ಸೌತಾಂಪ್ಟನ್:ಭಾರತ ಎದುರುಇಲ್ಲಿನ‘ದ ರೋಸ್ ಬಾಲ್’ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತ ಅನುಭವಿಸಿದೆ.

ಕ್ವಿಂಟನ್ ಡಿ ಕಾಕ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಹಾಶೀಂ ಆಮ್ಲಾ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನಿಂಗ್ಸ್ನ ನಾಲ್ಕನೇ ಓವರ್ ಎಸೆದವೇಗಿ ಜಸ್ಪ್ರೀತ್ ಬೂಮ್ರಾ ಆಮ್ಲಾ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು.

ಬೂಮ್ರಾ ದಾಳಿಯನ್ನು ಸಮರ್ಥವಾಗಿ ಎದುರಿಸಲು ವಿಫಲವಾದ ಡಿ ಕಾಕ್(10) ಅವರೂ ಆಮ್ಲಾ ಹಾದಿಯಲ್ಲೇ ವಾಪಸ್ ಆದರು. ಆಮ್ಲಾ ಭಾರತ ತಂಡದಉಪನಾಯಕ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿದರೆ, ಡಿ ಕಾಕ್ ನಾಯಕ ವಿರಾಟ್ ಕೊಹ್ಲಿ ಕೈ ಗಿತ್ತರು.

ಸದ್ಯ ಆಫ್ರಿಕಾ ತಂಡ 7 ಓವರ್ಗಳ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 30 ರನ್ ಗಳಿಸಿದೆ. ನಾಯಕ ಫಾಫ್ ಡುಪ್ಲೆಸಿ ಹಾಗೂರಸಿ ವ್ಯಾನ್ ಡರ್ ಡಸೆನ್ ಕ್ರಮವಾಗಿ 11 ಮತ್ತು 2 ರನ್ ಗಳಿಸಿ ಆಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.