ ಹೆಲ್ತ್ ಯುಕೆ ಎಂಬ ಆರೋಗ್ಯ ಪತ್ರಿಕೆಗಾಗಿ ಈ ರೀತಿ ಚಿತ್ರ ತೆಗೆಸಿಕೊಂಡಿರುವುದಾಗಿ ತಿಳಿಸಿರುವ ಸಾರಾ ‘ಚಿತ್ರ ತೆಗೆಯುವಾಗ ಸ್ವಲ್ಪ ಗಾಬರಿಯಾಗಿದ್ದೆ. ಆದರೆ ಈಗ ಸದುದ್ದೇಶವೊಂದಕ್ಕಾಗಿ ಈ ಕಾರ್ಯವನ್ನು ಮಾಡಿದ್ದಕ್ಕೆ ಸಾರ್ಥಕ ಭಾವ ಮೂಡಿದೆ’ ಎಂದಿದ್ದಾರೆ.

ಇತ್ತೀಚೆಗೆ ಕೆಲವು ಮಾನಸಿಕ ಸಮಸ್ಯೆಗಳಿಗೆ ಒಳಗಾಗಿದ್ದ ಸಾರಾ ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದರು. ಆಸ್ಟ್ರೇಲಿಯಾ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಆಡದೇ ಇರಲು ಖುದ್ದು ನಿರ್ಧರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.